Asif Ali retires: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಪಾಕ್ ಆಲ್‌ರೌಂಡರ್
2018 ರಲ್ಲಿ ಪದಾರ್ಪಣೆ ಮಾಡಿದ ನಂತರ, ಅಲಿ 21 ಏಕದಿನ ಮತ್ತು 58 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಎರಡೂ ಸ್ವರೂಪಗಳಲ್ಲಿ ಒಟ್ಟು 959 ರನ್ ಗಳಿಸಿದ್ದಾರೆ. ಫಿನಿಷರ್ ಮತ್ತು ಪವರ್ ಹಿಟ್ಟರ್ ಎಂದು ಕರೆಯಲ್ಪಡುವ ಅವರು ಏಕದಿನದಲ್ಲಿ 121.65 ಮತ್ತು ಟಿ20ಯಲ್ಲಿ 133.87 ಸ್ಟ್ರೈಕ್ ರೇಟ್ ಕಾಯ್ದುಕೊಂಡಿದ್ದಾರೆ.

-

ಕರಾಚಿ: ಪಾಕಿಸ್ತಾನದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಸಿಫ್ ಅಲಿ(Asif Ali) ಅವರು ತಮ್ಮ 33 ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ(Asif Ali retires) ಘೋಷಿಸಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಈ ಸುದ್ದಿಯನ್ನು ದೃಢಪಡಿಸಿದ್ದಾರೆ. ಆದಾಗ್ಯೂ, ಅವರು ದೇಶೀಯ ಮತ್ತು ವಿಶ್ವಾದ್ಯಂತ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳುವುದನ್ನು ಮುಂದುವರಿಸಲಿದ್ದಾರೆ.
"ನಾನು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. ಪಾಕಿಸ್ತಾನ ಜೆರ್ಸಿ ಧರಿಸುವುದು ನನ್ನ ಜೀವನದ ಅತ್ಯಂತ ದೊಡ್ಡ ಗೌರವವಾಗಿದೆ ಮತ್ತು ಕ್ರಿಕೆಟ್ ಮೈದಾನದಲ್ಲಿ ನನ್ನ ದೇಶಕ್ಕೆ ಸೇವೆ ಸಲ್ಲಿಸುವುದು ನನ್ನ ಹೆಮ್ಮೆಯ ಅಧ್ಯಾಯವಾಗಿದೆ. ನಾನು ಅಪಾರ ಕೃತಜ್ಞತೆಯಿಂದ ನಿವೃತ್ತನಾಗುತ್ತೇನೆ ಮತ್ತು ದೇಶೀಯ ಮತ್ತು ಲೀಗ್ ಕ್ರಿಕೆಟ್ ಅನ್ನು ವಿಶ್ವಾದ್ಯಂತ ಆಡುವ ಮೂಲಕ ಆಟದ ಬಗ್ಗೆ ನನ್ನ ಉತ್ಸಾಹವನ್ನು ಹಂಚಿಕೊಳ್ಳುವುದನ್ನು ಮುಂದುವರಿಸುತ್ತೇನೆ" ಎಂದು ಆಸಿಫ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
2018 ರಲ್ಲಿ ಪದಾರ್ಪಣೆ ಮಾಡಿದ ನಂತರ, ಅಲಿ 21 ಏಕದಿನ ಮತ್ತು 58 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಎರಡೂ ಸ್ವರೂಪಗಳಲ್ಲಿ ಒಟ್ಟು 959 ರನ್ ಗಳಿಸಿದ್ದಾರೆ. ಫಿನಿಷರ್ ಮತ್ತು ಪವರ್ ಹಿಟ್ಟರ್ ಎಂದು ಕರೆಯಲ್ಪಡುವ ಅವರು ಏಕದಿನದಲ್ಲಿ 121.65 ಮತ್ತು ಟಿ20ಯಲ್ಲಿ 133.87 ಸ್ಟ್ರೈಕ್ ರೇಟ್ ಕಾಯ್ದುಕೊಂಡಿದ್ದಾರೆ.
ಅಲಿಯವರ ವೃತ್ತಿಜೀವನವು ಹಲವಾರು ಸ್ಮರಣೀಯ ಪಾತ್ರಗಳಿಂದ ಗಮನ ಸೆಳೆಯುತ್ತದೆ. 2021 ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ, ಪಾಕಿಸ್ತಾನಕ್ಕೆ ಗೆಲ್ಲಲು 12 ಎಸೆತಗಳಲ್ಲಿ 24 ರನ್‌ಗಳು ಬೇಕಾಗಿದ್ದಾಗ, ಅವರು ಕರೀಮ್ ಜನತ್ ಅವರ ಕೊನೆಯ ಓವರ್‌ನಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದ್ದರು. ಕೇವಲ ಏಳು ಎಸೆತಗಳಲ್ಲಿ 25 ರನ್ ಗಳಿಸಿ ಇನ್ನೂ ಒಂದು ಓವರ್ ಬಾಕಿ ಇರುವಾಗಲೇ ತಂಡಕ್ಕೆ ಗೆಲುವನ್ನು ತಂದುಕೊಟ್ಟಿದ್ದರು.
ಇದನ್ನೂ ಓದಿ ಟೆಸ್ಟ್, ಏಕದಿನ ವಿಶ್ವಕಪ್‌ಗೆ ಗಮನ ಹರಿಸಲು ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಟಾರ್ಕ್