ಏಷ್ಯನ್ ಗೇಮ್ಸ್ ಶೂಟಿಂಗ್; ಚಿನ್ನ, ಬೆಳ್ಳಿ ಗೆದ್ದ ಭಾರತ
Asian Games: ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್ಸ್ ತಂಡದ ಸ್ಪರ್ಧೆಯಲ್ಲಿ ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್, ರುದ್ರಾಂಕ್ಷ್ ಪಾಟೀಲ್ ಮತ್ತು ನೀರಜ್ ಕುಮಾರ್ ಬೆಳ್ಳಿ ಪದಕ ಗೆದ್ದರು. ತೋಮರ್ ಮತ್ತು ನೀರಜ್ ಈಗ ಇಂದು ನಡೆಯಲಿರುವ ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ ಮತ್ತೆ ಕಣಕ್ಕಿಳಿಯಲಿದ್ದಾರೆ.
Kamaljeet, Suruchi -
ನಗೋಯಾ, ಸೆ.25: ಕಳೆದ ಎರಡು ದಿನಗಳಲ್ಲಿ ಏರ್ ಪಿಸ್ತೂಲ್‌ನಲ್ಲಿ ಹಿನ್ನಡೆ ಕಂಡಿದ್ದ ಭಾರತಕ್ಕೆ ಶುಕ್ರವಾರ ಚಿನ್ನ ಮತ್ತು ಬೆಳ್ಳಿ ಪದಕ ಒಲಿಯಿತು. ಕಮಲ್‌ಜೀತ್ ಮತ್ತು ಸುರುಚಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡದ ಸ್ಪರ್ಧೆಯಲ್ಲಿ ಚಿನ್ನಕ್ಕೆ ಗುರಿಯಿಟ್ಟರು. ಈ ಮೂಲಕ ಭಾರತಕ್ಕೆ ಏಷ್ಯನ್ ಗೇಮ್ಸ್‌ನಲ್ಲಿ ಎರಡನೇ ಚಿನ್ನದ ಪದಕ ತಂದುಕೊಟ್ಟರು. ಪುರುಷರ ತಂಡವು 50 ಮೀಟರ್ ರೈಫಲ್ 3-ಪೊಸಿಷನ್ ವಿಭಾಗದಲ್ಲಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿತು.
ಕಮಲ್‌ಜೀತ್ ಮತ್ತು ಸುರುಚಿ ಜೋಡಿಯು ಅತ್ಯುತ್ತಮ ಪ್ರದರ್ಶನ ನೀಡಿ 484.6 ಅಂಕಗಳನ್ನು ಗಳಿಸಿತು. ಇದು ವಿಶ್ವ ದಾಖಲೆಗಿಂತ ಕೇವಲ 3.8 ಅಂಕಗಳಷ್ಟು ಕಡಿಮೆಯಾಗಿತ್ತು. ದಕ್ಷಿಣ ಕೊರಿಯಾದ ತಂಡವು ಅಂತಿಮ ಹಂತದಲ್ಲಿ ತೀವ್ರ ಪೈಪೋಟಿ ನೀಡಿದರೂ, ತಮ್ಮ ಸ್ಥಿರವಾದ ಪ್ರದರ್ಶನವನ್ನು ಕಾಯ್ದುಕೊಂಡರು. ಅಂತಿಮವಾಗಿ ಭಾರತವು 6.6 ಅಂಕಗಳ ಅಂತರದಿಂದ ಜಯಗಳಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು. ಕೊರಿಯಾ(478.0) ಬೆಳ್ಳಿ ಗೆದ್ದರೆ, ಇರಾನ್(415.8) ಕಂಚು ಗೆದ್ದಿತು.
ಅರ್ಹತಾ ಸುತ್ತಿನ ಪಂದ್ಯದಲ್ಲೂ ಕಮಲ್‌ಜೀತ್ ಮತ್ತು ಸುರುಚಿ ಉತ್ತಮ ಪ್ರದರ್ಶನ ನೀಡಿದರು. ಅತ್ಯುತ್ತಮ ಪ್ರದರ್ಶನದೊಂದಿಗೆ ಅಗ್ರಸ್ಥಾನದೊಂದಿಗೆ ಈ ಜೋಡಿ ಫೈನಲ್‌ಗೆ ಲಗ್ಗೆಯಿಟ್ಟಿತು. ಆರಂಭಿಕ ಸರಣಿಯಲ್ಲಿ 196 ಅಂಕಗಳನ್ನು ಗಳಿಸಿದರೆ, ಎರಡನೇ ಸರಣಿಯಲ್ಲಿ ತಮ್ಮ ಒಟ್ಟು ಅಂಕಗಳ ಸಂಖ್ಯೆಯನ್ನು 391ಕ್ಕೆ ಏರಿಸಿಕೊಂಡರು.
ಏಷ್ಯನ್ ಗೇಮ್ಸ್ ಮಿಶ್ರ ಡಬಲ್ಸ್ ಟಿಟಿ, ಸ್ಕ್ವಾಶ್‌ನಲ್ಲಿ ಸೆಮಿ ಪ್ರವೇಶ; ಭಾರತಕ್ಕೆ 2 ಪದಕ ಖಾತ್ರಿ
ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್ಸ್ ತಂಡದ ಸ್ಪರ್ಧೆಯಲ್ಲಿ ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್, ರುದ್ರಾಂಕ್ಷ್ ಪಾಟೀಲ್ ಮತ್ತು ನೀರಜ್ ಕುಮಾರ್ ಬೆಳ್ಳಿ ಪದಕ ಗೆದ್ದರು. ತೋಮರ್ ಮತ್ತು ನೀರಜ್ ಈಗ ಇಂದು ನಡೆಯಲಿರುವ ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ ಮತ್ತೆ ಕಣಕ್ಕಿಳಿಯಲಿದ್ದಾರೆ.
ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್ 589 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರೆ, ನೀರಜ್ ಕುಮಾರ್ 588 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದರು. ರುದ್ರಾಂಕ್ಷ್ ಬಾಳಾಸಾಹೇಬ್ ಪಾಟೀಲ್ 585 ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿ ನಿಂತರು.
ಭಾರತವು ಒಟ್ಟು 1762 ಅಂಕಗಳನ್ನು ಗಳಿಸಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿತು. 1766 ಅಂಕಗಳೊಂದಿಗೆ ಚೀನಾ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಇದರಲ್ಲಿ ಜಾಂಗ್ ಚಾಂಗ್‌ಹಾಂಗ್ ಗಳಿಸಿದ 593 ಅಂಕಗಳು ಅರ್ಹತಾ ಸುತ್ತಿನ ಹೊಸ ದಾಖಲೆಯಾಗಿದೆ. ಲಿಯು ಯುಕುನ್ 588 ಮತ್ತು ಶೆಂಗ್ ಲಿಹಾವೊ 585 ಅಂಕಗಳನ್ನು ಗಳಿಸಿದರು.