ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

LSG vs DC: ಸೋತರೂ ಐಪಿಎಲ್‌ ದಾಖಲೆ ನಿರ್ಮಿಸಿದ ಶಮಿ; ಈ ಸಾಧನೆಗೈದ ಮೊದಲ ಬೌಲರ್‌

Mohammed Shami Creates History: ಕಳೆದ ಋತುವಿನಲ್ಲಿ ಹೈದರಾಬಾದ್‌ ಪರ ಒಂಬತ್ತು ಐಪಿಎಲ್ ಪಂದ್ಯಗಳಲ್ಲಿ ಆಡಿದ್ದ ಶಮಿ ಕೇವಲ ಆರು ವಿಕೆಟ್‌ಗಳನ್ನು ಕಬಳಿಸಿದ್ದರು. ಐಪಿಎಲ್ 2026 ರ ಹರಾಜಿಗೆ ಮುಂಚಿತವಾಗಿ ಎಲ್‌ಎಸ್‌ಜಿ ಶಮಿಯೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡು ತಮ್ಮ ತಂಡಕ್ಕೆ ಸೇರಿಸಿಕೊಂಡಿತು.

ಮೊದಲ ಎಸೆತದಲ್ಲೇ ವಿಕೆಟ್‌ ಕಿತ್ತು ದಾಖಲೆ ಬರೆದ ಮೊಹಮ್ಮದ್‌ ಶಮಿ

Mohammed Shami -

Abhilash BC
Abhilash BC Apr 2, 2026 7:54 AM

ಲಕ್ನೋ, ಎ.2: ಬುಧವಾರ ನಡೆದಿದ್ದ ಐಪಿಎಲ್‌(IPL 2026) ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌(LSG vs DC) ವಿರುದ್ಧ ಲಕ್ನೋ ಸೂಪರ್‌ ಜೈಂಟ್ಸ್‌ 6 ವಿಕೆಟ್‌ ಅಂತರದ ಸೋಲು ಕಂಡರೂ ವೇಗಿ ಮೊಹಮ್ಮದ್‌ ಶಮಿ(Mohammed Shami Creates History) ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಡೆಲ್ಲಿ ತಂಡದ ಚೇಸಿಂಗ್‌ ವೇಳೆ ಮೊದಲ ಎಸೆತದಲ್ಲಿ ರಾಹುಲ್ ವಿಕೆಟ್ ಪಡೆದ ಶಮಿ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಐದು ಬಾರಿ ವಿಕೆಟ್ ಪಡೆದ ಮೊದಲ ಬೌಲರ್ ಎಂಬ ದಾಖಲೆ ನಿರ್ಮಿಸಿದರು.

ಐಪಿಎಲ್‌ನಲ್ಲಿ ಒಟ್ಟು 7 ಬೌಲರ್‌ಗಳು ಮೊದಲ ಎಸೆತದಲ್ಲೇ ಮೂರು ಬಾರಿ ವಿಕೆಟ್ ಪಡೆದಿದ್ದಾರೆ, ಆದರೆ ಶಮಿ ಐದು ಬಾರಿ ಈ ಸಾಧನೆ ಮಾಡಿದ ಏಕೈಕ ಬೌಲರ್. ಐಪಿಎಲ್‌ನಲ್ಲಿ ಶಮಿ ಅವರ ಆರನೇ ತಂಡ ಎಲ್‌ಎಸ್‌ಜಿ. ಅವರು ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್, ದೆಹಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದ್ದಾರೆ.

ಕಳೆದ ಋತುವಿನಲ್ಲಿ ಹೈದರಾಬಾದ್‌ ಪರ ಒಂಬತ್ತು ಐಪಿಎಲ್ ಪಂದ್ಯಗಳಲ್ಲಿ ಆಡಿದ್ದ ಶಮಿ ಕೇವಲ ಆರು ವಿಕೆಟ್‌ಗಳನ್ನು ಕಬಳಿಸಿದ್ದರು. ಐಪಿಎಲ್ 2026 ರ ಹರಾಜಿಗೆ ಮುಂಚಿತವಾಗಿ ಎಲ್‌ಎಸ್‌ಜಿ ಶಮಿಯೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡು ತಮ್ಮ ತಂಡಕ್ಕೆ ಸೇರಿಸಿಕೊಂಡಿತು.

ಐಪಿಎಲ್ 2025 ರಲ್ಲಿ, ದುಬಾರಿಯಾಗಿದ್ದ ಶಮಿ ಈ ಬಾರಿ ದೇಶೀಯ ಟೂರ್ನಿಯಲ್ಲಿ ಹಲವು ಪಂದ್ಯಗಳನ್ನು ಆಡಿ ಉತ್ತಮ ಲಯ ಕಂಡುಕೊಂಡಿದ್ದಾರೆ. ಡೆಲ್ಲಿ ವಿರುದ್ಧ 4 ಓವರ್‌ಗಳಿಂದ 28 ರನ್‌ ಬಿಟ್ಟುಕೊಟ್ಟು ಒಂದು ವಿಕೆಟ್‌ ಪಡೆದರು.

IPL 2026: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಕ್ನೋ ಸೋಲಿಗೆ ರಿಷಭ್ ಪಂತ್ ಪ್ರತಿಕ್ರಿಯೆ

ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಲಕ್ನೋ ತಂಡ 141 ರನ್‌ಗೆ ಸರ್ವಪತನ ಕಂಡಿತು. ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಆರಂಭಿಕ ಆಘಾತದ ಹೊರತಾಗಿಯೂ 17.1 ಓವರ್‌ಗಳಲ್ಲಿ 4 ವಿಕೆಟ್‌ಗೆ 144 ರನ್‌ ಬಾರಿಸಿ ಗೆಲುವು ದಾಖಲಿಸಿತು. ಡೆಲ್ಲಿ ಪರ ಸಮೀರ್‌ ರಿಝ್ವಿ ಒತ್ತಡವನ್ನು ಮೆಟ್ಟಿ ನಿಂತು ಕೊನೆಯವರೆಗೂ ಬ್ಯಾಟ್‌ ಮಾಡಿ 47 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ 70 ರನ್‌ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಐಪಿಎಲ್‌ನಲ್ಲಿ ಮೊದಲ ಎಸೆತದಲ್ಲಿ ಅತಿ ಹೆಚ್ಚು ವಿಕೆಟ್

5 - ಮೊಹಮ್ಮದ್ ಶಮಿ

3 - ಪ್ರವೀಣ್ ಕುಮಾರ್

3 – ಉಮೇಶ್ ಯಾದವ್

3 - ಟ್ರೆಂಟ್ ಬೌಲ್ಟ್

3 - ಲಸಿತ್ ಮಾಲಿಂಗ

3 - ಭುವನೇಶ್ವರ್ ಕುಮಾರ್

3 - ಅಶೋಕ್ ದಿಂಡಾ

3 - ಪ್ಯಾಟ್ ಕಮ್ಮಿನ್ಸ್