ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pat Cummins: ಕೊಹ್ಲಿ, ರೋಹಿತ್‌ ಕಮ್‌ಬ್ಯಾಕ್‌ ಸರಣಿಗೆ ಆಸೀಸ್‌ ನಾಯಕ ಕಮಿನ್ಸ್‌ ಅಲಭ್ಯ

Pat Cummins back injury: "ಕಮ್ಮಿನ್ಸ್ ಅವರನ್ನು ಮುಂಬರುವ ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಪರಿಗಣಿಸಲಾಗುವುದಿಲ್ಲ ಮತ್ತು ಅವರ ಪುನರ್ವಸತಿ ಯೋಜನೆಯನ್ನು ಮುಂದುವರಿಸಲಿದ್ದು, ಆಶಸ್ ತಯಾರಿಯ ಭಾಗವಾಗಿ ಬೌಲಿಂಗ್‌ಗೆ ಮರಳುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿಕೆಯಲ್ಲಿ ತಿಳಿಸಿದೆ.

ಬೆನ್ನು ನೋವು; ಭಾರತ ಸರಣಿಗೆ ಆಸೀಸ್‌ ನಾಯಕ ಕಮಿನ್ಸ್‌ ಅಲಭ್ಯ

-

Abhilash BC Abhilash BC Sep 2, 2025 10:59 AM

ಸಿಡ್ನಿ: ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿರುವ ಭಾರತೀಯ ಕ್ರಿಕೆಟ್ ಹಿರಿಯ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ(Virat Kohli) ಮತ್ತು ರೋಹಿತ್ ಶರ್ಮಾ(Rohit Sharma) ಏಕದಿನ ಕ್ರಿಕೆಟ್‌ಗೆ ಮಾತ್ರ ಲಭ್ಯರಿದ್ದಾರೆ. ಉಭಯ ಆಟಗಾರರು ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ(team india australia tour) ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೂಲಕ ಮತ್ತೆ ಕ್ರಿಕೆಟ್‌ ಕಮ್‌ಬ್ಯಾಕ್‌ ಮಾಡಲಿದ್ದಾರೆ. ಆದರೆ ಸರಣಿಯಿಂದ ಆಸ್ಟ್ರೇಲಿಯಾದ ನಾಯಕ ಪ್ಯಾಟ್‌ ಕಮಿನ್ಸ್‌(Pat Cummins) ಅಲಭ್ಯರಾಗಲಿದ್ದಾರೆ. ಅವರು ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಬೆನ್ನಿನ ಕೆಳಭಾಗದ ಗಾಯದಿಂದ(Pat Cummins back injury) ಬಳಲುತ್ತಿರುವ ಪ್ಯಾಟ್ ಕಮ್ಮಿನ್ಸ್ ಭಾರತ ಸರಣಿ ಮಾತ್ರವಲ್ಲದೆ ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಿಂದಲೂ ಹೊರಗುಳಿದಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಮಂಗಳವಾರ ದೃಢಪಡಿಸಿದೆ.

"ಕಮ್ಮಿನ್ಸ್ ಅವರನ್ನು ಮುಂಬರುವ ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಪರಿಗಣಿಸಲಾಗುವುದಿಲ್ಲ ಮತ್ತು ಅವರ ಪುನರ್ವಸತಿ ಯೋಜನೆಯನ್ನು ಮುಂದುವರಿಸಲಿದ್ದು, ಆಶಸ್ ತಯಾರಿಯ ಭಾಗವಾಗಿ ಬೌಲಿಂಗ್‌ಗೆ ಮರಳುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿಕೆಯಲ್ಲಿ ತಿಳಿಸಿದೆ.

ಆಸ್ಟ್ರೇಲಿಯಾ ಸರಣಿ ಕೊಹ್ಲಿ ಮತ್ತು ರೋಹಿತ್‌ ಪುನರಾಗಮನಕ್ಕೆ ಒಂದು ವೇದಿಕೆಯಾಗಿದೆ. ಆಸೀಸ್‌ ಏಕದಿನ ಸರಣಿಯು ಅಕ್ಟೋಬರ್ 19 ರಂದು ಪರ್ತ್‌ನಲ್ಲಿ ಆರಂಭವಾಗಲಿದ್ದು, ಎರಡನೇ ಪಂದ್ಯ ಅಕ್ಟೋಬರ್ 23 ರಂದು ಅಡಿಲೇಡ್‌ನಲ್ಲಿ ಮತ್ತು ಕೊನೆಯ ಪಂದ್ಯ ಅಕ್ಟೋಬರ್ 25 ರಂದು ಸಿಡ್ನಿಯಲ್ಲಿ ನಡೆಯಲಿದೆ.

ಇದನ್ನೂ ಓದಿ IND vs AUS Odi: ಭಾರತ 'ಎ' ತಂಡದ ಪರ ಕೊಹ್ಲಿ, ರೋಹಿತ್‌ ಕಣಕ್ಕೆ?

ಆಸ್ಟ್ರೇಲಿಯಾ vs ಭಾರತ ಏಕದಿನ ಸರಣಿ ವೇಳಾಪಟ್ಟಿ

ಮೊದಲ ಏಕದಿನ; ಅಕ್ಟೋಬರ್ 19, ಪರ್ತ್

ಎರಡನೇ ಏಕದಿನ; ಅಕ್ಟೋಬರ್ 23, ಅಡಿಲೇಡ್

ಮೂರನೇ ಏಕದಿನ; ಅಕ್ಟೋಬರ್ 25, ಸಿಡ್ನಿ