ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೊಹ್ಲಿಯ ನೋ ಹ್ಯಾಂಡ್‌ಶೇಕ್‌ ವಿವಾದ; ಆನ್‌ಲೈನ್‌ನಲ್ಲಿ ಟ್ರಾವಿಸ್ ಹೆಡ್ ಪತ್ನಿಗೆ ಕ್ರೂರ ನಿಂದನೆ

IPL 2026: 2023 ರ ಐಸಿಸಿ ಏಕದಿನ ವಿಶ್ವಕಪ್ ನಂತರ ತಾನು ಅನುಭವಿಸಿದ ಅನುಭವವೇ ಈಗ ಪುನರಾವರ್ತನೆಯಾಗಿದೆ ಎಂದು ಅವರು ಹೇಳಿದರು. ಅಂದು ಅಹಮದಾಬಾದ್‌ನಲ್ಲಿ ನಡೆದ ವಿಶ್ವಕಪ್‌ ಫೈನಲ್‌ನಲ್ಲಿ ಹೆಡ್ 137 ರನ್‌ ಬಾರಿಸಿ ಭಾರತವನ್ನು ಸೋಲುವಂತೆ ಮಾಡಿದ್ದರು. ಆಗಲೂ ಕೂಡ ಕೆಲ ನೆಟ್ಟಿಗರು ಹೆಡ್‌ ಪತ್ನಿಗೆ ನಿಂದನೆಯನ್ನುಂಟುಮಾಡಿದ್ದರು.

ನೋ ಹ್ಯಾಂಡ್‌ಶೇಕ್‌ ವಿವಾದ; ಆನ್‌ಲೈನ್‌ನಲ್ಲಿ ಹೆಡ್ ಪತ್ನಿಗೆ ಕ್ರೂರ ನಿಂದನೆ

jessica head -

Abhilash BC
Abhilash BC May 25, 2026 10:42 AM

ಸಿಡ್ನಿ, ಮೇ 25: ಮೇ 22 ರಂದು ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ 2026(IPL 2026) ಪಂದ್ಯದ ಸಂದರ್ಭದಲ್ಲಿ ಟ್ರಾವಿಸ್‌ ಹೆಡ್ ಮತ್ತು ವಿರಾಟ್ ಕೊಹ್ಲಿ ನಡುವಿನ ನೋ ಹ್ಯಾಂಡ್‌ಶೇಕ್‌ ವಿವಾದದ ನಂತರ ಹೆಡ್ ಅವರ ಪತ್ನಿ ಜೆಸ್ಸಿಕಾ(Jessica) ಆನ್‌ಲೈನ್ ನಿಂದನೆಯನ್ನು ಎದುರಿಸುತ್ತಿರುವುದಾಗಿ ತಿಳಿಸಿದ್ದಾರೆ. ನೆಟ್ಟಿಗರ ಈ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಹೆಡ್ ಕೊಹ್ಲಿ ಜೊತೆ ಮೈದಾನದಲ್ಲಿ ಜಗಳವಾಡಿದ ನಂತರ ಮತ್ತೊಮ್ಮೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಿಂದನೀಯ ಸಂದೇಶಗಳು ಮತ್ತು ಟ್ರೋಲಿಂಗ್‌ಗೆ ಗುರಿಯಾಗಿರುವುದಾಗಿ ಜೆಸ್ಸಿಕಾ ಬಹಿರಂಗಪಡಿಸಿದ್ದಾರೆ. ಈ ಪರಿಸ್ಥಿತಿ ತನಗೆ ಮತ್ತು ತನ್ನ ಕುಟುಂಬಕ್ಕೆ ಭಾವನಾತ್ಮಕವಾಗಿ ಕುಗ್ಗಿಸುತ್ತಿದೆ ಮತ್ತು ದುಃಖಕರವಾಗಿದೆ ಎಂದು ಅವರು ಹೇಳಿದ್ದಾರೆ.

2023 ರ ಐಸಿಸಿ ಏಕದಿನ ವಿಶ್ವಕಪ್ ನಂತರ ತಾನು ಅನುಭವಿಸಿದ ಅನುಭವವೇ ಈಗ ಪುನರಾವರ್ತನೆಯಾಗಿದೆ ಎಂದು ಅವರು ಹೇಳಿದರು. ಅಂದು ಅಹಮದಾಬಾದ್‌ನಲ್ಲಿ ನಡೆದ ವಿಶ್ವಕಪ್‌ ಫೈನಲ್‌ನಲ್ಲಿ ಹೆಡ್ 137 ರನ್‌ ಬಾರಿಸಿ ಭಾರತವನ್ನು ಸೋಲುವಂತೆ ಮಾಡಿದ್ದರು. ಆಗಲೂ ಕೂಡ ಕೆಲ ನೆಟ್ಟಿಗರು ಹೆಡ್‌ ಪತ್ನಿಗೆ ನಿಂದನೆಯನ್ನುಂಟುಮಾಡಿದ್ದರು.

“ವಿಶ್ವಕಪ್ ನಂತರ ನಡೆದ ನಿಂದನೆಯ ಪುನರಾವರ್ತನೆಯಂತೆ ಭಾಸವಾಗುತ್ತಿದೆ. ನನ್ನ ಸಾಮಾಜಿಕ ಜಾಲತಾಣಗಳು ಸಂಪೂರ್ಣ ಟೀಕೆಯಿಂದ ಕೂಡಿದೆ. ನಾವು ಚೆನ್ನಾಗಿದ್ದೇವೆ ಆದರೆ ಅವರು ನನ್ನ ಸ್ನೇಹಿತರು ಮತ್ತು ಕುಟುಂಬದ ಮೇಲೆ ದಾಳಿ ಮಾಡುತ್ತಿದ್ದಾರೆ, ”ಎಂದು ಜೆಸ್ಸಿಕಾ ಆಸ್ಟ್ರೇಲಿಯಾದ ಮಾಧ್ಯಮ ಸಂಸ್ಥೆ ದಿ ಅಡ್ವರ್ಟೈಸರ್‌ಗೆ ತಿಳಿಸಿದರು.

ಕ್ರಿಕೆಟ್‌ ಲೋಕದ ಟಾಪ್‌ 5 'ನೋ ಹ್ಯಾಂಡ್ ಶೇಕ್‌' ವಿವಾದಗಳು

"ಈಗ ಎಲ್ಲಾ ಕ್ರೀಡೆಗಳಲ್ಲಿ ಮಾನಸಿಕ ಆರೋಗ್ಯ, ದೃಷ್ಟಿಕೋನ ಮತ್ತು ನಾವು ಪರಸ್ಪರ ಮಾತನಾಡುವ ವಿಧಾನದ ಬಗ್ಗೆ ಒಂದು ಪ್ರಮುಖ ಸಂಭಾಷಣೆ ನಡೆಯುತ್ತಿದೆ ಎಂದು ನಾನು ಭಾವಿಸುತ್ತೇನೆ. ಉತ್ಸಾಹವು ಯಾವಾಗಲೂ ಕ್ರೀಡೆಯ ಭಾಗವಾಗಿರುತ್ತದೆ, ಆದರೆ ಆಟದ ಹಿಂದೆ ನಿಜವಾದ ಜನರು ಮತ್ತು ಕುಟುಂಬಗಳಿವೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಸಹ ಅಷ್ಟೇ ಮುಖ್ಯ. ಇದು ಪರಸ್ಪರ ದಯೆ ಮತ್ತು ಬೆಂಬಲವನ್ನು ಪ್ರೋತ್ಸಾಹಿಸುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಜೆಸ್ಸಿಕಾ ಹೇಳಿದರು.

ಪಂದ್ಯ ಮುಗಿದ ಬಳಿಕ ಉಭಯ ತಂಡಗಳ ಆಟಗಾರರು ಪರಸ್ಪರ ಕೈಕುಲುಕಲು ಮೈದಾನದಲ್ಲಿ ಸಾಲಾಗಿ ನಿಂತಿದ್ದರು. ಈ ವೇಳೆ ಟ್ರಾವಿಸ್ ಹೆಡ್ ಅವರು ವಿರಾಟ್ ಕೊಹ್ಲಿ ಕಡೆಗೆ ಕೈಚಾಚಿ ಹ್ಯಾಂಡ್‌ಶೇಕ್ ಮಾಡಲು ಬಂದರು. ಆದರೆ, ವಿರಾಟ್ ಕೊಹ್ಲಿ ಅವರು ಹೆಡ್ ನೀಡಿದ ಹ್ಯಾಂಡ್‌ಶೇಕ್ ಅನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಅವರ ಮುಖವನ್ನೂ ನೋಡದೆ ಬೇರೆಡೆ ತಿರುಗಿಕೊಂಡರು. ಪಂದ್ಯದ ವೇಳೆ ಉಭಯ ಆಟಗಾರರ ಮಧ್ಯೆ ಮೈದಾನದಲ್ಲಿ ಮಾತಿನ ಚಕಮಕಿ ನಡೆದಿತ್ತು.