ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವರ್ಣ ತಾರತಮ್ಯ; ವೀಕ್ಷಕ ವಿವರಣೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ ಲಕ್ಷ್ಮಣ್ ಶಿವರಾಮಕೃಷ್ಣನ್

Laxman Sivaramakrishnan:1984ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಲಕ್ಷ್ಮಣ್ ಶಿವರಾಮಕೃಷ್ಣನ್ ಒಟ್ಟು 12 ವಿಕೆಟ್ ಗಳಿಸಿ ಗೆಲುವಿನ ರೂವಾರಿಯಾಗಿದ್ದರು ನಿವೃತ್ತಿಯ ನಂತರ ಅವರು ಐಸಿಸಿ ಕ್ರಿಕೆಟ್ ಸಮಿತಿಯಲ್ಲಿಯೂ ಆಟಗಾರರ ಪ್ರತಿನಿಧಿಯಾಗಿದ್ದರು. ಭಾರತ ಪರ 9 ಟೆಸ್ಟ್‌(26 ವಿಕೆಟ್‌), 16 ಏಕದಿನ(15 ವಿಕೆಟ್‌) ಆಡಿದ್ದಾರೆ.

ವೀಕ್ಷಕ ವಿವರಣೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ ಲಕ್ಷ್ಮಣ್ ಶಿವರಾಮಕೃಷ್ಣನ್

Laxman Sivaramakrisnan -

Abhilash BC
Abhilash BC Mar 21, 2026 10:20 AM

ಚೆನ್ನೈ, ಮಾ.21: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ವೀಕ್ಷಕ ವಿವರಣೆಗಾರ ಸ್ಥಾನಕ್ಕೆ ಮಾಜಿ ಲೆಗ್‌ಸ್ಟಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್(Laxman Sivaramakrishnan) ದಿಢೀರ್‌ ರಾಜೀನಾಮೆ ನೀಡಿದ್ದು, ತಮ್ಮನ್ನು ‘ವರ್ಣ ತಾರತಮ್ಯ’ಕ್ಕೆ ಗುರಿಪಡಿಸಲಾಗಿದೆ ಎಂದು ಬಿಸಿಸಿಐ(BCCI) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

‘ಎಕ್ಸ್‌’ ಖಾತೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು ತಮ್ಮನ್ನು ‘ಟಾಸ್ ಮಾಡುವಾಗ ಮತ್ತು ಪಂದ್ಯದ ಪ್ರಶಸ್ತಿ ಪ್ರದಾನ ಸಮಾರಂಭದ ಸಂದರ್ಭಗಳಲ್ಲಿ ನಿರೂಪಣೆಗೆ ಅವಕಾಶ ನೀಡುತ್ತಿಲ್ಲ. ಆದ್ದರಿಂದ ವೀಕ್ಷಕ ವಿವರಣೆಗಾರ ವೃತ್ತಿಗೆ ತೆರೆ ಎಳೆಯುತ್ತಿದ್ದೇನೆ. ನನ್ನನ್ನು ‘ವರ್ಣ ತಾರತಮ್ಯ’ಕ್ಕೆ ಗುರಿಪಡಿಸಲಾಗಿದೆʼ ಎಂದು ಅವರು ಆರೋಪಿಸಿದ್ದಾರೆ.

ಇನ್ನೊಂದು ಟ್ವೀಟ್‌ನಲ್ಲಿ ‘ಬಿಸಿಸಿಐನ ಪ್ರಸಾರ ಹಕ್ಕುಗಳನ್ನು ಪಡೆದಿರುವ ಕಂಪೆನಿಯೊಂದು ಇಂತಹ ಧೋರಣೆ ತೋರುತ್ತಿರುವುದು ಯಾಕೆಂದು ಊಹಿಸಬಲ್ಲಿರಾ’? ಎಂದೂ ಅವರು ಇನ್ನೊಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

‘23 ವರ್ಷಗಳಿಂದ ನಾನು ಕಾಮೆಂಟ್ರಿ ಮಾಡುತ್ತಿರುವೆ. ಆದರೆ ಟಾಸ್ ಹಾಕುವಾಗ ಮತ್ತು ‘23 ವರ್ಷಗಳಿಂದ ನಾನು ಕಾಮೆಂಟ್ರಿ ಮಾಡುತ್ತಿರುವೆ. ಆದರೆ ಟಾಸ್ ಹಾಕುವಾಗ ಮತ್ತು ಪ್ರಶಸ್ತಿ ಪ್ರದಾನ ಮಾಡುವ ಸಂದರ್ಭಗಳಲ್ಲಿ ನನಗೆ ನಿರೂಪಣೆಗೆ ಅವಕಾಶ ಕೊಡುತ್ತಿಲ್ಲ. ಹೊಸದಾಗಿ ಬರುತ್ತಿರುವ ವೀಕ್ಷಕ ವಿವರಣೆಗಾರರೂ ಟಾಸ್ ಮತ್ತು ಪ್ರಶಸ್ತಿ ನಿರೂಪಣೆ ಮಾಡುತ್ತಿದ್ದಾರೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

60 ವರ್ಷದ ಶಿವರಾಮಕೃಷ್ಣನ್, 80ರ ದಶಕದಲ್ಲಿ ತಮ್ಮ 17ನೇ ವಯಸ್ಸಿನಲ್ಲಿಯೇ ದೇಶಿ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿದ್ದರು. ಮೊನಚಾದ ಲೆಗ್‌ಸ್ಪಿನ್, ಟಾಪ್ ಸ್ಪಿನ್ ಮತ್ತು ನಿಖರವಾದ ಗೂಗ್ಲಿಗಳ ಮೂಲಕ ಎದರಾಳಿ ಬ್ಯಾಟರ್‌ಗಳನ್ನು ಕಂಗೆಡಿಸುತ್ತಿದ್ದರು. ಭಾರತ ಪರ 9 ಟೆಸ್ಟ್‌(26 ವಿಕೆಟ್‌), 16 ಏಕದಿನ(15 ವಿಕೆಟ್‌) ಆಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 76 ಪಂದ್ಯಗಳನ್ನಾಡಿ 154 ವಿಕೆಟ್‌ ಕಿತ್ತಿದ್ದಾರೆ.

ಐಪಿಎಲ್‌ ಆರಂಭಕ್ಕೆ ಮುನ್ನ ಸಹ ಆಟಗಾರರಿಗೆ ಖಡಕ್‌ ಎಚ್ಚರಿಕೆ ನೀಡಿದ ಕೊಹ್ಲಿ!

1984ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು ಒಟ್ಟು 12 ವಿಕೆಟ್ ಗಳಿಸಿ ಗೆಲುವಿನ ರೂವಾರಿಯಾಗಿದ್ದರು ನಿವೃತ್ತಿಯ ನಂತರ ಅವರು ಐಸಿಸಿ ಕ್ರಿಕೆಟ್ ಸಮಿತಿಯಲ್ಲಿಯೂ ಆಟಗಾರರ ಪ್ರತಿನಿಧಿಯಾಗಿದ್ದರು.