ಹ್ಯಾಟ್ರಿಕ್ ಪದಕ ಗೆದ್ದ ನೀರೂ ಧಂಡಾ; ಟ್ರ್ಯಾಪ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಚಿನ್ನ
Asian Games: ನೀರೂ ಅವರಿಗೆ ಇದು 2026ರ ಏಷ್ಯನ್ ಕ್ರೀಡಾಕೂಟದಲ್ಲಿ ಲಭಿಸಿದ ಮೂರನೇ ಪದಕವಾಗಿದೆ. ಟ್ರ್ಯಾಪ್ ಶೂಟಿಂಗ್‌ನಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಎಂಬ ಇತಿಹಾಸವನ್ನು ನಿರ್ಮಿಸುವ ಮೊದಲು, ಅವರು ಮಹಿಳೆಯರ ಟ್ರ್ಯಾಪ್ ತಂಡದ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು.
Neeru Dhanda, Kynan Chenai -
ನಗೋಯಾ, ಸೆ.30: ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಮಹಿಳೆಯರ ಟ್ರ್ಯಾಪ್ ವಿಭಾಗದಲ್ಲಿ ವೈಯಕ್ತಿಕ ಚಿನ್ನದ ಸಾಧನೆಗೈದ ಮರುದಿನವೇ, ನೀರೂ ಧಂಡಾ ಮತ್ತೊಂದು ಚಿನ್ನದ ಪದಕ್ಕೆ ಗುರಿಯಿಟ್ಟಿದ್ದಾರೆ. ಬುಧವಾರ ನಡೆದ ಟ್ರ್ಯಾಪ್ ಮಿಶ್ರ ತಂಡದ ಫೈನಲ್‌ನಲ್ಲಿ ಕೈನಾನ್ ಚೆನೈ ಜೊತೆಗೂಡಿ ಚಿನ್ನ ಗೆದ್ದಿದ್ದಾರೆ. ಈ ಮೂಲಕ ಏಷ್ಯನ್ ಕ್ರೀಡಕೂಟದಲ್ಲಿ ಹ್ಯಾಟ್ರಿಕ್ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಮಹಿಳೆಯರ ಟ್ರ್ಯಾಪ್ ತಂಡದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದರು.
ಫೈನಲ್‌ನಲ್ಲಿ ಭಾರತೀಯ ಜೋಡಿಯು 34 ಅಂಕಗಳೊಂದಿಗೆ ಅಗ್ರಸ್ಥಾನ ಪಡೆಯಿತು. ಇದೇ ವೇಳೆ ಈ ವರ್ಷದ ಆರಂಭದಲ್ಲಿ ಕತಾರ್ ನಿರ್ಮಿಸಿದ್ದ 30 ಅಂಕಗಳ ಏಷ್ಯನ್ ದಾಖಲೆಯನ್ನು ಮುರಿಯಿತು. ಕತಾರ್ 32 ಅಂಕಗಳೊಂದಿಗೆ ಬೆಳ್ಳಿ ಪದಕವನ್ನು ಗೆದ್ದುಕೊಂಡರೆ, ಚೀನಾ 23 ಅಂಕಗಳೊಂದಿಗೆ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು.
ನೀರೂ ಅವರಿಗೆ ಇದು 2026ರ ಏಷ್ಯನ್ ಕ್ರೀಡಾಕೂಟದಲ್ಲಿ ಲಭಿಸಿದ ಮೂರನೇ ಪದಕವಾಗಿದೆ. ಟ್ರ್ಯಾಪ್ ಶೂಟಿಂಗ್‌ನಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಎಂಬ ಇತಿಹಾಸವನ್ನು ನಿರ್ಮಿಸುವ ಮೊದಲು, ಅವರು ಮಹಿಳೆಯರ ಟ್ರ್ಯಾಪ್ ತಂಡದ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು.
ಏಷ್ಯನ್ ಗೇಮ್ಸ್ ಬಾಕ್ಸಿಂಗ್; ಲವ್ಲಿನಾ ಫೈನಲ್‌ಗೆ, ಕಂಚು ಗೆದ್ದ ಪ್ರಿಯಾ
ನೀರೂ ಅವರ ಮೂರನೇ ಪದಕವು ಚೆನೈ ಅವರೊಂದಿಗೆ ಲಭಿಸಿತು. ಈ ಭಾರತೀಯ ಜೋಡಿಯು ನಾಲ್ಕು ಸರಣಿಗಳಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿತು. ಭಾರತವು ಮೊದಲ ಸರಣಿಯಲ್ಲಿ 6 ಅಂಕಗಳನ್ನು, ಎರಡನೇ ಸರಣಿಯಲ್ಲಿ 16 ಅಂಕಗಳನ್ನು ಮತ್ತು ಮೂರನೇ ಸರಣಿಯ ನಂತರ 26 ಅಂಕಗಳನ್ನು ಗಳಿಸಿ, ಅಂತಿಮವಾಗಿ 34 ಅಂಕಗಳೊಂದಿಗೆ ಸ್ಪರ್ಧೆಯನ್ನು ಮುಕ್ತಾಯಗೊಳಿಸಿತು.
Gold 🏅 for India 🇮🇳
— MysteryFact (@mysteryfact23) September 30, 2026
Indian shooters Neeru Dhanda and Kynan Chenai won the gold medal in the trap mixed team event at the Asian Games 2026 in Aichi-Nagoya, Japan#Cheer4India #kheloIndia #India #AsianGames pic.twitter.com/0nSlDYlH4n
ಮಿಶ್ರ ವಿಭಾಗದಲ್ಲಿನ ಚಿನ್ನದ ಪದಕದೊಂದಿಗೆ, ನೀರು ಈಗ ವೈಯಕ್ತಿಕ ಮತ್ತು ತಂಡದ ವಿಭಾಗಗಳಲ್ಲಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿಯ ಪದಕಗಳನ್ನು, ಹಾಗೆಯೇ ಮಿಶ್ರ ತಂಡದ ವಿಭಾಗದಲ್ಲಿ ಚಿನ್ನದ ಪದಕವನ್ನು ಹೊಂದಿದ್ದಾರೆ. ನೀರೂ ಅವರು ಮಹಿಳೆಯರ ತಂಡದ ವಿಭಾಗದಲ್ಲಿ ಅಶಿಮಾ ಅಹ್ಲಾವತ್ ಮತ್ತು ಮನೀಶಾ ಕೀರ್ ಅವರೊಂದಿಗೆ ಬೆಳ್ಳಿ ಗೆದ್ದರು. ಹರಿಯಾಣದ ಜಿಂದ್ ಊರಿನವರಾದ ನೀರೂ ಅವರು ಭಾರತೀಯ ಸೇನೆಯಲ್ಲಿ ನೈಬ್ ಸುಬೇದಾರ್ ಆಗಿದ್ದಾರೆ.