Asian Games 2026: ಭಾರತ vs ಪಾಕಿಸ್ತಾನ ಫೈನಲ್ ನೋಡಲು ಮೊಹ್ಸಿನ್ ನಖ್ವಿ ಬರಲ್ವಂತೆ!
ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ತಂಡಗಳ 2026ರ ಏಷ್ಯಾ ಕ್ರೀಡಾಕೂಟದ ಫೈನಲ್ ಪಂದ್ಯವನ್ನು ವೀಕ್ಷಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ಬರುವುದಿಲ್ಲ ಎಂದು ಎಸಿಸಿ ತಿಳಿಸಿದೆ. ಸಾಂಪ್ರದಾಯಿಕ ಎದುರಾಳಿಗಳ ನಡುವಣ ಪಂದ್ಯ ಅಕ್ಟೋಬರ್ 3 ರಂದು ಕರೋಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ನಡೆಯಲಿದೆ.
ಭಾರತ vs ಪಾಕ್ ಫೈನಲ್ ಪಂದ್ಯಕ್ಕೆ ಮೊಹ್ಸಿನ್ ನಖ್ವಿ ಗೈರು. -
ನವದೆಹಲಿ: ಜಪಾನ್ ಆತಿಥ್ಯದ 2026ರ ಏಷ್ಯಾ ಕ್ರೀಡಾಕೂಟದ (Asian Games 2026) ಪುರುಷರ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು (IND vs PAK) ಶನಿವಾರ ಚಿನ್ನದ ಪದಕಕ್ಕಾಗಿ ಕಾದಾಟ ನಡೆಸಲಿವೆ. ಆದರೆ, ಈ ಮಹತ್ವದ ಪಂದ್ಯಕ್ಕೆ ಏಷ್ಯನ್ ಕ್ರಿಕೆಟ್ ಮಂಡಳಿ (ಎಸಿಸಿ) ಅಧ್ಯಕ್ಷ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ (Mohsin Naqvi) ಗೈರಾಗಲಿದ್ದಾರೆ. ಸ್ವರ್ಣ ಪದಕಕ್ಕಾಗಿ ಸಾಂಪ್ರದಾಯಿಕ ಎದುರಾಳಿಗಳ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಸಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.
ಜಪಾನ್‌ನ ನಿಸ್ಶಿನ್ ನಗರದ ಕೊರೋಗಿ ಪಾರ್ಕ್‌ನಲ್ಲಿ ನಡೆಯಲಿರುವ ಈ ಫೈನಲ್ ಪಂದ್ಯಕ್ಕೆ ಮೊಹ್ಸಿನ್ ನಖ್ವಿ ಹಾಜರಾಗುವುದಿಲ್ಲ ಎಂದು ಎಸಿಸಿ ಸ್ಪಷ್ಟಪಡಿಸಿದೆ. ಪೂರ್ವನಿಗದಿತ ಕಾರ್ಯಕ್ರಮಗಳ ಕಾರಣದಿಂದಾಗಿ ಅವರು ನಾಗೋಯಾಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಎಸಿಸಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದೆ.
ನಖ್ವಿ ಅವರ ಗೈರುಹಾಜರಿಗೆ ಭಾರತ ಮತ್ತು ಬಿಸಿಸಿಐ ನಡುವಿನ ಟ್ರೋಫಿ ವಿವಾದವೂ ಇರಬಹುದೆಂಬ ಚರ್ಚೆಗಳು ನಡೆಯುತ್ತಿವೆ. 2025ರ ಪುರುಷರ ಏಷ್ಯಾಕಪ್ ಹಾಗೂ 2026ರ ಮಹಿಳಾ ಏಷ್ಯಾಕಪ್ ಟೂರ್ನಿಗಳಲ್ಲಿ ಭಾರತ ತಂಡಗಳು ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ್ದವು. ಇದರಿಂದಾಗಿ ಬಿಸಿಸಿಐ ಮತ್ತು ನಖ್ವಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು.
Asian Games 2026 Final: ಚಿನ್ನದ ಪದಕಕ್ಕಾಗಿ ಭಾರತ vs ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಕದನ!
ಏಷ್ಯನ್ ಗೇಮ್ಸ್‌ನ ಚಿನ್ನ ಮತ್ತು ಕಂಚಿನ ಪದಕದ ಪಂದ್ಯಗಳಲ್ಲಿ ಪಾಲ್ಗೊಳ್ಳುತ್ತಿರುವ ನಾಲ್ಕು ತಂಡಗಳಿಗೆ ನಖ್ವಿ ಶುಭ ಹಾರೈಸಿದ್ದಾರೆ. ತಮ್ಮ ಪೂರ್ವನಿಗದಿತ ಕಾರ್ಯಕ್ರಮಗಳಿಂದಾಗಿ ನಾಗೋಯಾಗೆ ಬರಲು ಸಾಧ್ಯವಾಗುತ್ತಿಲ್ಲ. ಆದರೂ, ರೋಚಕ ಪಂದ್ಯಗಳನ್ನು ವೀಕ್ಷಿಸಲು ಎದುರು ನೋಡುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ನಖ್ವಿ ಅವರು ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಸಚಿವರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಗೈರುಹಾಜರಿಯಿಂದಾಗಿ ಫೈನಲ್ ಪಂದ್ಯದ ಬಳಿಕ ನಡೆಯಲಿರುವ ಅಧಿಕೃತ ಪದಕ ವಿತರಣಾ ಸಮಾರಂಭದಲ್ಲಿ ಅವರು ಭಾಗವಹಿಸುವುದಿಲ್ಲ. ಹೀಗಾಗಿ, ಭಾರತ ಅಥವಾ ಪಾಕಿಸ್ತಾನ ಚಿನ್ನದ ಪದಕ ಗೆದ್ದರೂ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸುವ ಸಂದರ್ಭ ಇರುವುದಿಲ್ಲ.
IND vs WI: ಮೂರನೇ ಒಡಿಐ ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಳ್ಳಲು ಭಾರತ ಸಜ್ಜು!
ಮೊಹ್ಸಿನ್ ನಖ್ವಿ ಜೊತೆ ಟ್ರೋಫಿ ವಿವಾದ
ಬಿಸಿಸಿಐ ಮತ್ತು ಏಷ್ಯನ್ ಕ್ರಿಕೆಟ್ ಮಂಡಳಿ (ಎಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ನಡುವಿನ ಟ್ರೋಫಿ ವಿವಾದ ಮುಂದುವರಿದಿದೆ. ಏಷ್ಯಾಕಪ್ ಟ್ರೋಫಿಯನ್ನು ನಖ್ವಿ ಬದಲಿಗೆ ಅವರ ಉಪಾಧ್ಯಕ್ಷರಿಂದ ಪ್ರದಾನ ಮಾಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಎಸಿಸಿಗೆ ಮನವಿ ಮಾಡಿತ್ತು. ಆದರೆ, ಬಿಸಿಸಿಐ ಮನವಿಯನ್ನು ಎಸಿಸಿ ತಿರಸ್ಕರಿಸಿತ್ತು. ಭಾರತ ತಂಡ ಏಷ್ಯಾಕಪ್ ಟ್ರೋಫಿಗಳನ್ನು ಪಡೆಯಲು ಬಯಸಿದರೆ, ನನ್ನಿಂದಲೇ ಸ್ವೀಕರಿಸಬೇಕು ಎಂದು ನಖ್ವಿ ಈ ಹಿಂದೆ ಸ್ಪಷ್ಟಪಡಿಸಿದ್ದರು. ಈ ನಿಲುವಿನಿಂದಾಗಿ ಉಭಯ ಸಂಸ್ಥೆಗಳ ನಡುವಿನ ಭಿನ್ನಾಭಿಪ್ರಾಯ ಮತ್ತಷ್ಟು ಮುಂದುವರಿದಿತ್ತು.
ಇದೇ ಸಂದರ್ಭದಲ್ಲಿ, ಏಷ್ಯನ್ ಗೇಮ್ಸ್‌ನ ಪುರುಷರ ಕ್ರಿಕೆಟ್ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಟ್ರೋಫಿ ಪ್ರದಾನ ಸಮಾರಂಭದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಏಕೆಂದರೆ, ನಖ್ವಿ ಅವರು ಏಷ್ಯಾ ಖಂಡದ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.