ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಐಪಿಎಲ್‌ ಆರಂಭಕ್ಕೆ ಮುನ್ನ ಸಹ ಆಟಗಾರರಿಗೆ ಖಡಕ್‌ ಎಚ್ಚರಿಕೆ ನೀಡಿದ ಕೊಹ್ಲಿ!

Virat Kohli Warns RCB Teammates: ಆರ್‌ಸಿಬಿ ತನ್ನ ಇತಿಹಾಸದ ಬಹುಪಾಲು ಕಾಲ ಚೋಕರ್ಸ್‌ ಫ್ರಾಂಚೈಸಿಯಾಗಿತ್ತು. ವಿಶ್ವದ ಕೆಲವು ಅತ್ಯುತ್ತಮ ಪ್ರತಿಭೆಗಳನ್ನು ಹೊಂದಿದ್ದರೂ, ಅದು 17 ವರ್ಷಗಳ ಕಾಲ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ 2025 ರಲ್ಲಿ ತನ್ನ ಚೊಚ್ಚಲ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಆರ್‌ಸಿಬಿ ಸಹ ಆಟಗಾರರಿಗೆ ಖಡಕ್‌ ಎಚ್ಚರಿಕೆ ನೀಡಿದ ಕೊಹ್ಲಿ!

Virat Kohli Warns RCB Teammates -

Abhilash BC
Abhilash BC Mar 21, 2026 9:33 AM

ಬೆಂಗಳೂರು, ಮಾ.21: ಬಹುನಿರೀಕ್ಷಿತ ಐಪಿಎಲ್‌(IPL 2026)ನ 19ನೇ ಆವೃತ್ತಿಯ ಟೂರ್ನಿ ಆರಂಭಕ್ಕೆ ಇನ್ನು ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿದೆ. ಮಾ.28ರಂದು ಟೂರ್ನಿಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದ್ದು, ಹಾಲಿ ಚಾಂಪಿಯನ್‌ ಆರ್‌ಸಿಬಿ(Virat Kohli) ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌(RCB vs SRH) ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಸೆಣಸಾಡಲಿವೆ. ಪಂದ್ಯಾವಳಿ ಆರಂಭಕ್ಕೂ ಮುನ್ನ ಆರ್‌ಸಿಬಿ ಆಟಗಾರರಿಗೆ ವಿರಾಟ್‌ ಕೊಹ್ಲಿ ಖಡಕ್(Virat Kohli Warns RCB Teammates) ಎಚ್ಚರಿಕೆಯೊಂದನ್ನು ನೀಡಿದ್ದಾರೆ. ತಂಡದ ಸಹ ಆಟಗಾರರಿಗೆ IPL 2026ರ ಸೀಸನ್ ಕಠಿಣವಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ.

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ RCB ಯ ಈ ಋತುವಿನ ಮೊದಲ ತರಬೇತಿ ಅವಧಿಯಲ್ಲಿ, ಸಹ ಆಟಗಾರರನ್ನು ಉದ್ದೇಶಿಸಿ ಭಾವೋದ್ರಿಕ್ತ ಮಾತುಗಳನ್ನಾಡಿ ಮುಂದಿನ ಕೆಲವು ವಾರಗಳವರೆಗೆ ತಮ್ಮ ಶೇ. 120ರಷ್ಟು ಪ್ರದರ್ಶನ ನೀಡುವಂತೆ ಒತ್ತಾಯಿಸಿದರು.

ಆರ್‌ಸಿಬಿ ತನ್ನ ಇತಿಹಾಸದ ಬಹುಪಾಲು ಕಾಲ ಚೋಕರ್ಸ್‌ ಫ್ರಾಂಚೈಸಿಯಾಗಿತ್ತು. ವಿಶ್ವದ ಕೆಲವು ಅತ್ಯುತ್ತಮ ಪ್ರತಿಭೆಗಳನ್ನು ಹೊಂದಿದ್ದರೂ, ಅದು 17 ವರ್ಷಗಳ ಕಾಲ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ 2025 ರಲ್ಲಿ ತನ್ನ ಚೊಚ್ಚಲ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

"ಕಳೆದ ವರ್ಷ ನಾವು ಮಾಡಿದ್ದನ್ನು ಸಾಧಿಸಲು ಕಳೆದ ಎರಡು ಮೂರು ಋತುಗಳಲ್ಲಿ ನಾವು ನಿಜವಾಗಿಯೂ ಶ್ರಮಿಸಿದ್ದೇವೆ, ಮತ್ತು ಇದು ಇನ್ನಷ್ಟು ಕಠಿಣವಾಗಲಿದೆ ಏಕೆಂದರೆ ಇತರ ತಂಡಗಳು ನಮ್ಮ ಮೇಲೆ ಕಠಿಣವಾಗಿ ದಾಳಿ ಮಾಡುತ್ತವೆ" ಎಂದು ಕೊಹ್ಲಿ ಹೇಳಿದರು.

IPL 2026: ಆರ್‌ಸಿಬಿಗೆ ಪಂದ್ಯ ಗೆದ್ದುಕೊಡಬಲ್ಲ ಐವರು ಸ್ಟಾರ್‌ ಆಟಗಾರರು!

"ನಾವು ಭಾಗವಾಗಿರುವ ಪ್ರತಿಯೊಂದು ತರಬೇತಿ ಸೆಷನ್‌ನ ಒಂದು ನಿಮಿಷವನ್ನೂ ವ್ಯರ್ಥ ಮಾಡಬಾರದು. ಈ ಎರಡೂವರೆ ತಿಂಗಳು ನಾವು ನಮ್ಮ 120% ಅನ್ನು ನೀಡಬೇಕು. ನಾವು ಸವಾಲೊಡ್ಡುವವರಾಗಲು ಸಾಕಷ್ಟು ಉತ್ಸುಕರಾಗಿದ್ದೇವೆ ಎಂದು ಎಲ್ಲರ ಮುಖಗಳಿಂದ ನಾನು ನೋಡಬಹುದು" ಎಂದು ಕೊಹ್ಲಿ ಹೇಳಿದರು.

ಐಪಿಎಲ್‌ಗೂ ಮುನ್ನ ಬಿಸಿಸಿಐ ಎಲ್ಲಾ ತಂಡಗಳಿಗೆ ಹೊಸ ಮಾರ್ಗಸೂಚಿಗಳನ್ನು ನೀಡಿದೆ. ಈ ಮಾರ್ಗಸೂಚಿಗಳ ಪ್ರಕಾರವೇ ಅಭ್ಯಾಸ ನಡೆಸಬೇಕೆಂದು ತಿಳಿಸಲಾಗಿದೆ. ಯಾವುದೇ ತಂಡವು ಅಭ್ಯಾಸದ ವೇಳೆ ತನ್ನ ಪ್ರತಿಸ್ಪರ್ಧಿ ತಂಡ ಬಳಸಿದ ಪಿಚ್ ಅಥವಾ ನೆಟ್‌ ಬಳಸುವಂತಿಲ್ಲ. ಪ್ರತಿ ಸೆಷನ್‌ಗೂ ಹೊಸ ಪಿಚ್‌ ನೀಡಬೇಕು. ಪ್ರತಿ ತಂಡವು ಗರಿಷ್ಠ 2 ಅಭ್ಯಾಸ ಪಂದ್ಯ ಮಾತ್ರ ಆಡಬಹುದು ಮತ್ತು ಅದಕ್ಕಾಗಿ ಮಂಡಳಿಯಿಂದ ಪೂರ್ವಾನುಮತಿ ಕಡ್ಡಾಯ. ಫ್ಲಡ್‌ಲೈಟ್‌ಗಳ ಅಡಿಯಲ್ಲಿ ನಡೆಯುವ ಅಭ್ಯಾಸ ಪಂದ್ಯಗಳು 3.5 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಾರದು ಎಂದು ನಿಯಮ ರೂಪಿಸಿದೆ.