ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗುಜರಾತ್‌ ಪಂದ್ಯಕ್ಕೂ ಮುನ್ನ ರಾಜಸ್ಥಾನ್‌ ಆಟಗಾರರನ್ನು ಭೇಟಿಯಾದ ನೂತನ ಮಾಲೀಕ ಲಕ್ಷ್ಮಿ ಮಿತ್ತಲ್

IPL 2026: ಒಪ್ಪಂದ ಪ್ರಕಾರ ಮಿತ್ತಲ್ ಕುಟುಂಬವು ರಾಜಸ್ಥಾನ ರಾಯಲ್ಸ್‌ನ ಅಂದಾಜು ಶೇ 75ರಷ್ಟು ಪಾಲು ಪಡೆಯಲಿದೆ. ಅದಾರ್ ಪೂನಾವಾಲಾ ಅವರು ಶೇ 18 ರಷ್ಟು ಪಾಲು ಪಡೆಯಲಿದ್ದಾರೆ. ಉಳಿದ ಶೇ 7ರಷ್ಟು ಪಾಲನ್ನು ಹಿಂದಿನ ಆಡಳಿತ ಮಂಡಳಿಯಲ್ಲಿದ್ದ ಮನೋಜ್ ಬದಾಲೆ ಮತ್ತು ಇತರ ಹೂಡಿಕೆದಾರರು ಹೊಂದಲಿದ್ದಾರೆ.

ರಾಜಸ್ಥಾನ್‌ ತಂಡವನ್ನು ಭೇಟಿಯಾದ ನೂತನ ಮಾಲೀಕ ಲಕ್ಷ್ಮಿ ಮಿತ್ತಲ್

Mittal met with the team before the GT clash -

Abhilash BC
Abhilash BC May 9, 2026 10:36 AM

ಜೈಪುರ, ಮೇ 9: ಇಂದು(ಶನಿವಾರ) ನಡೆಯುವ ರಾಜಸ್ಥಾನ್ ರಾಯಲ್ಸ್(Rajasthan Royals) ಮತ್ತು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕೆ ಮುನ್ನ, ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ರಾಜಸ್ಥಾನ್‌ ಫ್ರಾಂಚೈಸಿಯ ಹೊಸ ಮಾಲೀಕ ಲಕ್ಷ್ಮಿ ಎನ್. ಮಿತ್ತಲ್(Lakshmi Mittal) ತಂಡವನ್ನು ಭೇಟಿಯಾದರು. ತಂಡದ ನಾಯಕ ರಿಯಾನ್ ಪರಾಗ್ ಮತ್ತು ಯಶಸ್ವಿ ಜೈಸ್ವಾಲ್ ಅವರೊಂದಿಗೆ ದೀರ್ಘ ಮಾತುಕತೆ ನಡೆಸಿದರು.

ಇತ್ತೀಚೆಗಷ್ಟೇ ಉದ್ಯಮಿ ಲಕ್ಷ್ಮಿ ಎನ್‌.ಮಿತ್ತಲ್ ಮತ್ತು ಅವರ ಪುತ್ರ ಆದಿತ್ಯ ಮಿತ್ತಲ್ ಅವರು ಉದ್ಯಮಿ ಅದಾರ್ ಪೂನಾವಾಲಾ ಜೊತೆಗೂಡಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಬಹುಪಾಲು ಷೇರನ್ನು ಖರೀದಿಸಿದ್ದಾರೆ. ಸುಮಾರು ₹15,600 ಕೋಟಿ ಮೊತ್ತಕ್ಕೆ ಈ ಷೇರುಗಳನ್ನು ಖರೀದಿ ಮಾಡಿತ್ತು. ಈ ಹಿಂದೆ ಅತ್ಯಧಿಕ ಮೊತ್ತದ ಬಿಡ್‌ ಸಲ್ಲಿಸಿದ್ದ ಕಲ್ ಸೊಮಾನಿ– ರಾಬ್‌ ವಾಲ್ಟನ್‌– ಶೀಲಾ ಫೋರ್ಡ್‌ ಹ್ಯಾಂಪ್ ಕನ್ಸೋರ್ಷಿಯಂ (ಕಂಪನಿಗಳ ಒಕ್ಕೂಟ) ಖರೀದಿ ರೇಸ್‌ನಿಂದ ಹಿಂದೆಸರಿದ ಕಾರಣ ಮಿತ್ತಲ್ ಸಮೂಹ ಫ್ರಾಂಚೈಸಿಯನ್ನು ಖರೀದಿ ಮಾಡಿತು.

ಈ ಹಿಂದೆ ಕಲ್‌ ಸೊಮಾನಿ ನೇತೃತ್ವದಲ್ಲಿ ಅಮೆರಿಕದ ಮೂಲದ ಕಂಪನಿಗಳ ಒಕ್ಕೂಟವು ಸುಮಾರು ₹15,470 ಕೋಟಿ ಮೊತ್ತಕ್ಕೆ ಖರೀದಿಗೆ ಮುಂದಾಗಿತ್ತು. ಆದರೆ ವಿವಿಧ ಕಾರಣಗಳಿಂದ ಈ ಬಿಡ್‌ ಮುರಿದುಬಿದ್ದಿತು.

ರಾಜಸ್ಥಾನ ರಾಯಲ್ಸ್ (ಪುರುಷರ ಫ್ರಾಂಚೈಸಿ), ಪಾರ್ಲ್‌ ರಾಯಲ್ಸ್‌ (ದಕ್ಷಿಣ ಆಫ್ರಿಕಾ ಲೀಗ್), ಬಾರ್ಬಾಡೋಸ್ ರಾಯಲ್ಸ್ (ಕೆರೀಬಿಯನ್‌ ಲೀಗ್) ಖರೀದಿ ಒಪ್ಪಂದದ ವ್ಯಾಪ್ತಿಯಲ್ಲಿ ಬರಲಿದೆ. ಈ ಒಪ್ಪಂದಕ್ಕೆ ಬಿಸಿಸಿಐ, ಸಿಸಿಐ ಮತ್ತು ಐಪಿಎಲ್‌ ಆಡಳಿತ ಮಂಡಳಿ ಮತ್ತು ಸಂಬಂಧಿತ ಕಾನೂನು ಸಂಸ್ಥೆಗಳ ಒಪ್ಪಿಗೆ ದೊರೆಯಬೇಕಿದೆ. ಒಪ್ಪಂದವು ಈ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದ ವೇಳೆಗೆ ಅಂತಿಮಗೊಳ್ಳುವ ನಿರೀಕ್ಷೆಯಿದೆ.

'ಐ ಎಮ್‌ ರಿಯಲೀ ಹ್ಯಾಪಿ'; ಸತತ ಗೆಲುವಿನ ಬಳಿಕ ಅಜಿಂಕ್ಯ ರಹಾನೆ ಪ್ರತಿಕ್ರಿಯೆ

ಒಪ್ಪಂದ ಪ್ರಕಾರ ಮಿತ್ತಲ್ ಕುಟುಂಬವು ರಾಜಸ್ಥಾನ ರಾಯಲ್ಸ್‌ನ ಅಂದಾಜು ಶೇ 75ರಷ್ಟು ಪಾಲು ಪಡೆಯಲಿದೆ. ಅದಾರ್ ಪೂನಾವಾಲಾ ಅವರು ಶೇ 18 ರಷ್ಟು ಪಾಲು ಪಡೆಯಲಿದ್ದಾರೆ. ಉಳಿದ ಶೇ 7ರಷ್ಟು ಪಾಲನ್ನು ಹಿಂದಿನ ಆಡಳಿತ ಮಂಡಳಿಯಲ್ಲಿದ್ದ ಮನೋಜ್ ಬದಾಲೆ ಮತ್ತು ಇತರ ಹೂಡಿಕೆದಾರರು ಹೊಂದಲಿದ್ದಾರೆ.

ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ರಾಜಸ್ಥಾನ ರಾಯಲ್ಸ್‌ ಆಡಳಿತ ಮಂಡಳಿ ಯು ಲಕ್ಷ್ಮಿ ಎನ್‌.ಮಿತ್ತಲ್‌, ಆದಿತ್ಯ ಮಿತ್ತಲ್‌, ವನಿಶಾ ಮಿತ್ತಲ್‌–ಭಾಟಿಯಾ, ಸೀರಂ ಇನ್‌ಸ್ಟಿಟ್ಯೂಟ್‌ನ ಸಿಇಒ ಅದಾರ್ ಪೂನಾವಾಲಾ ಮತ್ತು ಮನೋಜ್ ಬದಾಲೆ ಅವರನ್ನು ಹೊಂದಲಿದೆ.