ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

LSG vs RCB: ಬರೋಬ್ಬರಿ 1,110 ದಿನಗಳ ಬಳಿಕ ಐಪಿಎಲ್‌ನಲ್ಲಿ ಶೂನ್ಯ ಸುತ್ತಿದ ವಿರಾಟ್‌ ಕೊಹ್ಲಿ!

Virat Kohli: ಏಪ್ರಿಲ್ 23, 2017 ರಂದು ಕೋಲ್ಕತ್ತಾದಲ್ಲಿ ಕೆಕೆಆರ್ ವಿರುದ್ಧ (3301 ದಿನಗಳ ಹಿಂದೆ) ಡಕ್ ಔಟ್ ಆದ ನಂತರ, ಗುರುವಾರ ಎಲ್‌ಎಸ್‌ಜಿ ವಿರುದ್ಧದ ಶೂನ್ಯವು ಐಪಿಎಲ್ ಪಂದ್ಯದ ರನ್ ಚೇಸ್‌ನಲ್ಲಿ ಕೊಹ್ಲಿ ದಾಖಲಿಸಿದ ಮೊದಲ ಶೂನ್ಯವಾಗಿದೆ.

ಬರೋಬ್ಬರಿ 1,110 ದಿನಗಳ ಬಳಿಕ ಐಪಿಎಲ್‌ನಲ್ಲಿ ಶೂನ್ಯ ಸುತ್ತಿದ ಕೊಹ್ಲಿ!

Virat Kohli -

Abhilash BC
Abhilash BC May 8, 2026 6:50 AM

ಲಖನೌ, ಮೇ 8: ಗುರುವಾರ ನಡೆದಿದ್ದ ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL 2026)ನ 50ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಆತಿಥೇಯ ಲಖನೌ ಸೂಪರ್‌ ಜೈಂಟ್ಸ್‌(LSG vs RCB) ವಿರುದ್ಧ 6 ರನ್‌ ಅಂತರದ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ(Virat Kohli) ಶೂನ್ಯಕ್ಕೆ ಔಟಾದರು. ಇದು ಮೂರು ವರ್ಷಗಳ ಬಳಿಕ ಐಪಿಎಲ್‌ನಲ್ಲಿ ಕೊಹ್ಲಿ ಶೂನ್ಯಕ್ಕೆ ಔಟಾದ ಮೊದಲ ನಿದರ್ಶನ.

ಹೌದು, ಕೊಹ್ಲಿ ಈ ಹಿಂದೆ ಏಪ್ರಿಲ್ 23, 2023 ರಂದು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಟ್ರೆಂಟ್ ಬೌಲ್ಟ್ ಎಸೆತಕ್ಕೆ ಗೋಲ್ಡನ್‌ ಡಕ್‌ ಆಗಿದ್ದರು. ಇದೀಗ 1,110 ದಿನಗಳ ಅಂತರ ಶೂನ್ಯಕ್ಕೆ ವಿಕೆಟ್‌ ಕಳೆದುಕೊಂಡರು. ಪ್ರಿನ್ಸ್ ಯಾದವ್ ಈ ಬಾರಿ ಕೊಹ್ಲಿಯ ವಿಕೆಟ್‌ ಕೆಡವಿದರು. ಅದು ಕ್ಲೀನ್‌ ಬೌಲ್ಡ್‌ ಮಾಡುವ ಮೂಲಕ.

ಏಪ್ರಿಲ್ 23, 2017 ರಂದು ಕೋಲ್ಕತ್ತಾದಲ್ಲಿ ಕೆಕೆಆರ್ ವಿರುದ್ಧ (3301 ದಿನಗಳ ಹಿಂದೆ) ಡಕ್ ಔಟ್ ಆದ ನಂತರ, ಗುರುವಾರ ಎಲ್‌ಎಸ್‌ಜಿ ವಿರುದ್ಧದ ಶೂನ್ಯವು ಐಪಿಎಲ್ ಪಂದ್ಯದ ರನ್ ಚೇಸ್‌ನಲ್ಲಿ ಕೊಹ್ಲಿ ದಾಖಲಿಸಿದ ಮೊದಲ ಶೂನ್ಯವಾಗಿದೆ.

ಆರ್‌ಸಿಬಿ ಪರ ಅತ್ಯಧಿಕ ಶೂನ್ಯ ಸಾಧನೆ

ಐಪಿಎಲ್‌ನಲ್ಲಿ ಕೊಹ್ಲಿಯ 11 ನೇ ಶೂನ್ಯ ಸಂಪಾದನೆ ಇದಾಗಿದೆ. ಬೆಂಗಳೂರು ಮೂಲದ ಫ್ರಾಂಚೈಸಿಗಾಗಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಶೂನ್ಯ ಸಂಪಾದನೆ ಮಾಡಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅವರು ಅಗ್ರಸ್ಥಾನದಲ್ಲಿದ್ದಾರೆ. ಆರ್‌ಸಿಬಿ ಪರ ಕೊಹ್ಲಿ 277 ಐಪಿಎಲ್ ಪಂದ್ಯಗಳಲ್ಲಿ 11 ಬಾರಿ ಶೂನ್ಯ ಸಂಪಾದನೆ ಮಾಡಿದ್ದರೆ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಎಬಿ ಡಿವಿಲಿಯರ್ಸ್ ಕ್ರಮವಾಗಿ 52 ಮತ್ತು 156 ಐಪಿಎಲ್ ಪಂದ್ಯಗಳಲ್ಲಿ ತಲಾ 8 ಬಾರಿ ಶೂನ್ಯ ಸಂಪಾದನೆ ಮಾಡಿ ಎರಡನೇ ಸ್ಥಾನದಲ್ಲಿದ್ದಾರೆ.



ಪಂದ್ಯ ಸೋತ ಆರ್‌ಸಿಬಿ

ಪಂದ್ಯದ ಬಗ್ಗೆ ಹೇಳುವುದಾದರೆ, ಏಕನಾ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮಾರ್ಷ್‌ ಅವರ ಶತಕದ ಬಲದಿಂದ ಲಖನೌ ತಂಡವು 19 ಓವರ್‌ಗಳಲ್ಲಿ 3 ವಿಕೆಟ್‌ಗೆ 209 ರನ್ ಗಳಿಸಿತು ಸವಾಲಿನ ಗುರಿ ಬೆನ್ನಟ್ಟಿದ ಆರ್‌ಸಿಬಿ 6 ವಿಕೆಟ್‌ಗೆ 203 ರನ್‌ ಗಳಿಸಲಷ್ಟೇ ಶಕ್ತವಾಯಿತು. ಕೊನೆಯ ಓವರ್‌ನಲ್ಲಿ ಆರ್‌ಸಿಬಿ ಗೆಲುವಿಗೆ 20 ರನ್‌ ಅಗತ್ಯವಿತ್ತು. ಲಖನೌ ನಾಯಕ ಪಂತ್‌ ಚೆಂಡನ್ನು ಸ್ಪಿನ್ನರ್‌ ದಿಗ್ವೇಶ್‌ಗೆ ನೀಡಿದರು. ಕೇವಲ 10 ರನ್‌ ಬಿಟ್ಟುಕೊಟ್ಟ ದಿಗ್ವೇಶ್‌, ಲಖನೌ ತಂಡಕ್ಕೆ ಲೀಗ್‌ನಲ್ಲಿ ಎರಡನೇ ಗೆಲುವು ತಂದುಕೊಟ್ಟರು.

RCB vs LSG: ಮಿಚೆಲ್‌ ಮಾರ್ಷ್‌ ಶತಕದ ಬಲದಿಂದ ಗೆದ್ದ ಲಖನೌ, ಆರ್‌ಸಿಬಿಗೆ ಸತತ ಎರಡನೇ ಸೋಲು!

ಆರ್‌ಸಿಬಿ ಪರ ರಜತ್ ಪಾಟೀದಾರ್ (61), ಟಿಮ್‌ ಡೇವಿಡ್‌ (40), ಕೃಣಾಲ್‌ ಪಾಂಡ್ಯ (28*) ಹಾಗೂ ರೊಮಾರಿಯೊ ಶೆಫರ್ಡ್‌ (ಔಟಾಗದೇ 23) ಹೋರಾಟ ತೋರಿದರಾದರೂ ಗೆಲುವು ಒಲಿಯಲಿಲ್ಲ. ಆರ್‌ಸಿಬಿ ಗೆಲುವು ಸಾಧಿಸಿದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುತ್ತಿತ್ತು.