SRH vs KKR: ಚಿರತೆ ವೇಗ, ರೋವ್ಮನ್ ಪೊವೆಲ್ ಒನ್ ಹ್ಯಾಂಡೆಡ್ ಕ್ಯಾಚ್‌ಗೆ ನೆಟ್ಟಿಗರು ಫಿದಾ
IPL 2026: ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಅವರ ಆಯ್ಕೆಯನ್ನು ಸಮರ್ಥಿಸಿಕೊಳ್ಳಲು ಬ್ಯಾಟರ್‌ಗಳು ವಿಫಲರಾದರು. ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ 44 ರನ್‌ಗಳ ಜೊತೆಯಾಟದೊಂದಿಗೆ ಆತಿಥೇಯರಿಗೆ ತ್ವರಿತ ಆರಂಭ ನೀಡಿದರೂ ಆ ಬಳಿಕಕ ತಂಡ ಹಠಾತ್ ಕುಸಿತ ಕಂಡು 165 ರನ್‌ಗೆ ಸರ್ವಪತನ ಕಂಡಿತು.
Rovman Powell -
ಹೈದರಾಬಾದ್, ಮೇ 3: ಭಾನುವಾರ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್(SRH vs KKR) ತಂಡದ ಸ್ಟಾರ್ ಆಟಗಾರ ರೋವ್ಮನ್ ಪೊವೆಲ್(Rovman Powell), ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟ್ಸ್‌ಮನ್ ಹೆನ್ರಿಕ್ ಕ್ಲಾಸೆನ್ ಅವರನ್ನು ಅದ್ಭುತ ಕ್ಯಾಚ್ ಮೂಲಕ ಔಟ್ ಮಾಡಿದರು. ಒಂದೇ ಕೈಯಲ್ಲಿ ಹಿಡಿದ ಈ ಕ್ಯಾಚ್ ಕಂಡು ನೆರೆದಿದ್ದ ಪ್ರೇಕ್ಷಕರು ಒಂದು ಕ್ಷಣ ದಂಗಾದರು. ಸದ್ಯ ಈ ಕ್ಯಾಚ್‌ನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಕ್ಯಾಮರೂನ್ ಗ್ರೀನ್ ಎಸೆದ ಓವರ್‌ನಲ್ಲಿ ಕ್ಲಾಸೆನ್ ಚೆಂಡನ್ನು ಬೀಸಿ ಹೊಡೆದರು. ಈ ವೇಳೆ ಲಾಂಗ್ ಬಳಿ ಇದ್ದ ಪೊವೆಲ್ ಒಂದೇ ಕೈಯಲ್ಲಿ ರನ್ನಿಂಗ್ ಕ್ಯಾಚ್ ಹಿಡಿದರು. ಈ ಕ್ಯಾಚ್ ಕಂಡು ಕಾಮೆಂಟ್ರಿ ಮಾಡುತ್ತಿದ್ದವರು ಓ..... ಚಿರತೆಯಂತೆ ವೇಗದ ಬೇಟೆ ಎಂದು ವರ್ಣಿಸಿದರು. ಕ್ಲಾಸೆನ್ 11 ರನ್‌ಗೆ ವಿಕೆಟ್ ಕಳೆದುಕೊಂಡರು.
It takes a stunner to send #HeinrichKlaasen packing! 🤯🔥#RovmanPowell covers massive ground and pulls off a one-handed diving catch to dismiss the danger man! 🫡#TATAIPL Revenge Week 2026 ➡️ #SRHvKKR | LIVE NOW 👉 https://t.co/YyLg9wqh6o pic.twitter.com/Dgp31wvLY8
— Star Sports (@StarSportsIndia) May 3, 2026
ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಅವರ ಆಯ್ಕೆಯನ್ನು ಸಮರ್ಥಿಸಿಕೊಳ್ಳಲು ಬ್ಯಾಟರ್‌ಗಳು ವಿಫಲರಾದರು. ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ 44 ರನ್‌ಗಳ ಜೊತೆಯಾಟದೊಂದಿಗೆ ಆತಿಥೇಯರಿಗೆ ತ್ವರಿತ ಆರಂಭ ನೀಡಿದರೂ ಆ ಬಳಿಕಕ ತಂಡ ಹಠಾತ್ ಕುಸಿತ ಕಂಡು 165 ರನ್‌ಗೆ ಸರ್ವಪತನ ಕಂಡಿತು.
SRH vs KKR: ಎಲ್ಲ ಆವೃತ್ತಿಯ ಐಪಿಎಲ್ ಪಂದ್ಯವಾಡಿ ಕೊಹ್ಲಿ, ರೋಹಿತ್ ಜತೆ ಎಲೈಟ್ ಪಟ್ಟಿ ಸೇರಿದ ಮನೀಷ್ ಪಾಂಡೆ
ತಂಡದ ಪರ ಟ್ರಾವಿಸ್ ಹೆಡ್, ಕೇವಲ 22 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಒಟ್ಟಾರೆ 61 ರನ್ ಗಳಿಸಿದರು. ಇಶಾನ್ ಕಿಶನ್ 41 ರನ್ ಬಾರಿಸಿದರು. ಉಭಯ ಆಟಗಾರರನ್ನು ಹೊರತುಪಡಿಸಿ ಉಳಿದವರು ವೈಫಲ್ಯ ಕಂಡರು. ಅಭಿಷೇಕ್ ಶರ್ಮ 15 ರನ್‌ಗೆ ಸೀಮಿತರಾದರು. ಕಳೆದ ಪಂದ್ಯಗಳಲ್ಲಿ ಸತತ ಬೌಲಿಂಗ್ ವೈಫಲ್ಯ ಕಂಡಿದ್ದ ಸ್ಪಿನ್ನರ್ ವರುಣ್ ಚಕ್ರವರ್ತಿ ಈ ಪಂದ್ಯದಲ್ಲಿ ತಮ್ಮ ಕೈಚಳಕ ತೋರುವ ಮೂಲಕ ಪ್ರಮುಖ 3 ವಿಕೆಟ್ ಕಿತ್ತರು. 2 ವಿಕೆಟ್ ಕಿತ್ತ ಸುನಿಲ್ ನರೈನ್ ಐಪಿಎಲ್‌ನಲ್ಲಿ 200 ವಿಕೆಟ್ ಪೂರ್ತಿಗೊಳಿಸಿದ ಸಾಧನೆಗೈದರು.
ತಂಡಗಳು
ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ XI): ಅಜಿಂಕ್ಯ ರಹಾನೆ(ನಾಯಕ), ಆಂಗ್ಕ್ರಿಶ್ ರಘುವಂಶಿ(ವಿ.ಕೀ.), ಕ್ಯಾಮರೂನ್ ಗ್ರೀನ್, ರೋವ್ಮನ್ ಪೊವೆಲ್, ಮನೀಶ್ ಪಾಂಡೆ, ರಿಂಕು ಸಿಂಗ್, ಅನುಕೂಲ್ ರಾಯ್, ಸುನಿಲ್ ನರೈನ್, ವೈಭವ್ ಅರೋರಾ, ಕಾರ್ತಿಕ್ ತ್ಯಾಗಿ, ವರುಣ್ ಚಕ್ರವರ್ತಿ.
ಇಂಪ್ಯಾಕ್ಟ್ ಆಟಗಾರರು: ಫಿನ್ ಅಲೆನ್, ರಮಣದೀಪ್ ಸಿಂಗ್, ತೇಜಸ್ವಿ ದಹಿಯಾ, ನವದೀಪ್ ಸೈನಿ, ಟಿಮ್ ಸೀಫರ್ಟ್.
ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI): ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ (ವಿ.ಕೀ.), ಹೆನ್ರಿಚ್ ಕ್ಲಾಸೆನ್, ಸಲೀಲ್ ಅರೋರಾ, ಅನಿಕೇತ್ ವರ್ಮಾ, ಸ್ಮರಣ್ ರವಿಚಂದ್ರನ್, ಪ್ಯಾಟ್ ಕಮಿನ್ಸ್ (ನಾಯಕ), ಶಿವಂಗ್ ಕುಮಾರ್, ಹರ್ಷಲ್ ಪಟೇಲ್, ಇಶನ್ ಮಾಲಿಂಗ.
ಇಂಪ್ಯಾಕ್ಟ್ ಆಟಗಾರರು: ಪ್ರಫುಲ್ ಹಿಂಗೆ, ಹರ್ಷ್ ದುಬೆ, ಲಿಯಾಮ್ ಲಿವಿಂಗ್‌ಸ್ಟೋನ್, ಸಾಕಿಬ್ ಹುಸೇನ್, ಜೀಶನ್ ಅನ್ಸಾರಿ.