ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indian football: ಭಾರತ ಫುಟ್ಬಾಲ್‌ ತಂಡಕ್ಕೆ 2 ವರ್ಷ ಅವಧಿಗೆ ಖಾಲಿದ್‌ ಕೋಚ್‌

ಸಿಎಎಫ್‌ಎ ನೇಷನ್ಸ್‌ ಕಪ್‌ ಟೂರ್ನಿಯು ಮೊದಲ ಸವಾಲು ಆಗಿದೆ. ಆ ಟೂರ್ನಿಯ ಬಿ ಗುಂಪಿನಲ್ಲಿರುವ ಭಾರತವು, ತಜಿಕಿಸ್ತಾನ (ಆ. 29ರಂದು), ಇರಾನ್ (ಸೆ. 1) ಮತ್ತು ಅಫ್ಗಾನಿಸ್ತಾನ (ಸೆ. 4) ತಂಡಗಳನ್ನು ಎದುರಿಸಲಿದೆ. ಅಕ್ಟೋಬರ್‌ನಲ್ಲಿ ಎಎಫ್‌ಸಿಎ ಏಷ್ಯನ್ ಕಪ್ (2027ರ) ಅರ್ಹತಾ ಟೂರ್ನಿಯಲ್ಲಿ ಭಾರತ ಆಡಲಿದೆ.

ಭಾರತ ಫುಟ್ಬಾಲ್‌ ತಂಡಕ್ಕೆ 2 ವರ್ಷ ಅವಧಿಗೆ ಖಾಲಿದ್‌ ಕೋಚ್‌

Abhilash BC Abhilash BC Aug 14, 2025 9:50 AM

ನವದೆಹಲಿ: ಖಾಲಿದ್ ಜಮೀಲ್(Khalid Jamil) ಅವರು ಎರಡು ವರ್ಷಗಳ ಪೂರ್ಣ ಅವಧಿಗೆ ಭಾರತ ಸೀನಿಯರ್ ಫುಟ್‌ಬಾಲ್‌ ತಂಡದ(Indian football) ತರಬೇತುದಾರ ಹೊಣೆ ವಹಿಸಿಕೊಂಡಿದ್ದಾರೆ ಎಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್ ತಿಳಿಸಿದೆ. ಕಳೆದ ತಿಂಗಳು ಅವರು ಕೋಚ್‌ ಆಗಿ ಆಯ್ಕೆಯಾಗಿದ್ದರು. ಒಂದೊಮ್ಮೆ ಅವರ ಕಾರ್ಯಾವಧಿಯಲ್ಲಿ ಉತ್ತಮ ಫಲಿತಾಂಶ ದಾಖಲಾದರೆ ಮತ್ತೊಂದು ವರ್ಷಕ್ಕೆ ಮುಂದುವರಿಯುವ ಆಯ್ಕೆಯೂ ಅವರ ಮುಂದಿದೆ. ಆದರೆ ಪಾತಾಳಕ್ಕೆ ಕುಸಿದಿರುವ ತಂಡವನ್ನು ಗೆಲುವಿನ ಹಳಿಗೆ ತರುವುದೇ ಅವರ ಮುಂದಿರುವ ದೊಡ್ಡ ಸವಾಲು.

ಐಎಸ್‌ಎಲ್‌ ತಂಡವಾದ ಜಮ್‌ಶೆಡ್‌ಪುರ ತಂಡದ ಒಪ್ಪಂದವನ್ನು ಕೊನೆಗೊಳಿಸಿದ ನಂತರ ಅವರು ಎಐಎಫ್‌ಎಫ್‌ ಜತೆಗೆ ಪೂರ್ಣಾವಧಿ ಕೋಚ್‌ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಫೆಡರೇಷನ್ ತಿಳಿಸಿದೆ. ಆಗಸ್ಟ್‌ 15ರಿಂದ ಬೆಂಗಳೂರಿನ ಡ್ರಾವಿಡ್‌– ಪಡುಕೋಣೆ ಕ್ರೀಡಾ ಶ್ರೇಷ್ಠತಾ ಕೇಂದ್ರದಲ್ಲಿ ತರಬೇತಿ ಶಿಬಿರ ನಡೆಸುವ ಮೂಲಕ ಅವರು ತಮ್ಮ ಕೆಲಸ ಆರಂಭಿಸಲಿದ್ದಾರೆ. 2012ರ ನಂತರ ಸೀನಿಯರ್ ತಂಡಕ್ಕೆ ಕೋಚ್‌ ಆದ ಮೊದಲ ಭಾರತೀಯ ಎನಿಸಿದ್ದಾರೆ.

ಸಿಎಎಫ್‌ಎ ನೇಷನ್ಸ್‌ ಕಪ್‌ ಟೂರ್ನಿಯು ಮೊದಲ ಸವಾಲು ಆಗಿದೆ. ಆ ಟೂರ್ನಿಯ ಬಿ ಗುಂಪಿನಲ್ಲಿರುವ ಭಾರತವು, ತಜಿಕಿಸ್ತಾನ (ಆ. 29ರಂದು), ಇರಾನ್ (ಸೆ. 1) ಮತ್ತು ಅಫ್ಗಾನಿಸ್ತಾನ (ಸೆ. 4) ತಂಡಗಳನ್ನು ಎದುರಿಸಲಿದೆ. ಅಕ್ಟೋಬರ್‌ನಲ್ಲಿ ಎಎಫ್‌ಸಿಎ ಏಷ್ಯನ್ ಕಪ್ (2027ರ) ಅರ್ಹತಾ ಟೂರ್ನಿಯಲ್ಲಿ ಭಾರತ ಆಡಲಿದೆ. ಸಿಂಗಪುರದಲ್ಲಿ ಅಕ್ಟೋಬರ್ 9 ಮತ್ತು 14ರಂದು ಎರಡು ಪಂದ್ಯಗಳನ್ನು ಆಡಬೇಕಾಗಿದೆ.

ಜಮೀಲ್‌ ಕೋಚಿಂಗ್‌ನಲ್ಲಿ 2016–17ನೇ ಸಾಲಿನಲ್ಲಿ ಐಜ್ವಾಲ್‌ ಎಫ್‌ಸಿ ಐಲೀಗ್ ಪ್ರಶಸ್ತಿ ಗೆದ್ದಿತ್ತು. ಈ ವರ್ಷ ಅವರ ತರಬೇತಿಯಡಿ ಜಮ್‌ಷೆಡ್‌ಪುರ ತಂಡ ಸೂಪರ್ ಕಪ್‌ ಫೈನಲ್ ತಲುಪಿತ್ತು. ಐಎಸ್‌ಎಲ್‌ನಲ್ಲಿ ಅವರು ಕೋಚ್‌ ಆಗಿ ಸಾಕಷ್ಟು ಅನುಭವ ಹೊಂದಿದ್ದಾರೆ. ಜಮ್‌ಷೆಡ್‌ಪುರ, ನಾರ್ತ್‌ಈಸ್ಟ್‌ ಯುನೈಟೆಡ್‌, ಐಜ್ವಾಲ್ ಎಫ್‌ಸಿ, ಈಸ್ಟ್‌ ಬೆಂಗಾಲ್‌, ಮೋಹನ್ ಬಾಗನ್ ಮತ್ತು ಮುಂಬೈ ಎಫ್‌ಸಿ ಅಂಥ ಘಟಾನುಘಟಿ ತಂಡಗಳಿಗೆ ಅವರು ತರಬೇತುದಾರರಾಗಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತವನ್ನು ಮುನ್ನಡೆಸಬಲ್ಲ ಮೂವರು ಆಟಗಾರರು!

ಮಿಡ್‌ಫೀಲ್ಡರ್ ಆಗಿ ಜಮೀಲ್ ಭಾರತ ತಂಡದ ಪರ 15 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಸಂತೋಷ್‌ ಟ್ರೋಫಿಯಲ್ಲಿ ಮಹಾರಾಷ್ಟ್ರ ತಂಡವನ್ನು ಪ್ರತಿನಿಧಿಸಿದ್ದರು.