ಆರತಕ್ಷತೆಯಲ್ಲಿ ರವೀಂದ್ರ ಜಡೇಜಾ ದಂಪತಿಯ ಪಾದ ಮುಟ್ಟಿ ಆಶೀರ್ವಾದ ಪಡೆದ ಕುಲದೀಪ್ ಯಾದವ್; ವಿಡಿಯೋ ವೈರಲ್
Kuldeep Yadav Touches Jadeja And His Wife's Feet: ಈ ಆರತಕ್ಷತೆ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್, ಕುಲದೀಪ್ ತಂಡದ ಸಹ ಆಟಗಾರರಾದ ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ಸೇರಿದಂತೆ ಇತರ ಗಣ್ಯರು ಭಾಗವಹಿಸಿದ್ದರು.
Ravindra Jadeja And His Wife -
ಲಖನೌ, ಮಾ.18: ಮಾರ್ಚ್ 14 ರಂದು ಉತ್ತರಾಖಂಡದ ಮಸ್ಸೂರಿಯಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ಭಾರತದ ಮಣಿಕಟ್ಟಿನ ಸ್ಪಿನ್ನರ್ ಕುಲದೀಪ್ ಯಾದವ್(Kuldeep Yadav) ತಮ್ಮ ಬಾಲ್ಯದ ಗೆಳತಿ ವಂಶಿಕಾ ಚಾಢಾ(Vanshika Chadha) ಅವರನ್ನು ವಿವಾಹವಾದರು. ಮಂಗಳವಾರ ಲಕ್ನೋದ ದಿ ಸೆಂಟ್ರಮ್‌ನಲ್ಲಿ ಅದ್ಧೂರಿ ಆರತಕ್ಷತೆ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಕ್ರಿಕೆಟ್ ಮತ್ತು ರಾಜಕೀಯ ವಲಯದ ಹಲವಾರು ಹಾಜರಿದ್ದರು. ಈ ಕಾರ್ಯಕ್ರಮದ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಗೆ ಹೃದಯಸ್ಪರ್ಶಿ ಕ್ಷಣಗಳನ್ನು ನೀಡಿತು. ಅಂತಹ ಒಂದು ಕ್ಲಿಪ್‌ನಲ್ಲಿ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ(Ravindra Jadeja) ಮತ್ತು ಅವರ ಪತ್ನಿ ರಿವಾಬಾ(Rivaba) ನವವಿವಾಹಿತ ದಂಪತಿಗಳನ್ನು ವೇದಿಕೆಯಲ್ಲಿ ಆಶೀರ್ವದಿಸುತ್ತಿರುವ ವಿಡಿಯೊ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಜಡೇಜಾ ಮತ್ತು ರಿವಾಬಾ ಸೊಗಸಾಗಿ ಉಡುಗೆ ತೊಟ್ಟು ದಂಪತಿಗಳಿಗೆ ಹೂವಿನ ಗುಚ್ಛವನ್ನು ನೀಡುತ್ತಿರುವುದು ಕಂಡುಬರುತ್ತದೆ. ವೇದಿಕೆಗೆ ಬಂದ ಜಡೇಜಾ ದಂಪತಿಗಳ ಪಾದಗಳನ್ನು ಮುಟ್ಟಿ ಕುಲ್‌ದೀಪ್ ಮತ್ತು ವಂಶಿಕಾ ಇಬ್ಬರಿಂದಲೂ ಆಶೀರ್ವಾದ ಪಡೆದರು.
Kuldeep Yadav touched the feet of Rivaba and Ravindra Jadeja.
— Tejash (@Tejashyyyyy) March 18, 2026
The way Rivaba blessed Kuldeep was heartwarming 🤌❤️ pic.twitter.com/FGwsl6nH1r
ಈ ಆರತಕ್ಷತೆ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್, ಕುಲದೀಪ್ ತಂಡದ ಸಹ ಆಟಗಾರರಾದ ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ಸೇರಿದಂತೆ ಇತರ ಗಣ್ಯರು ಭಾಗವಹಿಸಿದ್ದರು
ಶಿಖರ್ ಧವನ್, ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ, ಆರತಕ್ಷತೆಯ ಚಿತ್ರಗಳನ್ನು ಹಂಚಿಕೊಂಡು ದಂಪತಿಗಳಿಗೆ ಅಭಿನಂದನೆ ಸಲ್ಲಿಸಿದ್ದರು. "ಸುಂದರ ದಂಪತಿಗಳಾ ಕುಲ್‌ದೀಪ್ ಮತ್ತು ವಂಶಿಕಾ ಅವರಿಗೆ ಅಭಿನಂದನೆಗಳು. ನಿಮ್ಮಿಬ್ಬರಿಗೂ ಪ್ರೀತಿ ಮತ್ತು ಸಂತೋಷದ ಜೀವನ ಸಿಗಲಿ ಎಂದು ಹಾರೈಸುತ್ತೇನೆ" ಎಂದು ಧವನ್ ಹಾರೈಸಿದ್ದರು.
ಕೇಂದ್ರ ಗುತ್ತಿಗೆ ಪರಿಷ್ಕರಣೆಗೆ ಬಿಸಿಸಿಐ ಚಿಂತನೆ; ಬುಮ್ರಾಗೆ ಎ ಪ್ಲಸ್ ಶ್ರೇಣಿ
17 ಟೆಸ್ಟ್, 120 ಏಕದಿನ ಮತ್ತು 54 ಟಿ20ಐಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಕುಲದೀಪ್, ವಂಶಿಕಾ ಜೊತೆಗೆ ವಿಂಟೇಜ್ ರೋಲ್ಸ್ ರಾಯ್ಸ್ ಕಾರಿನಲ್ಲಿ ಆರತಕ್ಷತೆಗೆ ಆಗಮಿಸಿದ್ದರು. ಜೂನ್ 4, 2025 ರಂದು ಕಾನ್ಪುರದಲ್ಲಿ ವಂಶಿಕಾ ಅವರೊಂದಿಗೆ ಕುಲ್‌ದೀಪ್ ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿ ಕೊಂಡಿದ್ದರು. ವಂಶಿಕಾ 2017 ರಲ್ಲಿ ಸೇಂಟ್ ಮೇರಿ ಶಾಲೆಯಲ್ಲಿ ಪದವಿ ಪಡೆದರು. ನಂತರ ಹೆಚ್ಚಿನ ಅಧ್ಯಯನಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಿದರು. ವಂಶಿಕಾ ಮನೆಯಿಂದ ಕುಲ್‌ದೀಪ್ ಮನೆ ಕೇವಲ ಮೂರು ಕೀ.ಮಿ ಇದೆ.
ಈ ಬಾರಿಯ ವಿಶ್ವಕಪ್ನಲ್ಲಿ ಕುಲ್‌ದೀಪ್‌ಗೆ ಕೇವಲ ಒಂದು ಪಂದ್ಯವನ್ನಾಡುವ ಅವಕಾಶ ಮಾತ್ರ ಲಭಿಸಿತ್ತು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡಿದ್ದ ಅವರು 14 ರನ್ಗಳಿಗೆ 1 ವಿಕೆಟ್ ಕಬಳಿಸಿದ್ದರು.