IPL 2027 Retention: ಟ್ರಾವಿಸ್ ಹೆಡ್, ಧೋನಿ ಸೇರಿದಂತೆ ಹಲವು ಸ್ಟಾರ್ಗಳಿಗೆ ಕೊಕ್, ಎಲ್ಲಾ 10 ತಂಡಗಳಿಂದ ರಿಲೀಸ್ ಆಟಗಾರರ ವಿವರ!
ಮುಂಬರುವ 2027ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮಿನಿ ಹರಾಜಿನ ನಿಮಿತ್ತ ಎಲ್ಲಾ 10 ಫ್ರಾಂಚೈಸಿಗಳು ಹಲವು ಆಟಗಾರರನ್ನು ರಿಲೀಸ್ ಮಾಡಿವೆ ಹಾಗೂ ತಮ್ಮ ಅಗತ್ಯಕ್ಕೆ ತಕ್ಕಂತೆ ಆಟಗಾರರನ್ನು ಉಳಿಸಿಕೊಂಡಿವೆ. ಇದೀಗ ರಿಲೀಸ್ ಆದ ಆಟಗಾರರ ವಿವರವನ್ನು ಇಲ್ಲಿ ನೀಡಲಾಗಿದೆ.
ಎಲ್ಲಾ 10 ತಂಡಗಳಿಂದ ರಿಲೀಸ್ ಆದ ಆಟಗಾರರ ವಿವರ. -
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2027ರ ಟೂರ್ನಿಯ ಮಿನಿ ಹರಾಜಿಗೂ ಮುನ್ನ ಎಲ್ಲಾ 10 ಫ್ರಾಂಚೈಸಿಗಳು ತಮ್ಮ ಆಟಗಾರರ ರಿಟೆನ್ಷನ್ ಹಾಗೂ ರಿಲೀಸ್ ಪಟ್ಟಿಯನ್ನು ಪ್ರಕಟಿಸಿವೆ. ಡಿಸೆಂಬರ್ 16ರಂದು ಗೋವಾದಲ್ಲಿ ಮಿನಿ ಹರಾಜು ನಡೆಯಲಿದ್ದು, ಅದಕ್ಕೂ ಮುನ್ನ ತಂಡಗಳ ಸಂಯೋಜನೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಟ್ರಾವಿಸ್ ಹೆಡ್, ಎಂಎಸ್ ಧೋನಿ, ಮಿಚೆಲ್ ಸ್ಟಾರ್ಕ್ ಸೇರಿದಂತೆ ಪ್ರಮುಖ ಸ್ಟಾರ್ ಆಟಗಾರರನ್ನು ಫ್ರಾಂಚೈಸಿಗಳು ರಿಲೀಸ್ ಮಾಡಿವೆ.
ಈ ಹಿಂದೆ ನವೆಂಬರ್ 15ರಂದು ಆಟಗಾರರ ರಿಟೆನ್ಷನ್ ಪಟ್ಟಿ ಪ್ರಕಟಿಸಲು ಗಡುವು ನಿಗದಿಯಾಗಿತ್ತು. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿಯೊಂದಿಗೆ ಗೊಂದಲವಾಗದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಹೆಚ್ಚುವರಿಯಾಗಿ 48 ಗಂಟೆಗಳ ಕಾಲಾವಕಾಶ ನೀಡಿತ್ತು.
ಪ್ರತಿ ತಂಡ 25 ಆಟಗಾರರ ಗರಿಷ್ಠ ಮಿತಿಯೊಳಗೆ ಎಷ್ಟು ಆಟಗಾರರನ್ನು ಬೇಕಾದರೂ ಉಳಿಸಿಕೊಳ್ಳಬಹುದು. ಹೀಗಾಗಿ ಈ ಬಾರಿ ಎಲ್ಲಾ ತಂಡಗಳು ಸಂಪೂರ್ಣವಾಗಿ ಹೊಸ ತಂಡ ಕಟ್ಟುವ ಬದಲು ಅಗತ್ಯವಿರುವ ಸ್ಥಾನಗಳಲ್ಲಿ ಬದಲಾವಣೆ ಮಾಡಿಕೊಳ್ಳಲು ಬಯಸುತ್ತಿವೆ.
IPL 2027: ಜೇಕಬ್ ಬೆಥೆಲ್ ಸೇರಿ ಆರು ಆಟಗಾರರನ್ನು ರಿಲೀಸ್ ಮಾಡಿದ ಆರ್ಸಿಬಿ, ಉಳಿದುಕೊಂಡವರ ಪಟ್ಟಿ!
ಕೆಕೆಆರ್ ತಂಡದಲ್ಲಿ ದೊಡ್ಡ ಬದಲಾವಣೆಯ ನಿರೀಕ್ಷೆ
ಕೋಲ್ಕತಾ ನೈಟ್ ರೈಡರ್ಸ್ ತಂಡ ತನ್ನ ಬ್ಯಾಟಿಂಗ್ ಹಾಗೂ ವೇಗದ ಬೌಲಿಂಗ್ ವಿಭಾಗವನ್ನು ಬಲಪಡಿಸಿಕೊಳ್ಳುವ ಉದ್ದೇಶ ಹೊಂದಿದೆ. ಅದರಲ್ಲೂ ಆರಂಭಿಕ ಬ್ಯಾಟಿಂಗ್ ಕ್ರಮಾಂಕ ಮತ್ತು ವೇಗದ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಮಾಡಿಕೊಳ್ಳುವತ್ತ ಗಮನ ಹರಿಸಿದೆ. ಮತ್ತೊಂದೆಡೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ (PBKS) ತಂಡಗಳು ಸದ್ಯ ಉತ್ತಮ ಸಂಯೋಜನೆಯನ್ನು ಹೊಂದಿವೆ. ಹಾಗಾಗಿ ಈ ತಂಡಗಳು ಕೊಂಚ ಬದಲಾವಣೆ ಮಾಡಿಕೊಳ್ಳಲು ಗಮನ ಹರಿಸುತ್ತಿವೆ.
ಆಟಗಾರರ ಟ್ರೇಡ್ನಲ್ಲಿ ಮಹತ್ವದ ಬದಲಾವಣೆ
ರಿಟೆನ್ಷನ್ ಪ್ರಕ್ರಿಯೆಗೂ ಮುನ್ನವೇ ಆಟಗಾರರ ಟ್ರೇಡ್ ಪ್ರಕ್ರಿಯೆಯಲ್ಲಿ ಹಲವು ಮಹತ್ವದ ಬೆಳವಣಿಗೆಗಳು ನಡೆದಿವೆ. ಪಂಜಾಬ್ ಕಿಂಗ್ಸ್ ತಂಡ, ಹಾರ್ದಿಕ್ ಪಾಂಡ್ಯ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದು, ಇದಕ್ಕೆ ಪ್ರತಿಯಾಗಿ ಅರ್ಷದೀಪ್ ಸಿಂಗ್ ಅವರನ್ನು ಬಿಟ್ಟುಕೊಟ್ಟಿದೆ.
ಇನ್ನು ದೆಹಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜಯಂಟ್ಸ್ ನಡುವೆ ಕೂಡ ಆಟಗಾರರ ವಿನಿಮಯ ನಡೆದಿದೆ. ರಿಷಭ್ ಪಂತ್ ತಮ್ಮ ಹಿಂದಿನ ತಂಡಕ್ಕೆ ಮರಳಿದ್ದು, ಕುಲ್ದೀಪ್ ಯಾದವ್ ಮತ್ತೊಂದು ತಂಡದತ್ತ ತೆರಳಿದ್ದಾರೆ ಎಂದು ವರದಿ ತಿಳಿಸಿದೆ.
The wait is over... Presenting the official list of retained players ahead of #TATAIPL 2027 📋 #TATAIPLAuction https://t.co/pBhvTpDG1X
— IndianPremierLeague (@IPL) November 17, 2026
ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ತಮ್ಮ ಕೆಲಸದ ಒತ್ತಡವನ್ನು ಗಮನದಲ್ಲಿಟ್ಟುಕೊಂಡು ಐಪಿಎಲ್ನಿಂದ ಹೊರಗುಳಿಯಲಿದ್ದಾರೆ. ಮಿಚೆಲ್ ಸ್ಟಾರ್ಕ್ ಕೂಡ ಟೂರ್ನಿಯಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದ್ದಾರೆ. ಪಂಜಾಬ್ ಕಿಂಗ್ಸ್ ತಂಡ, ನೆಹಾಲ್ ವಧೇರಾ ಅವರನ್ನು ಬಿಡುಗಡೆ ಮಾಡಿದೆ. ದೀಪಕ್ ಚಹರ್ ಕೂಡ ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬಿಟ್ಟಿದ್ದಾರೆ.
ಎಲ್ಲಾ 10 ತಂಡಗಳಿಂದ ಬಿಡುಗಡೆಗೊಂಡ ಆಟಗಾರರ ಪಟ್ಟಿ
- ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಮಂಗೇಶ್ ಯಾದವ್: 5.2 ಕೋಟಿ, ಜೇಕಬ್ ಬೆಥೆಲ್: 2.6 ಕೋಟಿ, ರಿಚರ್ಡ್ ಗ್ಲೀಸನ್: 1.6 ಕೋಟಿ, ಸಾತ್ವಿಕ್ ದೇಸ್ವಾಲ್: 30 ಲಕ್ಷ ರು, ವಿಹಾನ್ ಮಲ್ಹೋತ್ರಾ: 30 ಲಕ್ಷ ರು
- ಗುಜರಾತ್ ಟೈಟನ್ಸ್ (GT): ಇಶಾಂತ್ ಶರ್ಮಾ, ಮಾರ್ಕ್ ವುಡ್, ಕುಲ್ವಂತ್ ಖೆಜ್ರೋಲಿಯಾ, ಶಾರುಖ್ ಖಾನ್, ಕಾನರ್ ಎಸ್ಟರ್ಹುಯಿಜೆನ್
- ಸನ್ರೈಸರ್ಸ್ ಹೈದರಾಬಾದ್ (SRH): ಟ್ರಾವಿಸ್ ಹೆಡ್, ಕಮಿಂದು ಮೆಂಡಿಸ್, ಜಯದೇವ್ ಉನದ್ಕಟ್, ದಿಲ್ಷಾನ್ ಮಧುಶಂಕ, ಓಂಕಾರ್ ತರ್ಮಲೆ, ಅಮಿತ್ ಕುಮಾರ್, ಶಿವಂ ಮಾವಿ, ಜೆರಾಲ್ಡ್ ಕೋಯೆಡ್ಜಿ, ಡೇವಿಡ್ ಪೇನ್
- ರಾಜಸ್ಥಾನ್ ರಾಯಲ್ಸ್ (RR): ಆಡಮ್ ಮಿಲ್ನೆ (2.4 ಕೋಟಿ ರು.), ಕ್ವೆನಾ ಎಂಫಾಕಾ (1.5 ಕೋಟಿ ರು.), ತುಷಾರ್ ದೇಶಪಾಂಡೆ ( 6.5 ಕೋಟಿ ರು), ಕುಲ್ದೀಪ್ ಸೇನ್ (75 ಲಕ್ಷ ರು.), ಯುಧ್ವೀರ್ ಸಿಂಗ್ (35 ಲಕ್ಷ ರು.), ವಿಗ್ನೇಶ್ ಪುತ್ತೂರ್ ( 30 ಲಕ್ಷ ರು.), ರವಿ ಸಿಂಗ್, ಶಿಮ್ರಾನ್ ಹೆಟ್ಮಾಯರ್
- ಪಂಜಾಬ್ ಕಿಂಗ್ಸ್ (PBKS): ಲಾಕಿ ಫರ್ಗೂಸನ್, ಮಿಚೆಲ್ ಓವನ್, ನೆಹಾಲ್ ವಧೇರಾ, ಪಾಯಲಾ ಅವಿನಾಶ್, ಪ್ರವೀಣ್ ದುಬೆ ಮತ್ತು ವಿಶಾಲ್ ನಿಶಾದ್
- ಡೆಲ್ಲಿ ಕ್ಯಾಪಿಟಲ್ಸ್ (DC): ಮಿಚೆಲ್ ಸ್ಟಾರ್ಕ್, ನಿತೀಶ್ ರಾಣಾ, ಅಭಿಷೇಕ್ ಪೊರೆಲ್, ಪತುಮ್ ನಿಸ್ಸಾಂಕ, ಬೆನ್ ಡಕೆಟ್, ಕರುಣ್ ನಾಯರ್, ಸಾಹಿಲ್ ಪರಾಖ್, ದುಷ್ಮಂತ ಚಮೀರಾ, ಕೈಲ್ ಜೇಮಿಸನ್, ರೆಹಾನ್ ಅಹ್ಮದ್, ಅಮನ್ ಮಂಡಲ್
- ಕೋಲ್ಕತಾ ನೈಟ್ ರೈಡರ್ಸ್ (KKR): ಅಜಿಂಕ್ಯ ರಹಾನೆ (ನಿವೃತ್ತಿ), ಆಕಾಶ್ ದೀಪ್, ಬ್ಲೆಸಿಂಗ್ ಮುಜರಾಬಾನಿ, ದಕ್ಷ್ ಕಮ್ರಾ, ಲವನಿತ್ ಸಿಸೋಡಿಯಾ, ಮಥೀಶ ಪತಿರಾಣಾ, ಮುಸ್ತಾಫಿಝುರ್ ರೆಹಮಾನ್, ನವದೀಪ್ ಸೈನಿ, ರಚಿನ್ ರವೀಂದ್ರ, ರಾಹುಲ್ ತ್ರಿಪಾಠಿ, ತೇಜಸ್ವಿ ಸಿಂಗ್, ಉಮ್ರಾನ್ ಮಲಿಕ್
- ಮುಂಬೈ ಇಂಡಿಯನ್ಸ್ (MI): ಟ್ರೆಂಟ್ ಬೌಲ್ಟ್, ದೀಪಕ್ ಚಹರ್, ಅಲ್ಲಾ ಗಜನ್ಫರ್, ಅಥರ್ವ ಅಂಕೋಲೆಕರ್, ಕೇಶವ್ ಮಹಾರಾಜ್, ಮೊಹಮ್ಮದ್ ಇಝಾರ್, ಡ್ಯಾನಿಶ್ ಮಾಲೆವಾರ್, ಮಯಾಂಕ್ ಮಾರ್ಕಂಡೆ, ಮಯಾಂಕ್ ರಾವತ್, ಮಹಿಪಾಲ್ ಲೊಮ್ರೋರ್, ರಾಬಿನ್ ಮಿಂಜ್, ರುಚಿತ್ ಅಹಿರ್, ಕ್ರಿಶ್ ಭಗತ್, ಹಾರ್ದಿಕ್ ಪಾಂಡ್ಯ (ಟ್ರೇಡ್)
- ಚೆನ್ನೈ ಸೂಪರ್ ಕಿಂಗ್ಸ್ (CSK): ಮ್ಯಾಥ್ಯೂ ಶಾರ್ಟ್ (1.5 ಕೋಟಿ ರೂ.), ಮ್ಯಾಟ್ ಹೆನ್ರಿ (2 ಕೋಟಿ ರು.), ಝ್ಯಾಕ್ ಫೌಲ್ಕ್ಸ್ (75 ಲಕ್ಷ ರು.), ಪ್ರಶಾಂತ್ ವೀರ್ (14.2 ಕೋಟಿ ರು.), ಅಮನ್ ಖಾನ್ (40 ಲಕ್ಷ ರೂ.), ಕುಲ್ದೀಪ್ ಯಾದವ್ (30 ಲಕ್ಷ ರೂ.), ಆಕಾಶ್ ಮಧ್ವಾಲ್ (30 ಲಕ್ಷ ರೂ.), ಡಿಯಾನ್ ಫಾರೆಸ್ಟರ್ (30 ಲಕ್ಷ ರೂ.), ಮ್ಯಾಕ್ನೀಲ್ ನೊರೊನ್ಹಾ (75 ಲಕ್ಷ ರೂ.) ಮತ್ತು ಎಂಎಸ್ ಧೋನಿ (4 ಕೋಟಿ ರೂ.)
- ಲಖನೌ ಸೂಪರ್ ಜಯಂಟ್ಸ್ (LSG): ಮ್ಯಾಥ್ಯೂ ಬ್ರೀಟ್ಜ್ಕೆ, ಎನ್ರಿಕ್ ನೊರ್ಕಿಯಾ, ಜಾರ್ಜ್ ಲಿಂಡೆ, ವಾನಿಂದು ಹಸರಂಗ, ನಮನ್ ತಿವಾರಿ, ಅರ್ಶಿನ್ ಕುಲಕರ್ಣಿ, ಅವೇಶ್ ಖಾನ್
IPL 2027: ರಾಜಸ್ಥಾನ್ ರಾಯಲ್ಸ್ಗೆ ಮೊಹಮ್ಮದ್ ಶಮಿ, ಲಖನೌ ಸೂಪರ್ ಜಯಂಟ್ಸ್ಗೆ ಸ್ಯಾಮ್ ಕರನ್!
ಹರಾಜಿನತ್ತ ಕ್ರಿಕೆಟ್ ಅಭಿಮಾನಿಗಳ ಚಿತ್ತ
ಎಲ್ಲಾ ತಂಡಗಳ ಆಟಗಾರರ ಪಟ್ಟಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿರುವುದು ಮುಂಬರುವ ಮಿನಿ ಹರಾಜಿನ ಕುತೂಹಲವನ್ನು ಹೆಚ್ಚಿಸಿದೆ. ಯಾವ ತಂಡ ಯಾವ ಆಟಗಾರನನ್ನು ಖರೀದಿಸಲಿದೆ, ಪ್ರಮುಖ ಆಟಗಾರರು ಯಾವ ಫ್ರಾಂಚೈಸಿಗೆ ಸೇರ್ಪಡೆಯಾಗಲಿದ್ದಾರೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಕಾಯುತ್ತಿದ್ದಾರೆ.