ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಧೋನಿ ಚೇತರಿಕೆಯ ಹಾದಿಯಲ್ಲಿದ್ದಾರೆ, ಮ್ಹಾತ್ರೆ ಬದಲಿಗೆ ತುರ್ತು ಆಯ್ಕೆ ಇಲ್ಲ; ಸಿಎಸ್‌ಕೆ ಕೋಚ್ ಫ್ಲೆಮಿಂಗ್

IPL 2026: 3ನೇ ಕ್ರಮಾಂಕದಲ್ಲಿ ಅಮೂಲ್ಯ ರನ್ ಗಳಿಸುತ್ತಿದ್ದ ಆಯುಷ್ ಮ್ಹಾತ್ರೆ, ಏಪ್ರಿಲ್ 18 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ಸಮಯದಲ್ಲಿ ಮಂಡಿರಜ್ಜು ಗಾಯಕ್ಕೆ ತುತ್ತಾಗಿ ಟೂರ್ನಿಯಿಂದ ಹೊರಬಿದ್ದರು. ಅವರ ಸ್ಥಾನಕ್ಕೆ ಬದಲಿ ಆಟಗಾರ ಆಯ್ಕೆ ಸದ್ಯಕ್ಕಿಲ್ಲ ಎಂದು ಫ್ಲೆಮಿಂಗ್‌ ತಿಳಿಸಿದರು.

ಧೋನಿ ಚೇತರಿಕೆಯ ಬಗ್ಗೆ ಮಹತ್ವದ ಮಾಹಿತಿ ನೀಡಿದ ಮುಖ್ಯ ಕೋಚ್‌

MS Dhoni -

Abhilash BC
Abhilash BC Apr 26, 2026 1:49 PM

ಚೆನ್ನೈ, ಎ.26: ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ(MS Dhoni) ಅವರ ಬಹುನಿರೀಕ್ಷಿತ ಮರಳುವಿಕೆಗಾಗಿ ತವರಿನ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಧೋನಿ ಕಮ್‌ಬ್ಯಾಕ್‌ ನಿರೀಕ್ಷೆಯಲ್ಲಿರುವ ಅಭಿಮಾನಿಗಳಿಗೆ ತಂಡ ಮುಖ್ಯ ಕೋಚ್‌ ಸ್ಟೀಫನ್ ಫ್ಲೆಮಿಂಗ್(Stephen Fleming) ಅಪ್‌ಡೇಟ್‌ ಒಂದನ್ನು ನೀಡಿದ್ದಾರೆ.

ಭಾನುವಾರ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧದ ಪಂದ್ಯಕ್ಕೂ ಮುನ್ನ ಮಾಧ್ಯಮಗಳಿಗೆ ಮಾಹಿತಿ ನೀಡಿದ ಫ್ಲೆಮಿಂಗ್‌, "ಧೋನಿ ಚೆನ್ನಾಗಿ ಪ್ರಗತಿ ಸಾಧಿಸುತ್ತಿದ್ದಾರೆ. ಅವರು ಚೇತರಿಕೆಯ ಹಾದಿಯಲ್ಲಿದ್ದಾರೆ" ಎಂದು ಹೇಳಿದರು. ವಿಕೆಟ್ ಕೀಪರ್-ಬ್ಯಾಟರ್ ಪ್ರಸ್ತುತ ಕಾಲಿನ ನೋವಿನಿಂದಾಗಿ ಪುನರ್ವಸತಿಗೆ ಒಳಗಾಗುತ್ತಿದ್ದಾರೆ.

3ನೇ ಕ್ರಮಾಂಕದಲ್ಲಿ ಅಮೂಲ್ಯ ರನ್ ಗಳಿಸುತ್ತಿದ್ದ ಆಯುಷ್ ಮ್ಹಾತ್ರೆ, ಏಪ್ರಿಲ್ 18 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ಸಮಯದಲ್ಲಿ ಮಂಡಿರಜ್ಜು ಗಾಯಕ್ಕೆ ತುತ್ತಾಗಿ ಟೂರ್ನಿಯಿಂದ ಹೊರಬಿದ್ದರು. ಅವರ ಸ್ಥಾನಕ್ಕೆ ಬದಲಿ ಆಟಗಾರ ಆಯ್ಕೆ ಸದ್ಯಕ್ಕಿಲ್ಲ ಎಂದು ಫ್ಲೆಮಿಂಗ್‌ ತಿಳಿಸಿದರು.

ಮ್ಹಾತ್ರೆ ಸ್ಥಾನಕ್ಕೆ ಬದಲಿಯಾಗಿ ಉರ್ವಿಲ್ ಪಟೇಲ್ ಕೇಳಿಬಂದಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಫ್ಲೆಮಿಂಗ್‌, 'ಉರ್ವಿಲ್‌ ಕೂಡ ಉತ್ತಮ ಗುಣಮಟ್ಟದ ಆಟಗಾರ. ಆದರೆ ನಾವು ಉನ್ನತ ಸ್ಥಾನದಲ್ಲಿ ಕೆಲವು ಗುಣಮಟ್ಟದ ಆಕ್ರಮಣಕಾರಿ ಆಟಗಾರರನ್ನು ಹೊಂದಿದ್ದೇವೆ, ಆದ್ದರಿಂದ ಬದಲಿ ಆಟಗಾರನನ್ನು ಪಡೆಯುವ ತುರ್ತು ಅಗತ್ಯವಿಲ್ಲ. ನಾವು ಬದಲಿ ಆಟಗಾರನ ಹುಡುಕುತ್ತಿದ್ದೇವೆ, ಆದರೆ ಈ ಹಂತದಲ್ಲಿ ನಾವು ಆತುರಪಡುವ ಅಗತ್ಯವಿಲ್ಲ" ಎಂದರು.

DC vs RCB: ತವರಿನ ಸೋಲಿಗೆ ಸೇಡು ತೀರಿಸಿಕೊಂಡೀತೇ ಆರ್‌ಸಿಬಿ?; ಡೆಲ್ಲಿ​ ಎದುರಾಳಿ

ಮುಂಬೈ ಇಂಡಿಯನ್ಸ್ ವಿರುದ್ಧದ ಸಿಎಸ್‌ಕೆ ಕೊನೆಯ ಪಂದ್ಯದಲ್ಲಿ ಸರ್ಫರಾಜ್ ಖಾನ್ ಅವರನ್ನು ಮೂರನೇ ಸ್ಥಾನಕ್ಕೆ ಬಡ್ತಿ ನೀಡಲಾಗಿತ್ತು. ಏಳು ಪಂದ್ಯಗಳಿಂದ ಮೂರು ಗೆಲುವುಗಳು, ನಾಲ್ಕು ಸೋಲುಗಳು ಮತ್ತು ಆರು ಅಂಕಗಳೊಂದಿಗೆ, ಸಿಎಸ್‌ಕೆ ಐದನೇ ಸ್ಥಾನದಲ್ಲಿದೆ.

ಕಳಪೆ ಬ್ಯಾಟಿಂಗ್‌ನಿಂದ ಟೀಕೆ ಎದುರಿಸುತ್ತಿರುವ ನಾಯಕ ಋತುರಾಜ್‌ ಗಾಯಕ್ವಾಡ್‌ಗೆ ಕೋಚ್‌ ಫ್ಲೆಮಿಂಗ್‌ ಬೆಂಬಲ ಸೂಚಿಸಿದ್ದಾರೆ. "ಅವರು(ಗಾಯಕ್ವಾಡ್) ಒಬ್ಬ ಉತ್ತಮ ಆಟಗಾರ ಮತ್ತು ಯುವ ನಾಯಕ, ಅವರು ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಉತ್ತಮ ಕೆಲಸ ಮಾಡುತ್ತಿದ್ದಾರೆ. ಹೊರಗಿನಿಂದ ಅವರ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ ಎಂದು ನನಗೆ ತಿಳಿದಿದೆ. ಆದರೆ ತಂಡದ ಒಳಗೆ, ಅವರಿಗೆ ಸಾಕಷ್ಟು ಬೆಂಬಲ ಸಿಗುತ್ತಿದೆ ಮತ್ತು ತಂಡದಲ್ಲಿ ಅವರಿಗೆ ಉತ್ತಮ ಗೌರವವಿದೆ. ಅದು ಮುಂದುವರಿಯುತ್ತದೆ" ಎಂದು ಅವರು ಹೇಳಿದರು.