ಮುಂಬೈ ಇಂಡಿಯನ್ಸ್ ತೊರೆದು ರಾಜಸ್ಥಾನ್ ಸೇರಲು ಮುಂದಾದ ಹಾರ್ದಿಕ್ ಪಾಂಡ್ಯ!
IPL 2027: ಮೂಲಗಳ ಪ್ರಕಾರ ಹಾರ್ದಿಕ್ ಪಾಂಡ್ಯಗೆ ಬದಲಿಯಾಗಿ ರಾಜಸ್ಥಾನ್ ತಂಡದಿಂದ ಯಶಸ್ವಿ ಜೈಸ್ವಾಲ್ ಅವರನ್ನು ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಸಿದ್ಧವಾಗಿದೆ ಎನ್ನಲಾಗಿದೆ. ಮುಂಬೈ ರಣಜಿ ಟ್ರೋಫಿ ತಂಡಕ್ಕೂ ಆಡುವ ಜೈಸ್ವಾಲ್‌ಗೆ, ಮುಂಬೈ ಇಂಡಿಯನ್ಸ್ ಸೇರಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.
MI and RR -
ಮುಂಬಯಿ, ಜೂ.22: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಮುಂಬೈ ಇಂಡಿಯನ್ಸ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಫ್ರಾಂಚೈಸಿಯಿಂದ ಹೊರನಡೆಯಲಿದ್ದಾರೆ ಎನ್ನಲಾಗಿದೆ. ಗುಜರಾತ್ ಟೈಟಾನ್ಸ್ ನಿಂದ ಬಂದ ನಂತರ ಮುಂಬೈ ತಂಡದ ನಾಯಕನಾಗಿ ಆಯ್ಕೆಯಾಗಿದ್ದ ಹಾರ್ದಿಕ್, ತಂಡದೊಳಗಿನ ಡ್ರೆಸ್ಸಿಂಗ್ ರೂಮ್ ಭಿನ್ನಾಭಿಪ್ರಾಯದ ವದಂತಿಗಳ ನಡುವೆ ತಾನು ತಂಡದಿಂದ ಹೊರನಡೆಯಲು ಬಯಸುತ್ತೇನೆ ಎಂದು ಫ್ರಾಂಚೈಸಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ವರದಿಯ ಪ್ರಕಾರ, ರಾಜಸ್ಥಾನ ರಾಯಲ್ಸ್ ತಂಡ ಹಾರ್ದಿಕ್ ಖರೀದಿಸಲು ಮುಂಬೈ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮುಂಚೂಣಿಯಲ್ಲಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಹಾರ್ದಿಕ್ ಪಾಂಡ್ಯಗೆ ಬದಲಿಯಾಗಿ ರಾಜಸ್ಥಾನ್ ತಂಡದಿಂದ ಯಶಸ್ವಿ ಜೈಸ್ವಾಲ್ ಅವರನ್ನು ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಸಿದ್ಧವಾಗಿದೆ ಎನ್ನಲಾಗಿದೆ. ಮುಂಬೈ ರಣಜಿ ಟ್ರೋಫಿ ತಂಡಕ್ಕೂ ಆಡುವ ಜೈಸ್ವಾಲ್‌ಗೆ, ಮುಂಬೈ ಇಂಡಿಯನ್ಸ್ ಸೇರಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.
ʻವೈಭವ್ ಸೂರ್ಯವಂಶಿ ಎಲ್ಲರನ್ನೂ ಮುಜುಗರಕ್ಕೀಡು ಮಾಡುತ್ತಿದ್ದಾರೆʼ: ಆಕಾಶ್ ಚೋಪ್ರಾ!
ರೆವ್‌ಸ್ಪೋರ್ಟ್ಜ್‌ನಲ್ಲಿನ ವರದಿಯ ಪ್ರಕಾರ, ಹಾರ್ದಿಕ್ ತಂಡವು ಮುಂಬೈ ಇಂಡಿಯನ್ಸ್ ಜೊತೆ ವ್ಯಾಪಾರ ಒಪ್ಪಂದದ ಕುರಿತು ರಾಜಸ್ಥಾನ ರಾಯಲ್ಸ್ ಜೊತೆ ಮಾತುಕತೆ ನಡೆಸುತ್ತಿದ್ದು, ಮುಂಬೈ ಇಂಡಿಯನ್ಸ್ ಸ್ಫೋಟಕ ಆರಂಭಿಕ ಆಟಗಾರ ಜೈಸ್ವಾಲ್ ಅವರನ್ನು ಪ್ರತಿಯಾಗಿ ಬಯಸುತ್ತಿದೆ.
ಸೂರ್ಯಕುಮಾರ್ ಯಾದವ್ ಕೂಡ ಹೊಸ ತಂಡವನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ. ಫ್ರಾಂಚೈಸಿಯು ಅನೇಕ ವಯಸ್ಸಾದ ತಾರೆಯರನ್ನು ಹೊರಹಾಕಲು ನೋಡುತ್ತಿದೆ. ಸೂರ್ಯಕುಮಾರ್ ಕೂಡ ಈ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದರು. ಸದ್ಯ ಎರಡೂ ಫ್ರಾಂಚೈಸಿಗಳು ಸೂರ್ಯಕುಮಾರ್‌ಗೆ ನಾಯಕತ್ವವನ್ನು ನೀಡಲು ಸಿದ್ಧರಿದ್ದಾರೆ ಎಂದು ವರದಿಯಾಗಿದೆ.
ರೋಹಿತ್ ಶರ್ಮಾ ತಮ್ಮ ವೃತ್ತಿಜೀವನದ ಅಂತ್ಯವನ್ನು ಸಮೀಪಿಸುತ್ತಿರುವಾಗ, ಹಾರ್ದಿಕ್ ಮತ್ತು ಸೂರ್ಯಕುಮಾರ್ ಇಬ್ಬರೂ ಫ್ರಾಂಚೈಸಿಯನ್ನು ತೊರೆಯುವ ಸಾಧ್ಯತೆ ಇರುವುದರಿಂದ, ಮುಂಬೈ ಇಂಡಿಯನ್ಸ್ ತಂಡವು ತಮ್ಮ ಮುಂದಿನ ಹಂತವನ್ನು ನಿರ್ಮಿಸಲು ಹೊಸ ಸೂಪರ್‌ಸ್ಟಾರ್‌ಗಳ ಅಗತ್ಯವಿದೆ. ಭಾರತೀಯ ತಂಡಕ್ಕಾಗಿ ಮೂರು ಸ್ವರೂಪಗಳಲ್ಲಿ ಸ್ಪರ್ಧಿಸಿರುವ ಕಾರಣ ಜೈಸ್ವಾಲ್ ಖರೀದಿಗೆ ಮುಂಬೈ ಒಲವು ತೋರವುದು ಖಚಿತ.
ಗಾಯದಿಂ ಬಳಲುತ್ತಿರುವ ಹಾರ್ದಿಕ್ ಪಾಂಡ್ಯ ಮುಂಬರುವ ಇಂಗ್ಲೆಂಡ್ ಸರಣಿಯಿಂದ ಹೊರಬಿದ್ದಿದ್ದಾರೆ. ಬೆನ್ನುನೋವಿನಿಂದ ಚೇತರಿಸಿಕೊಳ್ಳುತ್ತಿರುವಾಗ ಉಂಟಾದ ಕ್ವಾಡ್ರೈಸ್ಪ್ ಗಾಯದಿಂದ ಹಾರ್ದಿಕ್ ಇನ್ನೂ ಚೇತರಿಸಿಕೊಂಡಿಲ್ಲ.
ಇಂಡಿಯಾ ಟುಡೇ ಪ್ರಕಾರ, ಆರಂಭಿಕ ಹಂತದಲ್ಲಿ ಹಾರ್ದಿಕ್ ಗಾಯದಿಂದ ಗುಣಮುಖರಾಗಲು ಕನಿಷ್ಠ ಮೂರು ವಾರಗಳ ಅಗತ್ಯವಿದೆ ಎನ್ನಲಾಗಿತ್ತು. ಆದರೆ ಈಗ ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಬೇಕಾಗುವುದರಿಂದ ಅವರು ಇಂಗ್ಲೆಂಡ್ ಸರಣಿಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ.