ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025 Suspended: ಉಳಿದ ಐಪಿಎಲ್‌ ಪಂದ್ಯ ನಡೆಸಲು ಬಿಸಿಸಿಐ ಮುಂದಿರುವ ಆಯ್ಕೆಗಳೇನು?

ಜೂನ್‌ ಮತ್ತು ಜುಲೈನಲ್ಲಿ ಅಸಾಧ್ಯವೆನಿಸಿದೆ. ಏಕೆಂದರೆ ಈಗಾಗಲೇ ಪೂರ್ವ ನಿಗದಿಯಾದಂತೆ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಆಡಲಿದೆ. ಜೂನ್ 20 ರಂದು ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಇತ್ತಂಡಗಳ ನಡುವಿನ ಆರಂಭಿಕ ಟೆಸ್ಟ್‌ನೊಂದಿಗೆ ಸರಣಿ ಆರಂಭವಾಗಲಿದೆ. ಜುಲೈ ಅಂತ್ಯದ ವರೆಗೆ ಸರಣಿ ನಡೆಯಲಿದೆ.

ಉಳಿದ ಐಪಿಎಲ್‌ ಪಂದ್ಯ ನಡೆಸಲು ಬಿಸಿಸಿಐ ಮುಂದಿರುವ ಆಯ್ಕೆಗಳೇನು?

Profile Abhilash BC May 9, 2025 3:43 PM

ನವದೆಹಲಿ: ಭಾರತ-ಪಾಕ್‌ ನಡುವೆ ಉದ್ವಿಗ್ನತೆ(India-Pakistan Tensions) ತಾರಕಕ್ಕೇರಿರುವ ಕಾರಣ, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) 18ನೇ ಆವೃತ್ತಿಯ ಟಿ20 ಕ್ರಿಕೆಟ್ ಟೂರ್ನಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಒಂದು ವಾರ ಅಮಾನತುಗೊಳಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಶುಕ್ರವಾರ ಮಧ್ಯಾಹ್ನ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ದೃಢಪಡಿಸಿದ್ದಾರೆ. 12 ಲೀಗ್ ಪಂದ್ಯಗಳು ಮತ್ತು ನಾಲ್ಕು ನಾಕೌಟ್ ಪಂದ್ಯಗಳು ಉಳಿದಿವೆ.

ಕೋವಿಡ್ ಭೀಕರ ಕಾಲಘಟ್ಟದಲ್ಲಿಯೂ, ದೇಶದಲ್ಲಿ ಯಾವುದೇ ಪ್ರತಿಕೂಲ ಸನ್ನಿವೇಶವಿದ್ದರೂ ಐಪಿಎಲ್‌ ಆಯೋಜಿಸುವುದನ್ನು ಮಾತ್ರ ಬಿಸಿಸಿಐ ನಿಲ್ಲಿಸಿರಲಿಲ್ಲ. ಕೊರೊನಾದಿಂದ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದ್ದ ದ್ವಿತೀಯಾರ್ಧದ ಪಂದ್ಯಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ(ಯುಎಇ) ನಡೆಸಿತ್ತು. ಅದರಂತೆ ಇದೀಗ ಭಾರತ-ಪಾಕ್‌ ಯುದ್ಧದ ಭೀತಿಯಿಂದ ಅರ್ಧಕ್ಕೆ ನಿಂತಿರುವ ಟೂರ್ನಿಯನ್ನು ನಡೆಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

ಯಾವಾಗ ನಡೆಯುತ್ತೆ ಐಪಿಎಲ್‌?

ಬಾಂಗ್ಲಾದೇಶ ಜತೆಗಿನ ಭಾರತದ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಹಾಲಿ ವರ್ಷದ ಏಷ್ಯಾಕಪ್​ ಕ್ರಿಕೆಟ್​ ಟೂರ್ನಿ ರದ್ದುಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಏಷ್ಯಾಕಪ್ ಟೂರ್ನಿ ವೇಳಾಪಟ್ಟಿಯಂತೆ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ. ಇನ್ನೊಂದೆಡೆ ಆಗಸ್ಟ್​ನಲ್ಲಿ ಬಾಂಗ್ಲಾ ವಿರುದ್ಧ ನಿಗದಿಯಾಗಿರುವ ತಲಾ 3 ಏಕದಿನ, ಟಿ20 ಪಂದ್ಯಗಳ ಬಾಂಗ್ಲಾ ಪ್ರವಾಸಕ್ಕೆ ಭಾರತ ತಂಡವನ್ನು ಬಿಸಿಸಿಐ ಕಳುಹಿಸಿರುವುದು ಅನುಮಾನವೆನಿಸಿದೆ. ಹೀಗಾಗಿ ಬಿಸಿಸಿಐ ಮುಂದೆ ಆಗಸ್ಟ್-ಸೆಪ್ಟೆಂಬರ್ ತಿಂಗಳ ಆಯ್ಕೆ ಇದೆ. ಆದರೆ ವಿದೇಶಿ ಆಟಗಾರರ ಲಭ್ಯತೆ ಮತ್ತು ಇತರ ಕ್ರಿಕೆಟ್ ಮಂಡಳಿಗಳ ಸಹಕಾರವನ್ನು ಕೂಡ ಅವಲಂಬಿಸಿರುತ್ತದೆ.

ಜೂನ್‌ ಮತ್ತು ಜುಲೈನಲ್ಲಿ ಅಸಾಧ್ಯವೆನಿಸಿದೆ. ಏಕೆಂದರೆ ಈಗಾಗಲೇ ಪೂರ್ವ ನಿಗದಿಯಾದಂತೆ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಆಡಲಿದೆ. ಜೂನ್ 20 ರಂದು ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಇತ್ತಂಡಗಳ ನಡುವಿನ ಆರಂಭಿಕ ಟೆಸ್ಟ್‌ನೊಂದಿಗೆ ಸರಣಿ ಆರಂಭವಾಗಲಿದೆ. ಜುಲೈ ಅಂತ್ಯದ ವರೆಗೆ ಸರಣಿ ನಡೆಯಲಿದೆ.

ಇನ್ನೊಂದು ಆಯ್ಕೆ ಎಂದರೆ ಆಟಗಾರರ ಸುರಕ್ಷತೆ ಮತ್ತು ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು, ಬಿಸಿಸಿಐ ಉಳಿದ ಪಂದ್ಯಗಳನ್ನು ವಿದೇಶಕ್ಕೆ ಸ್ಥಳಾಂತರಿಸುವ ಆಯ್ಕೆ ಇದೆ. ಆಗ ಯುಎಇ ಅಥವಾ ದಕ್ಷಿಣ ಆಫ್ರಿಕಾದಲ್ಲಿ ಪಂದ್ಯ ನಡೆಯಬಹುದು. ಇವೆರಡೂ ತಾಣಗಳಲ್ಲಿ ಈ ಹಿಂದೆ ಯಶಸ್ವಿ ಆವೃತ್ತಿಗಳನ್ನು ಆಯೋಜಿಸಲಾಗಿತ್ತು. ಆದರೆ ಸದ್ಯ ದೇಶ ಯುದ್ಧದ ಭೀತಿಯಲ್ಲಿರುವಾಗ ದೇಶಕ್ಕಿಂತ ಪಂದ್ಯಗಳನ್ನು ನಡೆಸಲು ಬಿಸಿಸಿಐ ಮುಂದಾಗುವಂತೆ ಕಾಣುತ್ತಿಲ್ಲ.

ಇದನ್ನೂ ಓದಿ IPL 2025 Suspended: 'ದೇಶ ಮೊದಲು'; ಐಪಿಎಲ್‌ ಟೂರ್ನಿ ರದ್ದುಗೊಳಿಸಿದ ಬಿಸಿಸಿಐ!