ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: : ಕ್ರಿಸ್ ಗೇಲ್, ರೋಹಿತ್ ಶರ್ಮಾ ನಂತರ ಸಿಕ್ಸರ್‌ ದಾಖಲೆ ಬರೆದ ವಿರಾಟ್ ಕೊಹ್ಲಿ

Royal Challengers Bengaluru vs Gujarat Titans: ವಿರಾಟ್‌ ಕೊಹ್ಲಿ ಸಿಕ್ಸರ್‌ ದಾಖಲೆ ಮಾತ್ರವಲ್ಲದೆ ಬೌಂಡರಿ ಮೂಲಕವೂ ವಿಶೇಷ ದಾಖಲೆ ಬರೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 800 ಬೌಂಡರಿಗಳನ್ನು ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಕೊಹ್ಲಿ ನಂತರ ಶಿಖರ್ ಧವನ್ (768), ಡೇವಿಡ್ ವಾರ್ನರ್ (663) ಮತ್ತು ರೋಹಿತ್ ಶರ್ಮಾ (653) ಇದ್ದಾರೆ.

ಒಂದೇ ತಂಡದ ಪರ ಅತ್ಯಧಿಕ ಸಿಕ್ಸರ್‌ ದಾಖಲೆ ನಿರ್ಮಿಸಿದ ಕಿಂಗ್‌ ಕೊಹ್ಲಿ

Virat Kohli -

Abhilash BC
Abhilash BC Apr 25, 2026 7:00 AM

ಬೆಂಗಳೂರು, ಎ.25: ಗುಜರಾತ್‌ ಟೈಟಾನ್ಸ್‌(RCB vs GT) ವಿರುದ್ಧ ನಡೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL 2026)ನ 34ನೇ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ(Virat Kohli) ಸಿಕ್ಸರ್‌ಗಳ ಮೂಲಕ ದಾಖಲೆಯೊಂದನ್ನು ಬರೆದಿದ್ದಾರೆ. ಐಪಿಎಲ್‌ನಲ್ಲಿ 300 ಸಿಕ್ಸರ್‌ಗಳನ್ನು ಸಿಡಿಸಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.

ಕೊಹ್ಲಿಗೆ 303 ಸಿಕ್ಸರ್‌ ಪೂರ್ಣಗೊಳಿಸಲು ಒಂದು ಸಿಕ್ಸರ್‌ನ ಅಗತ್ಯವಿತ್ತು. ಗುಜರಾತ್‌ ವಿರುದ್ಧ ಅವರು 4 ಸಿಕ್ಸರ್‌ ಬಾರಿಸಿ ದಾಖಲೆಯನ್ನು ನಿರ್ಮಿಸಿದರು. ಈ ಮೂಲಕ, ಕೊಹ್ಲಿ ಕ್ರಿಸ್ ಗೇಲ್ ಮತ್ತು ರೋಹಿತ್ ಶರ್ಮಾ ಒಳಗೊಂಡ ವಿಶೇಷ ಕ್ಲಬ್‌ಗೆ ಸೇರಿದರು.

ಕ್ರಿಸ್‌ ಗೇಲ್, 142 ಪಂದ್ಯಗಳಿಂದ 357 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್‌ನ ಮಾಜಿ ನಾಯಕ ರೋಹಿತ್ ಶರ್ಮಾ 276* ಪಂದ್ಯಗಳಲ್ಲಿ 310* ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. 2008 ರಿಂದ ಆರ್‌ಸಿಬಿ ಪರ ಆಡುತ್ತಿರುವ ಕೊಹ್ಲಿ, ಈಗ 274* ಪಂದ್ಯಗಳಿಂದ 303* ಸಿಕ್ಸರ್‌ ಬಾರಿಸಿದ್ದಾರೆ.

ಐಪಿಎಲ್‌ನಲ್ಲಿ ಒಂದೇ ತಂಡದ ಪರ ಅತ್ಯಧಿಕ ಸಿಕ್ಸರ್‌ ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆ ವಿರಾಟ್‌ ಕೊಹ್ಲಿ ಪಾಲಾಯಿತು. ಕೊಹ್ಲಿ ನಂತರದ ಸ್ಥಾನದಲ್ಲಿ ರೋಹಿತ್‌ ಶರ್ಮ ಕಾಣಿಸಿಕೊಂಡಿದ್ದಾರೆ. ರೋಹಿತ್‌ ಮುಂಬೈ ಪರ 259 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಐಪಿಎಲ್‌ನಲ್ಲಿ ಅತ್ಯಧಿಕ ಸಿಕ್ಸರ್‌

ಕ್ರಿಸ್‌ ಗೇಲ್‌-357

ರೋಹಿತ್‌ ಶರ್ಮ-309

ವಿರಾಟ್‌ ಕೊಹ್ಲಿ-303

ಎಂ.ಎಸ್‌ ಧೋನಿ-264

ಎಬಿಡಿ ವಿಲಿಯರ್ಸ್‌-251

RCB vs GT: 2000 ರನ್‌ ಪೂರ್ಣಗೊಳಿಸಿದ ಕ್ರಿಸ್‌ ಗೇಲ್‌ ದಾಖಲೆ ಮುರಿದ ಸಾಯಿ ಸುದರ್ಶನ್‌!

800 ಬೌಂಡರಿ

ವಿರಾಟ್‌ ಕೊಹ್ಲಿ ಸಿಕ್ಸರ್‌ ದಾಖಲೆ ಮಾತ್ರವಲ್ಲದೆ ಬೌಂಡರಿ ಮೂಲಕವೂ ವಿಶೇಷ ದಾಖಲೆ ಬರೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 800 ಬೌಂಡರಿಗಳನ್ನು ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಕೊಹ್ಲಿ ನಂತರ ಶಿಖರ್ ಧವನ್ (768), ಡೇವಿಡ್ ವಾರ್ನರ್ (663) ಮತ್ತು ರೋಹಿತ್ ಶರ್ಮಾ (653) ಇದ್ದಾರೆ.

IPL 2026 Points Table: ಅಂಕಪಟ್ಟಿಯಲ್ಲಿ ಏರಿಕೆ ಕಂಡ ಆರ್‌ಸಿಬಿ

ಮೊದಲ ಎಸೆತದಲ್ಲೇ ಜೀವದಾನ ಪಡೆದ ಕೊಹ್ಲಿ ಇದರ ಸಂಪೂರ್ಣ ಲಾಭವೆತ್ತಿದರು. 44 ಎಸೆತಗಳಿಂದ 81 ರನ್‌ ಬಾರಿಸಿದರು. ಅವರ ಈ ಸೊಗಸಾದ ಇನಿಂಗ್ಸ್‌ನಲ್ಲಿ 4 ಸಿಕ್ಸರ್‌ ಮತ್ತು 8 ಬೌಂಡರಿ ಒಳಗೊಂಡಿತು. ಪಡಿಕ್ಕಲ್‌ ಜತೆ ಎರಡನೇ ವಿಕೆಟ್‌ಗೆ 115 ರನ್‌ಗಳ ಈ ಜೊತೆಯಾಟವನನೂ ನಡೆಸಿದರು. ಪಡಿಕ್ಕಲ್‌ ತಲಾ 6 ಸಿಕ್ಸರ್‌ ಮತ್ತು ಬೌಂಡರಿ ನೆರವಿನಿಂದ 55 ರನ್‌ ಗಳಿಸಿದರು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಗುಜರಾತ್‌ ಟೈಟಾನ್ಸ್‌ ತಂಡ ಸಾಯಿ ಸುದರ್ಶನ್ (100) ಅವರ ಆಕರ್ಷಕ ಶತಕದ ನೆರವಿನಿಂದ 3 ವಿಕೆಟ್‌ಗೆ 205 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ಆರ್‌ಸಿಬಿ 18.5 ಓವರ್‌ಗಳಲ್ಲಿ 5 ವಿಕೆಟ್‌ಗೆ 206 ರನ್‌ ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು. ಜತೆಗೆ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.