ಕೋಟಿ ವೇತನ ಕಡಿತದೊಂದಿಗೆ ಗುಜರಾತ್ ಟೈಟಾನ್ಸ್ ಸೇರಿದ ಹರ್ಷಲ್ ಪಟೇಲ್
IPL Trade live: ಎರಡು ಬಾರಿ 'ಪರ್ಪಲ್ ಕ್ಯಾಪ್' ವಿಜೇತರಾಗಿರುವ ಹರ್ಷಲ್, 124 ಐಪಿಎಲ್ ಪಂದ್ಯಗಳಲ್ಲಿ 151 ವಿಕೆಟ್ಗಳನ್ನು ಕಬಳಿಸುವ ಮೂಲಕ ಅಪಾರ ಅನುಭವವನ್ನು ಹೊಂದಿದ್ದಾರೆ. ಅಲ್ಲದೆ, 2021 ಮತ್ತು 2024ರಲ್ಲಿ ಅವರು ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದರು.
Harshal Patel -
ಮುಂಬಯಿ, ನ.17: ಮುಂದಿನ ವರ್ಷದ ಐಪಿಎಲ್ 20ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಮುನ್ನ ಎಲ್ಲ 10 ತಂಡಗಳು ಆಟಗಾರರ ರಿಟೇನ್ ಪಟ್ಟಿಯನ್ನು ಪ್ರಕಟಿಸಲು ಇಂದು ಅಂತಿಮ ಗಡುವು ಆಗಿದೆ. ಈ ಗುಡುವಿಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಹರ್ಷಲ್ ಪಟೇಲ್ ಸನ್ರೈಸರ್ಸ್ ಹೈದರಾಬಾದ್ (SRH) ತಂಡದಿಂದ ಗುಜರಾತ್ ಟೈಟಾನ್ಸ್ಗೆ ಸೇರ್ಪಡೆಗೊಂಡಿದ್ದಾರೆ.
2025ರ ಹರಾಜಿನಲ್ಲಿ ಸನ್ರೈಸರ್ಸ್ ತಂಡವು ಇವರನ್ನು 8 ಕೋಟಿ ರೂಪಾಯಿಗೆ ಖರೀದಿಸಿತ್ತು. ಇದೀಗ 4 ಕೋಟಿ ರೂಪಾಯಿ ಮೌಲ್ಯದ ವಿನಿಮಯದ (trade) ಮೂಲಕ ಅವರು ಗುಜರಾತ್ ಟೈಟಾನ್ಸ್ ತಂಡವನ್ನು ಸೇರಿಕೊಂಡಿದ್ದಾರೆ.
ಎರಡು ಬಾರಿ 'ಪರ್ಪಲ್ ಕ್ಯಾಪ್' ವಿಜೇತರಾಗಿರುವ ಹರ್ಷಲ್, 124 ಐಪಿಎಲ್ ಪಂದ್ಯಗಳಲ್ಲಿ 151 ವಿಕೆಟ್ಗಳನ್ನು ಕಬಳಿಸುವ ಮೂಲಕ ಅಪಾರ ಅನುಭವವನ್ನು ಹೊಂದಿದ್ದಾರೆ. ಅಲ್ಲದೆ, 2021 ಮತ್ತು 2024ರಲ್ಲಿ ಅವರು ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದರು.
🚨 𝗔𝗻𝗻𝗼𝘂𝗻𝗰𝗲𝗺𝗲𝗻𝘁 🚨 Harshal Patel traded to @gujarat_titans from @SunRisers at a revised fee of INR 4 Crore. More Details 🔽 | #TATAIPL https://t.co/9nfw0qESbL
— IndianPremierLeague (@IPL) November 17, 2026
"ಎರಡು ಬಾರಿ 'ಪರ್ಪಲ್ ಕ್ಯಾಪ್' ವಿಜೇತರಾದ ಹರ್ಷಲ್ ಪಟೇಲ್, ಸನ್ರೈಸರ್ಸ್ ಹೈದರಾಬಾದ್ನಿಂದ ಗುಜರಾತ್ ಟೈಟಾನ್ಸ್ ತಂಡಕ್ಕೆ 4 ಕೋಟಿ ರೂಪಾಯಿಗೆ ಗುಜರಾತ್ ತಂಡಕ್ಕೆ ವರ್ಗಾವಣೆಯಾಗಿದ್ದಾರೆ" ಎಂದು ಐಪಿಎಲ್ (IPL) ಅಧಿಕೃತ ಪ್ರಕಟಣೆಯ ಮೂಲಕ ತಿಳಿಸಿದೆ.
ಹರ್ಷಲ್ ಪಟೇಲ್ಗೆ ಇದು ಐದನೇ ಐಪಿಎಲ್ ಫ್ರಾಂಚೈಸಿಯಾಗಿದೆ. ಈ ಹಿಂದೆ ಅವರು ಆರ್ಸಿಬಿ, ಪಂಜಾಬ್, ಡೆಲ್ಲಿ ಕ್ಯಾಪಿಟಲ್ಸ್, ಸನ್ರೈಸರ್ಸ್ ತಂಡದ ಪರ ಆಡಿದ್ದರು. ಈ ಬಲಗೈ ವೇಗದ ಬೌಲರ್ ಈಗ ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ ಮತ್ತು ಜೇಸನ್ ಹೋಲ್ಡರ್ ಅವರೊಂದಿಗೆ ಸೇರಿಕೊಂಡು ಟೈಟಾನ್ಸ್ ಪರ ಒಂದು ಬಲಿಷ್ಠ ವೇಗದ ಬೌಲಿಂಗ್ ಪಡೆಯನ್ನು ರಚಿಸಲಿದ್ದಾರೆ.
ವೆಲ್ಲಿಂಗ್ಟನ್ನ ಬೇಸಿನ್ ರಿಸರ್ವ್ನಲ್ಲಿ ಭಾರತದ ಟೆಸ್ಟ್ ದಾಖಲೆ ಹೇಗಿದೆ?
ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವ ಗಡುವಿನ ಮುನ್ನ, 'ಟ್ರೇಡ್ ವಿಂಡೋ' (ಆಟಗಾರರ ವಿನಿಮಯ ಪ್ರಕ್ರಿಯೆ) ಅವಧಿಯಲ್ಲಿ ಸನ್ರೈಸರ್ಸ್ ಸಾಕಷ್ಟು ಸಕ್ರಿಯವಾಗಿದೆ. ಅವರು ಈಗಾಗಲೇ ಡೆಲ್ಲಿ ತಂಡದಿಂದ ಎಡಗೈ ವೇಗದ ಬೌಲರ್ ಟಿ. ನಟರಾಜನ್ ಅವರನ್ನು ಪಡೆದುಕೊಂಡಿದ್ದಾರೆ. ಜೊತೆಗೆ, ಸಿಎಸ್ಕೆ ತಂಡದಿಂದ ಖಲೀಲ್ ಅಹ್ಮದ್ ಮತ್ತು ನಾಥನ್ ಎಲಿಸ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿದ್ದಾರೆ.