ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ಕೆಕೆಆರ್‌ ವಿರುದ್ಧ ಪದಾರ್ಪಣೆ ಮಾಡಿದ ಕರ್ನಾಟಕದ ಲೆಗ್ ಸ್ಪಿನ್ನರ್ ಯಶ್ ರಾಜ್ ಪುಂಜಾ ಯಾರು?

Who is Yash Raj Punja: ಯಶ್ ರಾಜ್ ಪುಂಜಾ ಜನಿಸಿದ್ದು ಅಬುಧಾಬಿಯಲ್ಲಿ. ಜೂನ್ 26, 2006 ರಂದು ಭಾರತೀಯ ಪೋಷಕರಾದ ಧೀರಜ್ ಮತ್ತು ಶಿಲ್ಪಾ ಪುಂಜಾ ದಂಪತಿಗೆ ಜನಿಸಿದರು. ಅವರ ಹಿರಿಯ ಸಹೋದರ ಯೋಧಿನ್ ಪುಂಜಾ ಯುಎಇ ಪುರುಷರ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದಾರೆ.

ರಾಜಸ್ಥಾನ್‌ ಪರ ಆಡಿದ ಕರಾವಳಿ ಮೂಲದ ಸ್ಪಿನ್ನರ್ ಯಶ್ ಪುಂಜಾ ಯಾರು?

Yash Raj Punja -

Abhilash BC
Abhilash BC Apr 20, 2026 9:49 AM

ಬೆಂಗಳೂರು, ಎ.20: ಹೊಸ ಕ್ರಿಕೆಟ್‌ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಕಲ್ಪಿಸಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿ(IPL 2026)ಯಲ್ಲಿ ಕರ್ನಾಟಕದ, ಕರಾವಳಿ ಮೂಲದ 19 ವರ್ಷದ ಯಶ್‌ ರಾಜ್‌ ಪೂಂಜ(Yash Raj Punja‌) ತಮ್ಮ ಪದಾರ್ಪಣ ಪಂದ್ಯದಲ್ಲಿಯೇ ಅಮೋಘ ಬೌಲಿಂಗ ಪ್ರದರ್ಶನ ತೋರುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಭಾನುವಾರ ನಡೆದ ಕೋಲ್ಕತಾ ನೈಟ್‌ ರೈಡರ್ಸ್‌(KKR vs RR) ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಪರ ಚೊಚ್ಚಲ ಪಂದ್ಯವಾಡಿದ ಅವರು ನಾಲ್ಕು ಓವರ್‌ಗಳಲ್ಲಿ 25 ರನ್ ಬಿಟ್ಟುಕೊಟ್ಟು ಒಂದು ವಿಕೆಟ್‌ ಕಿತ್ತರು. ರಮಣದೀಪ್ ಸಿಂಗ್ ಅವರ ನಿರ್ಣಾಯಕ ವಿಕೆಟ್ ಪಡೆದರು.

19 ವರ್ಷದ ಈ ಆಟಗಾರನನ್ನು ರಾಯಲ್ಸ್ ತಂಡವು 2026 ರ ಐಪಿಎಲ್ ಹರಾಜಿನಲ್ಲಿ 30 ಲಕ್ಷ ರೂಪಾಯಿ ಮೂಲ ಬೆಲೆಗೆ ಖರೀದಿಸಿತು. ಮಂಗಳೂರು ಮೂಲದ ಪುಂಜಾ, 2025 ರ ಮಹಾರಾಜ ಕಪ್‌ನಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಗಮನ ಸೆಳೆದಿದ್ದರು. ಟೂರ್ನಿಯಲ್ಲಿ ಅವರು 10 ಪಂದ್ಯಗಳಲ್ಲಿ 12.48 ರ ಸರಾಸರಿಯಲ್ಲಿ 23 ವಿಕೆಟ್‌ಗಳನ್ನು ಕಬಳಿಸಿದ್ದರು.

ಅಬುಧಾಬಿಯಲ್ಲಿ ಜನನ

ಯಶ್ ರಾಜ್ ಪುಂಜಾ ಜನಿಸಿದ್ದು ಅಬುಧಾಬಿಯಲ್ಲಿ. ಜೂನ್ 26, 2006 ರಂದು ಭಾರತೀಯ ಪೋಷಕರಾದ ಧೀರಜ್ ಮತ್ತು ಶಿಲ್ಪಾ ಪುಂಜಾ ದಂಪತಿಗೆ ಜನಿಸಿದರು. ಅವರ ಹಿರಿಯ ಸಹೋದರ ಯೋಧಿನ್ ಪುಂಜಾ ಯುಎಇ ಪುರುಷರ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದಾರೆ.

ಅಣ್ಣನ ಸಲಹೆಯಂತೆ ಸ್ಪಿನ್ನರ್‌ ಆದ ಯಶ್‌ ರಾಜ್‌

ಆರಂಭದಲ್ಲಿ ಜಾಯೆದ್ ಕ್ರಿಕೆಟ್ ಅಕಾಡೆಮಿಯಲ್ಲಿ ಸೀಮ್ ಬೌಲರ್ ಆಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಯಶ್, ತಮ್ಮ ಸಹೋದರನ ಸಲಹೆಯ ಮೇರೆಗೆ ಲೆಗ್-ಸ್ಪಿನ್‌ಗೆ ಪ್ರಮುಖ ಬದಲಾವಣೆ ಮಾಡಿಕೊಂಡರು. 2023 ರಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಪುಂಜಾ ರಾಹುಲ್ ದ್ರಾವಿಡ್ ಅವರ ಅಕಾಡೆಮಿಯಲ್ಲಿ ತಮ್ಮ ಕೌಶಲ್ಯವನ್ನು ಸುಧಾರಿಸಲು ಬೆಂಗಳೂರಿಗೆ ತೆರಳಿದರು. 2024 ರಲ್ಲಿ, ವೆಸ್ಟ್ ಇಂಡೀಸ್‌ನ ಮಾಜಿ ವೇಗಿ ಇಯಾನ್ ಬಿಷಪ್ ಅವರು ಯಶ್‌ ರಾಜ್‌ರನ್ನು ನೆಟ್ ಬೌಲರ್ ಎಂದು ಗುರುತಿಸಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಹೈಲೈಟ್ ಮಾಡಿದರು. ಅವರು ಹುಬ್ಬಳ್ಳಿ ಟೈಗರ್ಸ್ ಮತ್ತು ಅಬುಧಾಬಿ ದೇಶೀಯ ತಂಡಗಳಲ್ಲಿ ಆಡಿ ಅನುಭವ ಹೊಂದಿದ್ದಾರೆ.

PBKS vs LSG: ಅಬ್ಬರಿಸಿದ ಪ್ರಿಯಾಂಶ್‌, ಕೊನೋಲಿ; ಪಂಜಾಬ್‌ ಕಿಂಗ್ಸ್‌ ಅಜೇಯ ಓಟ

ಯಶ್ ಪೂಂಜಾ ಬಗ್ಗೆ ಪ್ರಮುಖ ಅಂಶಗಳು

ಮಹಾರಾಜ ಟ್ರೋಫಿ 2025ನಲ್ಲಿ 23 ವಿಕೆಟ್ ಪಡೆದು ಗಮನ ಸೆಳೆದರು.

ರಾಜಸ್ಥಾನ ರಾಯಲ್ಸ್ ತಂಡವು ಇವರನ್ನು ₹30 ಲಕ್ಷಕ್ಕೆ ಖರೀದಿಸಿತು.

ವಿಶೇಷ ಲೆಗ್-ಸ್ಪಿನ್, ಗೂಗ್ಲಿ ಮತ್ತು ಹೆಚ್ಚಿನ ಬೌನ್ಸ್ ನೀಡುವ ಸಾಮರ್ಥ್ಯ ಹೊಂದಿದ್ದಾರೆ.

ಅಬುಧಾಬಿಯಲ್ಲಿ ಜನಿಸಿದ ಇವರು ಬೆಂಗಳೂರಿಗೆ ಬಂದು ಕರ್ನಾಟಕ ರಾಜ್ಯ ಕ್ರಿಕೆಟ್‌ನಲ್ಲಿ ತರಬೇತಿ ಪಡೆದರು.