ಧೋನಿ ನಿವೃತ್ತಿ ನಿರ್ಧಾರ ಫ್ರಾಂಚೈಸಿಗೆ ತಿಳಿಸಿದ್ದೇಗೆ? ಬಹಿರಂಗಪಡಿಸಿದ ಮಾಲಕಿ ರೂಪಾ
MS Dhoni retires from IPL: ಐಪಿಎಲ್ 2027ಕ್ಕಾಗಿ ಸಿಎಸ್‌ಕೆ ತಂಡದಿಂದ ಬಿಡುಗಡೆ ಮಾಡಬೇಕಾದ ಆಟಗಾರರು ಮತ್ತು ಹರಾಜು ತಂತ್ರದ ಕುರಿತಾದ ಚರ್ಚೆಯಲ್ಲಿ ಭಾಗವಹಿಸಿದ್ದ ಧೋನಿ, ತಮ್ಮ ಹೆಸರನ್ನು ಸಹ ಬಿಡುಗಡೆ ಮಾಡಬೇಕಾದ ಆಟಗಾರರ ಪಟ್ಟಿಗೆ ಸೇರಿಸುವಂತೆ ಕೇಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು ಎಂದು ರೂಪಾ ಗುರುನಾಥ್ ತಿಳಿಸಿದರು.
MS Dhoni -
ಚೆನ್ನೈ, ನ.17: ಚೆನ್ನೈ ಸೂಪರ್ ಕಿಂಗ್ಸ್ ತಂಡದ ದಿಗ್ಗಜ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರು ಐಪಿಎಲ್‌ಗೆ ನಿವೃತ್ತಿ ಪ್ರಕಟಿಸಿದ್ದಾರೆ. ಆದರೆ ಐಪಿಎಲ್ ನಂಟನ್ನು ಮುಂದುವರಿಸಿದ್ದಾರೆ. ಇನ್ನು ಮುಂದೆ ಚೆನ್ನೈ ತಂಡದ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಧೋನಿ ತಮ್ಮ ನಿವೃತ್ತಿ ನಿರ್ಧಾರ ಫ್ರಾಂಚೈಸಿಗೆ ಯಾವ ರೀತಿಯಾಗಿ ತಿಳಿಸಿದರು ಎಂಬ ವಿಚಾರವನ್ನು ತಂಡದ ಮಾಲಕಿ ರೂಪಾ ಗುರುನಾಥ್ ಬಹಿರಂಗಪಡಿಸಿದ್ದಾರೆ.
ಶನಿವಾರ ನಡೆದ ವಿಡಿಯೋ ಕರೆಯಲ್ಲಿ, ಎಂ.ಎಸ್. ಧೋನಿ ಅವರು ಐಪಿಎಲ್‌ನಿಂದ ಆಟಗಾರನಾಗಿ ನಿವೃತ್ತಿಯಾಗುವ ತಮ್ಮ ನಿರ್ಧಾರದ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ (CSK) ಫ್ರಾಂಚೈಸಿಗೆ ಶಾಂತವಾಗಿ ತಿಳಿಸಿದರು ಎಂದು ರೂಪಾ ಗುರುನಾಥ್ ತಿಳಿಸಿದರು.
ಐಪಿಎಲ್ 2027ಕ್ಕಾಗಿ ಸಿಎಸ್‌ಕೆ ತಂಡದಿಂದ ಬಿಡುಗಡೆ ಮಾಡಬೇಕಾದ ಆಟಗಾರರು ಮತ್ತು ಹರಾಜು ತಂತ್ರದ ಕುರಿತಾದ ಚರ್ಚೆಯಲ್ಲಿ ಭಾಗವಹಿಸಿದ್ದ ಧೋನಿ, ತಮ್ಮ ಹೆಸರನ್ನು ಸಹ ಬಿಡುಗಡೆ ಮಾಡಬೇಕಾದ ಆಟಗಾರರ ಪಟ್ಟಿಗೆ ಸೇರಿಸುವಂತೆ ಕೇಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು ಎಂದರು.
From the heart of Mrs. Rupa Gurunath - Owner, Chennai Super Kings Read More : https://t.co/AFjZ5yiuN4 https://t.co/Dncjo7kGDa
— Chennai Super Kings (@ChennaiIPL) November 17, 2026
ಮುಂದಿನ ಋತುವಿಗಾಗಿ ಸಿಎಸ್‌ಕೆ (CSK) ಹೊಂದಿರುವ ಯೋಜನೆಗಳ ಸುತ್ತವೇ ಹೆಚ್ಚಾಗಿ ಕೇಂದ್ರೀಕೃತವಾಗಿದ್ದ ಆ ದೂರವಾಣಿ ಸಂಭಾಷಣೆಯು, ಕೊನೆಯ ಹಂತದಲ್ಲಿ ಹೇಗೆ ಸಾಗಿತು ಎಂಬುದನ್ನು ರೂಪಾ ನೆನಪಿಸಿಕೊಂಡರು.
"ಶನಿವಾರ ನಾವು ನಮ್ಮ ತಂಡದಿಂದ ಕೈಬಿಡಲಿರುವ ಆಟಗಾರರ ಬಗ್ಗೆ ಚರ್ಚಿಸಲು ಕರೆ (call) ಒಂದರಲ್ಲಿ ತೊಡಗಿದ್ದೆವು. ಕ್ರಿಕೆಟ್‌ಗೆ ಸಂಬಂಧಿಸಿದ ಸಾಕಷ್ಟು ವಿಷಯಗಳ ಬಗ್ಗೆ ಚರ್ಚೆ ನಡೆಸಿದೆವು. ಮುಂದಿನ ಸೀಸನ್‌ಗಾಗಿ ಯಾವ ರೀತಿಯ ತಂತ್ರ ರೂಪಿಸಬೇಕು ಮತ್ತು ಯಾರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂಬುದರ ಕುರಿತು ಯೋಚಿಸುತ್ತಿದ್ದೆವು. ಸಾಕಷ್ಟು ಚರ್ಚೆಗಳ ನಂತರ, ಕರೆಯ ಕೊನೆಯಲ್ಲಿ ಕಾಶಿ ಅವರು ತಂಡದಿಂದ ಕೈಬಿಡಲಿರುವ ಆಟಗಾರರ ಪಟ್ಟಿಯನ್ನು ಓದುತ್ತಿದ್ದರು. ಆಗ ಧೋನಿ ಬಹಳ ಶಾಂತವಾಗಿ, 'ಬಹುಶಃ ನನ್ನ ಹೆಸರನ್ನೂ ಅದರಲ್ಲಿ ಸೇರಿಸಿಕೊಳ್ಳಬೇಕು' ಎಂದು ಹೇಳಿದರು" ಎಂದು ಸಿಎಸ್‌ಕೆ ಸಂಸ್ಥೆಯು 'ಎಕ್ಸ್' (X) ತಾಣದಲ್ಲಿ ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ ರೂಪಾ ತಿಳಿಸಿದ್ದಾರೆ.
ಐಪಿಎಲ್‌ನಿಂದ ನಿವೃತ್ತರಾದ ಎಂ.ಎಸ್. ಧೋನಿ; ಸಿಎಸ್‌ಕೆ ತಂಡಕ್ಕೆ ಮೆಂಟರ್ ಆಗಿ ಹೊಸ ಜವಾಬ್ದಾರಿ
ಈ ಘೋಷಣೆಯು ಎಲ್ಲರನ್ನೂ ಅಚ್ಚರಿಗೊಳಿಸಿತು. ಧೋನಿ ತಮ್ಮ ಹೇಳಿಕೆಯನ್ನು ನೀಡಿದ ಕೆಲವೇ ಕ್ಷಣಗಳಲ್ಲಿ ವಿಡಿಯೋ ಕರೆ ಇದ್ದಕ್ಕಿದ್ದಂತೆ ಕಡಿತಗೊಂಡಿದ್ದನ್ನು ರೂಪಾ ನೆನಪಿಸಿಕೊಂಡರು.
ಸಿಎಸ್‌ಕೆ ತಂಡದ ಮಾಜಿ ಮಾಲೀಕ ಎನ್. ಶ್ರೀನಿವಾಸನ್ ಕೂಡ ಧೋನಿ ಅವರಿಗೆ ಗೌರವ ಸಲ್ಲಿಸಿದರು. 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದಲೂ ತಮ್ಮಿಬ್ಬರ ನಡುವೆ ಇದ್ದ ನಂಬಿಕೆ ಮತ್ತು ಬಾಂಧವ್ಯವನ್ನು ಅವರು ಈ ಸಂದರ್ಭದಲ್ಲಿ ನೆಪಿಸಿಕೊಂಡರು.
endrum thala 💛 #ForOurThala https://t.co/VRmPKS2yEe
— Chennai Super Kings (@ChennaiIPL) November 17, 2026
ಎಂ.ಎಸ್. ಧೋನಿ ಇಲ್ಲದೆ ಸಿಎಸ್‌ಕೆ ಇಲ್ಲ. ಕಳೆದ ಸುಮಾರು ಎರಡು ದಶಕಗಳಿಂದ, ನಾವು ಜಯಾಪಜಯಗಳು ಹಾಗೂ ಈ ನಡುವೆ ಬರುವ ಎಲ್ಲ ಏಳುಬೀಳುಗಳಲ್ಲೂ ಜೊತೆಯಾಗಿ ಸಾಗಿದ್ದೇವೆ, ಒಟ್ಟಿಗೆ ಬೆಳೆದಿದ್ದೇವೆ. ನಮ್ಮ ಬಾಂಧವ್ಯ ಇಷ್ಟೊಂದು ಬಲವಾಗಿರುವುದಕ್ಕೆ ಒಂದೇ ಕಾರಣ, ನಾವು ಪರಸ್ಪರರ ಉದ್ದೇಶಗಳನ್ನು ಪ್ರಶ್ನಿಸುವುದಿಲ್ಲ. ಆ ನಂಬಿಕೆಯೇ ಈ ಸುದೀರ್ಘ ಪಯಣ ಸಾಧ್ಯವಾಗುವಂತೆ ಮಾಡಿದೆ ಎಂದು ಹೇಳಿದರು.
ಧೋನಿ 2008ರ ಐಪಿಎಲ್‌ನ ಉದ್ಘಾಟನಾ ಋತುವಿನಲ್ಲಿ ಸಿಎಸ್‌ಕೆ ತಂಡವನ್ನು ಸೇರಿಕೊಂಡರು ಮತ್ತು ಆ ತಂಡವನ್ನು ಐದು ಐಪಿಎಲ್ ಪ್ರಶಸ್ತಿಗಳು ಹಾಗೂ ಎರಡು ಚಾಂಪಿಯನ್ಸ್ ಲೀಗ್ ಟಿ20 ಟ್ರೋಫಿಗಳನ್ನು ಗೆಲ್ಲುವಂತೆ ಮುನ್ನಡೆಸಿದರು. ಸಿಎಸ್‌ಕೆ ತಂಡವು ಸ್ಪರ್ಧೆಯಿಂದ ಅಮಾನತುಗೊಂಡಿದ್ದ 2016 ಮತ್ತು 2017ರ ಅವಧಿಯಲ್ಲಿ, ಅವರು 'ರೈಸಿಂಗ್ ಪುಣೆ ಸೂಪರ್‌ಜೈಂಟ್' ತಂಡದೊಂದಿಗೆ ಎರಡು ಋತುಗಳನ್ನು ಕಳೆದರು.