ಶಾಂತಿ ಒಪ್ಪಂದದ ಬೆನ್ನಲ್ಲೇ ಫಿಫಾ ವಿಶ್ವಕಪ್ ಪಂದ್ಯಕ್ಕಾಗಿ ಅಮೆರಿಕಕ್ಕೆ ಬಂದಿಳಿದ ಇರಾನ್
Iran Football Team: ಈ ವಾರದ ಕೊನೆಯಲ್ಲಿ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದಕ್ಕೆ ಔಪಚಾರಿಕವಾಗಿ ಸಹಿ ಹಾಕಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.
Iran football team -
ಲಾಸ್ ಏಂಜಲೀಸ್: ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದವನ್ನು ಘೋಷಿಸುವ ಕೆಲವೇ ಗಂಟೆಗಳ ಮೊದಲು, ಇರಾನ್‌ನ ರಾಷ್ಟ್ರೀಯ ಫುಟ್ಬಾಲ್ ತಂಡವು(Iran football team) ಜೂನ್ 15 ರಂದು ನಡೆಯುವ ನ್ಯೂಜಿಲೆಂಡ್ ವಿರುದ್ಧದ ಫಿಫಾ ವಿಶ್ವಕಪ್ 2026ರ(FIFA World Cup) ಆರಂಭಿಕ ಪಂದ್ಯವನ್ನಾಡಲು ಅಮೆರಿಕಕ್ಕೆ ಆಗಮಿಸಿತು.
ಮೆಕ್ಸಿಕೋದಿಂದ ಲಾಸ್ ಏಂಜಲೀಸ್‌ಗೆ ಬಂದಿಳಿದ ಇರಾನ್ ಆಟಗಾರರಿಗೆ ಭಾರೀ ಭದ್ರತೆ ಕಲ್ಪಿಸಲಾಯಿತು. ಸದ್ಯ ಆಟಗಾರರು ಪಂದ್ಯಾವಳಿಯ ಪೂರ್ವಸಿದ್ಧತಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಉಭಯ ದೇಶಗಳ ಯದ್ಧದ ಕಾರಣದಿಂದ ಇರಾನ್ ತಂಡವು ಅಮೆರಿಕದಲ್ಲಿ ವಿಶ್ವಕಪ್ ಆಡುವ ಬಗ್ಗೆ ಅನಿಶ್ಚಿತತೆ ಉಂಟಾಗಿತ್ತು. ಆದರೆ ಇದೀಗ ಉಭಯ ದೇಶಗಳು ಕದನ ವಿರಾಮ ಒಪ್ಪಂದ ಹಾಗೂ ಹೊರ್ಮುಜ್ ಜಲಸಂಧಿ ಪುನರಾರಂಭದ ನಿರ್ಧಾರ ಕೈಗೊಂಡಿದ್ದಾರೆ. ಇದರ ಬೆನ್ನಲ್ಲೇ ಇರಾನ್ ಪಂದ್ಯವನ್ನಾಡಲು ಅಮೆರಿಕಗೆ ಬಂದಿಳಿದಿದೆ.
ಗೋಲುಗಳ ಸುರಿಮಳೆಗೈದು ಭರ್ಜರಿ ಗೆಲುವು ಸಾಧಿಸಿದ ಜರ್ಮನಿ
ತಂಡದ ಆಟಗಾರರು ತಂಗಿರುವ ಹೋಟೆಲ್ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಪೊಲೀಸರು ಸುತ್ತಮುತ್ತಲಿನ ಬೀದಿಗಳ ಕೆಲವು ರಸ್ತೆಗಳನ್ನು ನಿರ್ಬಂಧಿಸಿ ಆವರಣದ ಹೊರಗೆ ತಡೆಗೋಡೆಗಳನ್ನು ನಿರ್ಮಿಸಿದರು. ಸಂಜೆ ನಂತರ, ಮುಖ್ಯ ಕೋಚ್ ಅಮೀರ್ ಘಲೆನೋಯಿ ಮತ್ತು ಸ್ಟ್ರೈಕರ್ ಮೆಹದಿ ತರೇಮಿ ಅವರು ನ್ಯೂಜಿಲೆಂಡ್ ವಿರುದ್ಧದ ಇರಾನ್‌ನ ಗ್ರೂಪ್ ಜಿ ಆರಂಭಿಕ ಪಂದ್ಯಕ್ಕೂ ಮುನ್ನ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.
🇺🇸🇮🇷🇳🇿 | La selección de Irán aterrizó en Los Ángeles para su debut mundialista ante Nueva Zelanda en medio de una alta tensión geopolítica. pic.twitter.com/2L9zlei2B7
— Mundo en Conflicto 🌎 (@MundoEConflicto) June 14, 2026
ಈ ವಾರದ ಕೊನೆಯಲ್ಲಿ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದಕ್ಕೆ ಔಪಚಾರಿಕವಾಗಿ ಸಹಿ ಹಾಕಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.
ಈ ಪಂದ್ಯಾವಳಿಯಲ್ಲಿ ಇರಾನ್‌ನ ಸಿದ್ಧತೆಗಳು ಯಾವುದೇ ತಂಡಕ್ಕಿಂತ ಅತ್ಯಂತ ಸವಾಲಿನವು. ಆರಂಭದಲ್ಲಿ ಅರಿಜೋನಾದಲ್ಲಿ ತನ್ನ ವಿಶ್ವಕಪ್ ಬೇಸ್ ಕ್ಯಾಂಪ್ ಅನ್ನು ಸ್ಥಾಪಿಸಲು ಫೆಡರೇಶನ್ ಯೋಜಿಸಿತ್ತು. ಆದಾಗ್ಯೂ, ಈ ವರ್ಷದ ಆರಂಭದಲ್ಲಿ ಯುಎಸ್-ಇಸ್ರೇಲಿ ಜಂಟಿ ಮಿಲಿಟರಿ ದಾಳಿಯ ನಂತರ ಅಮೆರಿಕ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಗಳು ಯೋಜನೆಗಳನ್ನು ಬದಲಾಯಿಸುವಂತೆ ಒತ್ತಾಯಿಸಿತು. ತರುವಾಯ ಇರಾನ್ ತನ್ನ ಕಾರ್ಯಾಚರಣೆಗಳನ್ನು ನೆರೆಯ ಮೆಕ್ಸಿಕೊಕ್ಕೆ ಬದಲಾಯಿಸಿತು.