ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

RCB vs GT: ತವರಿನ ಕೊನೆಯ ಲೀಗ್‌ ಪಂದ್ಯದಲ್ಲಿ ಹಲವು ದಾಖಲೆ ಮೇಲೆ ಕಣ್ಣಿಟ್ಟ ಆರ್‌ಸಿಬಿ ಆಟಗಾರರು

IPL 2026: ಆರ್‌ಸಿಬಿ ತಂಡವು ತವರಿನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಕಂಡಿತ್ತು. ಡೇವಿಡ್‌ ಮಿಲ್ಲರ್‌ ಅವರ ಅಸಾಮಾನ್ಯ ಬ್ಯಾಟಿಂಗ್‌ ಮುಂದೆ ಶರಣಾಗಿತ್ತು. ಇದೀಗ ತವರಿನ ಕೊನೆಯ ಪಂದ್ಯದಲ್ಲಿ ಗೆದ್ದು ಅಭಿಮಾನಿಗಳಿಗೆ ಗೆಲುವಿನ ಉಡುಗೊರೆ ನೀಡಲು ತಂಡ ಸಜ್ಜಾಗಿದೆ.

ಇಂದಿನ ಪಂದ್ಯದಲ್ಲಿ ಹಲವು ದಾಖಲೆ ಮೇಲೆ ಕಣ್ಣಿಟ್ಟ ಕಿಂಗ್‌ ಕೊಹ್ಲಿ

Royal Challengers Bengaluru -

Abhilash BC
Abhilash BC Apr 24, 2026 4:28 PM

ಬೆಂಗಳೂರು, ಎ.24: ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಈ ಬಾರಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL 2026) ನಲ್ಲಿ ತನ್ನ ತವರು ಕ್ರೀಡಾಂಗಣ ಚಿನ್ನಸ್ವಾಮಿ(M.Chinnaswamy Stadium)ಯಲ್ಲಿ ಕೊನೆ ಲೀಗ್‌ ಪಂದ್ಯವಾಡನ್ನಾಡಲು ಸಜ್ಜಾಗಿದೆ. ಇಂದು(ಶುಕ್ರವಾರ) ರಾತ್ರಿ ನಡೆಯುವ ಈ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌(GT) ತಂಡದ ಸವಾಲು ಎದುರಿಸಲಿದೆ. ಗೆಲುವಿನ ಮೂಲಕ ಚಿನ್ನಸ್ವಾಮಿಗೆ ವಿದಾಯ ಹೇಳಲು ಕಾಯುತ್ತಿದೆ. ಪಂದ್ಯದಲ್ಲಿ ಆರ್‌ಸಿಬಿ(RCB vs GT)ಯ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಸೇರಿ ತಂಡದ ಕೆಲ ಆಟಗಾರರಿಗೆ ಹಲವು ದಾಖಲೆ ನಿರ್ಮಿಸುವ ಅವಕಾಶವಿದೆ.

800 ಬೌಂಡರಿ: ಐಪಿಎಲ್‌ನಲ್ಲಿ 800 ಬೌಂಡರಿ ಪೂರ್ತಿಗೊಳಿಸಲು ವಿರಾಟ್‌ ಕೊಹ್ಲಿಗೆ ಒಂದು ಬೌಂಡರಿಯ ಅಗತ್ಯವಿದೆ.

300 ಸಿಕ್ಸರ್‌: ವಿರಾಟ್‌ ಕೊಹ್ಲಿಗೆ ಐಪಿಎಲ್‌ನಲ್ಲಿ 300 ಸಿಕ್ಸರ್‌ಗಳಿಗೆ 1 ಬೌಂಡರಿ ಅಗತ್ಯವಿದೆ.

2 ಸಾವಿರ ರನ್‌: ಕರ್ನಾಟಕದ ಎಡಗೈ ಬ್ಯಾಟರ್‌ ದೇವದತ್ ಪಡಿಕ್ಕಲ್‌ಗೆ 2000 ಐಪಿಎಲ್ ರನ್‌ ಮೈಲುಗಲ್ಲು ತಲುಪಲು 41 ರನ್‌ಗಳು ಅಗತ್ಯವಿದೆ.

50 ಕ್ಯಾಚ್‌: ಆರ್‌ಸಿಬಿ ತಂಡದ ವಿಕೆಟ್‌ ಕೀಪರ್‌ ಜಿತೇಶ್ ಶರ್ಮಾ ಅವರಿಗೆ ಐಪಿಎಲ್‌ನಲ್ಲಿ 50 ಕ್ಯಾಚ್‌ ಪೂರ್ತಿಗೊಳಿಸಲು ಕೇವಲ 1 ಕ್ಯಾಚ್ ಅಗತ್ಯವಿದೆ.

50 ವಿಕೆಟ್‌: ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್‌ವುಡ್ ಅವರಿಗೆ ಆರ್‌ಸಿಬಿ ಪರ 50 ವಿಕೆಟ್‌ ಮೈಲುಗಲ್ಲು ತಲುಪಲು 2 ವಿಕೆಟ್‌ಗಳು ಅಗತ್ಯವಿದೆ.

ಗುಜರಾತ್‌ ತಂಡದ ಆಟಗಾರರ ಮುಂದಿರುವ ದಾಖಲೆಗಳು

ಆರ್‌ಸಿಬಿ ಮಾತ್ರವಲ್ಲದೆ ಎದುರಾಳಿ ಗುಜರಾತ್‌ ಟೈಟಾನ್ಸ್‌ ತಂಡದ ಹಲವು ಆಟಗಾರರಿಗೂ ದಾಖಲೆಯನ್ನು ನಿರ್ಮಿಸುವ ಅವಕಾಶವಿದೆ. ಯಾವ ಆಟಗಾರರು ಯಾವ ದಾಖಲೆ ನಿರ್ಮಿಸಲಬಹುದು ಎಂಬ ಮಾಹಿತಿ ಈ ಕೆಳಗಿನಂತಿದೆ.

ಸಾಯಿ ಸುದರ್ಶನ್: 2000 ಐಪಿಎಲ್ ರನ್‌ಗಳಿಗೆ 72 ರನ್‌ಗಳ ಅಗತ್ಯವಿದೆ.

ಶುಭ್‌ಮನ್ ಗಿಲ್: 400 ಐಪಿಎಲ್ ಬೌಂಡರಿಗಳಿಗೆ 1 ಬೌಂಡರಿ ಅಗತ್ಯವಿದೆ.

ಜೋಸ್ ಬಟ್ಲರ್: 200 ಐಪಿಎಲ್ ಬೌಂಡರಿಗಳಿಗೆ 6 ಸಿಕ್ಸರ್‌ಗಳ ಅಗತ್ಯವಿದೆ.

ರಾಹುಲ್ ತೆವಾಟಿಯಾ: 200 ಟಿ20 ಬೌಂಡರಿಗಳಿಗೆ 5 ಬೌಂಡರಿಗಳು ಅಗತ್ಯವಿದೆ.

ರಾಹುಲ್ ತೆವಾಟಿಯಾ: 100 ಟಿ20 ಬೌಂಡರಿಗಳಿಗೆ 6 ಸಿಕ್ಸರ್‌ಗಳ ಅಗತ್ಯವಿದೆ.

‌RCB vs GT: ಗುಜರಾತ್‌ ಟೈಟನ್ಸ್‌ ಎದುರು ಆರ್‌ಸಿಬಿ ಗೆಲ್ಲುವ ನೆಚ್ಚಿನ ತಂಡ! ಇದಕ್ಕೆ ಕಾರಣ ಇಲ್ಲಿದೆ

ಆರ್‌ಸಿಬಿ ತಂಡವು ತವರಿನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಕಂಡಿತ್ತು. ಡೇವಿಡ್‌ ಮಿಲ್ಲರ್‌ ಅವರ ಅಸಾಮಾನ್ಯ ಬ್ಯಾಟಿಂಗ್‌ ಮುಂದೆ ಶರಣಾಗಿತ್ತು. ಇದೀಗ ತವರಿನ ಕೊನೆಯ ಪಂದ್ಯದಲ್ಲಿ ಗೆದ್ದು ಅಭಿಮಾನಿಗಳಿಗೆ ಗೆಲುವಿನ ಉಡುಗೊರೆ ನೀಡಲು ತಂಡ ಸಜ್ಜಾಗಿದೆ. ಸದ್ಯ ತಂಡ, ಆರು ಪಂದ್ಯಗಳಲ್ಲಿ ನಾಲ್ಕು ಗೆಲುವು ಮತ್ತು ಎರಡು ಸೋಲುಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಗುಜರಾತ್‌ ವಿರುದ್ಧ ಗೆದ್ದರೆ ಎರಡನೇ ಸ್ಥಾನಕ್ಕೇರಲಿದ್ದಾರೆ.