ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

MI vs LSG: ಒಂದೇ ದೋಣಿಯ ಪಯಣಿಗರ ಮಧ್ಯೆ ಕಾದಾಟ; ಯಾರಿಗೆ ಒಲಿಯಲಿದೆ ಗೆಲುವಿನ ಅದೃಷ್ಟ?

IPL 2026: ಒಂದು ಕಾಲದಲ್ಲಿ ವಾಂಖಡೆ ಮೈದಾನದಲ್ಲಿ ಮುಂಬೈ ತಂಡವನ್ನು ಸೋಲಿಸುವುದೆಂದರೆ ಕಬ್ಬಿಣದ ಕಡೆಲೆಯಷ್ಟು ಕಷ್ಟವಾಗಿತ್ತು. ಆದರೆ ಈ ಆವೃತ್ತಿಯಲ್ಲಿ ತವರಿನಲ್ಲೇ ಮುಂಬೈ ಅತ್ಯಧಿಕ ಸೋಲು ಕಂಡಿದೆ. ಬ್ಯಾಟಿಂಗ್‌, ಬೌಲಿಂಗ್‌ ಸೇರಿ ಎಲ್ಲ ವಿಭಾಗದಲ್ಲಿಯೂ ಕಳಪೆ ಪ್ರದರ್ಶನ.

ಸೋತವರ ಮಧ್ಯೆ ಗೆಲುವಿಗಾಗಿ ಹೋರಾಟ; ನಾಳೆ ಮುಂಬೈ-ಲಖನೌ​ ಸೆಣಸಾಟ

pant and hardik -

Abhilash BC
Abhilash BC May 3, 2026 3:07 PM

ಮುಂಬಯಿ, ಮೇ 3: ಸೋಮವಾರ ನಡೆಯುವ ಐಪಿಎಲ್(IPL 2026)​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​(Mumbai Indians) ಮತ್ತು ಲಖನೌ ಸೂಪರ್‌ ಜೈಂಟ್ಸ್‌(Lucknow Super Giants)​ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಇಲ್ಲಿನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂ(Wankhede Stadium)ನಲ್ಲಿ ನಡೆಯಲಿದೆ. ಅದೃಷ್ಟದ ವಿಷಯದಲ್ಲಿ ಇತ್ತಂಡಗಳು ಒಂದೇ ದೋಣಿಯ ಪಯಣಿಗರು. ಹೊಡ್ಡ ಮೊತ್ತ ಪೇರಿಸಿದರೂ ಗೆಲುವು ಮಾತ್ರ ಒಲಿಯುತ್ತಿಲ್ಲ. ಆದರೆ ಈ ಪಂದ್ಯದಲ್ಲಿ ಒಂದು ತಂಡ ಸತತ ಸೋಲಿನ ಬಳಿಕ ಗೆಲುವು ಕಾಣಲಿದೆ. ಆ ತಂಡ ಯಾವುದು ಎಂಬುದು ಪಂದ್ಯದ ಕೌತುಕ.

ಅಂಕಪಟ್ಟಿಯಲ್ಲಿ ಮುಂಬೈ ತಂಡ 9ನೇ ಸ್ಥಾನದಲ್ಲಿದ್ದರೆ, ಲಖನೌ 10ನೇ ಸ್ಥಾನದಲ್ಲಿದೆ. ಅಂಕಪಟ್ಟಿಯಲ್ಲಿ ಮೇಲೇರಬೇಕಾದರೆ ಮತ್ತು ಕ್ಷೀಣ ಪ್ಲೇ-ಆಪ್‌ ಆಸೆ ಜೀವಂತವಿರಿಸಬೇಕಿದ್ದರೆ ಉಭಯ ತಂಡಗಳಿಗೂ ಗೆಲುವು ಅತ್ಯಗತ್ಯ. ಅದರಲ್ಲೂ ಮುಂಬೈ ಪಾಲಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಸೋತರೆ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ. ಏಕೆಂದರೆ ಮುಂಬೈಗೆ ಇದು 10ನೇ ಪಂದ್ಯ. ಲಖನೌಗೆ 9ನೇ ಪಂದ್ಯ ಆಗಿರುವ ಕಾರಣ ನಾಳಿನ ಮತ್ತು ಇನ್ನುಳಿದ ಪಂದ್ಯ ಗೆದ್ದರೆ ಪ್ಲೇ-ಆಫ್‌ ಪ್ರವೇಶಿಸಬಹುದು. ಈ ನಿಟ್ಟಿನಲ್ಲಿ ತಂಡ ಉತ್ತಮ ಪ್ರದರ್ಶನ ತೋರಬೇಕು.

ಒಂದು ಕಾಲದಲ್ಲಿ ವಾಂಖಡೆ ಮೈದಾನದಲ್ಲಿ ಮುಂಬೈ ತಂಡವನ್ನು ಸೋಲಿಸುವುದೆಂದರೆ ಕಬ್ಬಿಣದ ಕಡೆಲೆಯಷ್ಟು ಕಷ್ಟವಾಗಿತ್ತು. ಆದರೆ ಈ ಆವೃತ್ತಿಯಲ್ಲಿ ತವರಿನಲ್ಲೇ ಮುಂಬೈ ಅತ್ಯಧಿಕ ಸೋಲು ಕಂಡಿದೆ. ಬ್ಯಾಟಿಂಗ್‌, ಬೌಲಿಂಗ್‌ ಸೇರಿ ಎಲ್ಲ ವಿಭಾಗದಲ್ಲಿಯೂ ಕಳಪೆ ಪ್ರದರ್ಶನ. ಅತ್ತ ಪಂತ್‌ ಸಾರಥ್ಯದ ತಂಡವೂ ಇದಕ್ಕೆ ಹೊರತಾಗಿಲ್ಲ. ಅದರ ಸ್ಥಿತಿಯೂ ಇದೇ ಆಗಿದೆ. ಯಾರೂ ಕೂಡ ಸ್ಥಿರವಾಗಿ ಆಡುತ್ತಿಲ್ಲ.

MI vs CSK: 'ಇದು ನಮ್ಮ ಸೀಸನ್ ಅಲ್ಲ'; ಸೋಲಿನ ಬಳಿಕ ಹತಾಶರಾದ ಹಾರ್ದಿಕ್‌ ಪಾಂಡ್ಯ

ಪಿಚ್‌ ರಿಪೋರ್ಟ್‌

ಮುಂಬೈಯ ವಾಂಖೆಡೆ ಸ್ಟೇಡಿಯಂನ ಪಿಚ್​ ಬ್ಯಾಟಿಂಗ್ ಸ್ನೇಹಿ ಆಗಿದೆ. ಹೀಗಾಗಿ ಈ ಪಂದ್ಯದಲ್ಲಿ ದೊಡ್ಡ ಮೊತ್ತ ದಾಖಲಾಗುವ ಸಾಧ್ಯತೆ ಅಧಿಕ. ಇಲ್ಲಿ ನಡೆದ ಐಪಿಎಲ್​ನ ಬಹುತೇಕ ಪಂದ್ಯಗಳು ಹೈಸ್ಕೋರಿಂಗ್ ಆಗಿದೆ. ಹಾಲಿ ಆವೃತ್ತಿಯಲ್ಲಿಯೂ 250 ಪ್ಲಸ್‌ ಮೊತ್ತ ದಾಖಲಾಗಿದೆ. ಇನ್ನು ಚೇಸಿಂಗ್​ ನಡೆಸಿದ ತಂಡಗಳೇ ಹೆಚ್ಚು ಬಾರಿ ಮೇಲುಗೈ ಸಾಧಿಸಿದೆ. ಹೀಗಾಗಿ ಬೌಲರ್​ಗಳು ಈ ಪಿಚ್​ನಲ್ಲಿ ಶಕ್ತಿ ಮೀರಿ ಪ್ರದರ್ಶನ ತೋರಬೇಕಿದೆ.

ಸತತ ಪಂದ್ಯಗಳ ಬಳಿಕ ಮಾಲ್ಡೀವ್ಸ್‌ನಲ್ಲಿ ಆರ್‌ಸಿಬಿ ಮೋಜು ಮಸ್ತಿ

ಮುಖಾಮುಖಿ

ಆಡಿದ ಪಂದ್ಯಗಳು- 6

ಲಕ್ನೋ ಸೂಪರ್ ಜೈಂಟ್ಸ್ ಗೆಲುವು- 4

ಮುಂಬೈ ಇಂಡಿಯನ್ಸ್ ಗೆಲುವು- 2

ಸಂಭಾವ್ಯ ಆಡುವ ಬಳಗ

ಮುಂಬೈ ಇಂಡಿಯನ್ಸ್: ವಿಲ್ ಜಾಕ್ಸ್, ರಯಾನ್ ರಿಕಲ್ಟನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ನಮನ್ ಧೀರ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ರಾಬಿನ್ ಮಿಂಜ್, ಕ್ರಿಶ್ ಭಗತ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ಎಎಮ್ ಗಜನ್ಫರ್.

ಇಂಪ್ಯಾಕ್ಟ್‌ ಆಟಗಾರ: ರಘು ಶರ್ಮಾ.

ಲಕ್ನೋ ಸೂಪರ್ ಜೈಂಟ್ಸ್: ಮಿಚೆಲ್ ಮಾರ್ಷ್, ಆಯುಷ್ ಬಡೋನಿ, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್ ಕೀಪರ್), ಏಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್, ಮುಕುಲ್ ಚೌಧರಿ, ಹಿಮ್ಮತ್ ಸಿಂಗ್, ಜಾರ್ಜ್ ಲಿಂಡೆ, ದಿಗ್ವೇಶ್ ಸಿಂಗ್ ರಾಠಿ, ಮೊಹ್ಸಿನ್ ಖಾನ್, ಮೊಹಮ್ಮದ್ ಶಮಿ

ಇಂಪ್ಯಾಕ್ಟ್‌ ಆಟಗಾರ: ಮಣಿಮಾರನ್ ಸಿದ್ಧಾರ್ಥ್.