ಸಚಿನ್ ತೆಂಡೂಲ್ಕರ್ ಚೊಚ್ಚಲ ಏಕದಿನ ಶತಕಕ್ಕೆ ತುಂಬಿತು 32 ವರ್ಷ
Sachin Tendulkar First ODI Century: ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 463 ಪಂದ್ಯಗಳನ್ನು ಆಡಿರುವ ಸಚಿನ್ 18,426 ರನ್ ಗಳಿಸಿದ್ದು, 49 ಶತಕ ಬಾರಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ200 ಪಂದ್ಯಗಳ ಪೈಕಿ 15,921 ರನ್ ಕಲೆಹಾಕಿದ್ದು, 51 ಶತಕ ಸಿಡಿಸಿದ್ದಾರೆ. ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ100 ಶತಕಗಳನ್ನು ಬಾರಿಸಿದ ಏಕೈಕ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
Sachin Tendulkar First ODI Century -
ಮುಂಬಯಿ, ಸೆ.9: ಕ್ರಿಕೆಟ್ ದೇವರು ಎಂದು ಕರೆಸಿಕೊಳ್ಳುವ ಭಾರತ ದಿಗ್ಗಜ ಸಚಿನ್ ತೆಂಡೂಲ್ಕರ್, ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಶತಕ(Sachin Tendulkar maiden 100) ಗಳಿಸಿ ಇವತ್ತಿಗೆ ಬರೋಬ್ಬರಿ 32 ವರ್ಷ ತುಂಬಿತು. ಹೌದು, 1994 ಸೆ. 9ರಂದು ಸಚಿನ್ ತೆಂಡೂಲ್ಕರ್(Sachin Tendulkar ) ಮೊದಲ ಅಂತಾರಾಷ್ಟ್ರೀಯ ಏಕದಿನ ಶತಕ ಬಾರಿಸಿದ್ದರು. ಕೊಲಂಬೊದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ ಸಚಿನ್ ತಮ್ಮ 79 ನೇ ODI ಪಂದ್ಯದಲ್ಲಿ 130 ಎಸೆತಗಳಲ್ಲಿ 110 ರನ್ ಗಳಿಸಿದರು.
ತೆಂಡೂಲ್ಕರ್ 1989 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು ಮತ್ತು ಅವರ ಮೊದಲ ಶತಕ ಬರುವ ಮೊದಲೇ 2,000 ಕ್ಕೂ ಹೆಚ್ಚು ಏಕದಿನ ರನ್‌ಗಳನ್ನು ಗಳಿಸಿದ್ದರು.
ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಭಾರತ, ಆಸ್ಟ್ರೇಲಿಯಾ ಮತ್ತು ಆತಿಥೇಯ ಶ್ರೀಲಂಕಾ ನಡುವಿನ ತ್ರಿಕೋನ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮನೋಜ್ ಪ್ರಭಾಕರ್ ಜೊತೆಗೂಡಿ ತೆಂಡೂಲ್ಕರ್ ಇನ್ನಿಂಗ್ಸ್ ಆರಂಭಿಸಿದರು. ಪ್ರಭಾಕರ್ 20 ರನ್ ಗಳಿಸಿ ಔಟಾದರು. ಒಂದು ತುದಿಯಲ್ಲಿ ವಿಕೆಟ್‌ಗಳು ಬಿಳುತ್ತಿದ್ದರೂ ತೆಂಡೂಲ್ಕರ್ ಮತ್ತೊಂದು ತುದಿಯಲ್ಲಿ ಬೇರೂರಿನಿಂತು ತಮ್ಮದೇ ಆದ ಒಂದು ಮೈಲಿಗಲ್ಲಿನತ್ತ ಬ್ಯಾಟಿಂಗ್ ಮುಂದುವರಿಸಿದರು.
#OnThisDay in 1994 - Batting great @sachin_rt scored his first ODI hundred. Relive the magic - DD SPORTS#Legend #SRT pic.twitter.com/hgvSm42yKK
— BCCI (@BCCI) September 9, 2019
ಅವರು ಅಂತಿಮವಾಗಿ ಮೂರು ಅಂಕಿಗಳನ್ನು ತಲುಪಿದರು ಮತ್ತು 130 ಎಸೆತಗಳಲ್ಲಿ 110 ರನ್ ಗಳಿಸಿದರು. ಇದು ತೆಂಡೂಲ್ಕರ್ ಅವರ ಮೊದಲ ಏಕದಿನ ಶತಕ ಮಾತ್ರವಲ್ಲ ಕ್ರಿಕೆಟ್‌ನಲ್ಲಿ ಅತ್ಯಂತ ಗಮನಾರ್ಹ ಶತಕ ದಾಖಲೆಗಳಲ್ಲಿ ಒಂದಕ್ಕೆ ಬಾಗಿಲು ತೆರೆದ ಇನ್ನಿಂಗ್ಸ್ ಅದು. ಭಾರತ 246/8 ರನ್ ಗಳಿಸಿತು, ಸಚಿನ್ ಅವರ ಇನ್ನಿಂಗ್ಸ್‌ಗೆ ಆಧಾರಸ್ತಂಭವಾಯಿತು. ನಂತರ ಆಸ್ಟ್ರೇಲಿಯಾ 215 ರನ್‌ಗಳಿಗೆ ಆಲೌಟ್ ಆಗಿ ಭಾರತಕ್ಕೆ 31 ರನ್‌ಗಳ ಜಯ ತಂದುಕೊಟ್ಟಿತು.
Duleep Trophy final: ಇಶಾನ್ ಕಿಶನ್‌ಗೆ ಡಿಆರ್‌ಎಸ್ ಸಲಹೆ ನೀಡಿದ ವೈಭವ್ ಸೂರ್ಯವಂಶಿ! ವಿಡಿಯೊ
ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 463 ಪಂದ್ಯಗಳನ್ನು ಆಡಿರುವ ಸಚಿನ್ 18,426 ರನ್ ಗಳಿಸಿದ್ದು, 49 ಶತಕ ಬಾರಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ200 ಪಂದ್ಯಗಳ ಪೈಕಿ 15,921 ರನ್ ಕಲೆಹಾಕಿದ್ದು, 51 ಶತಕ ಸಿಡಿಸಿದ್ದಾರೆ. ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ100 ಶತಕಗಳನ್ನು ಬಾರಿಸಿದ ಏಕೈಕ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.