ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

RR vs RCB: ಗೋಲ್ಡನ್‌ ಡಕ್‌ ಆಗಿ ಅನಗತ್ಯ ದಾಖಲೆ ಬರೆದ ಫಿಲ್‌ ಸಾಲ್ಟ್‌

Phil Salt: ಪಂದ್ಯದ ಬಗ್ಗೆ ಹೇಳುವುದಾದರೆ, ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ಆರ್‌ಸಿಬಿ 8 ವಿಕೆಟ್‌ಗೆ 201 ರನ್‌ ಬಾರಿಸಿತು. ಈ ಬೃಹತ್ ಗುರಿಯನ್ನು ರಾಜಸ್ಥಾನ ರಾಯಲ್ಸ್ 12 ಎಸೆತ ಬಾಕಿ ಇರುವಂತೆ 4 ವಿಕೆಟ್‌ಗೆ 202 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ಗೋಲ್ಡನ್‌ ಡಕ್‌ ಆಗಿ ಅನಗತ್ಯ ದಾಖಲೆ ಬರೆದ ಫಿಲ್‌ ಸಾಲ್ಟ್‌

Phil Salt -

Abhilash BC
Abhilash BC Apr 11, 2026 6:57 AM

ಗುವಾಹಟಿ, ಎ.11: ರಾಜಸ್ಥಾನ್‌ ರಾಯಲ್ಸ್‌(RR vs RCB) ವಿರುದ್ಧ ಶುಕ್ರವಾರ ರಾತ್ರಿ ನಡೆದಿದ್ದ ಐಪಿಎಲ್‌(IPL 2026) ಪಂದ್ಯದಲ್ಲಿ ಆರ್‌ಸಿಬಿ ತಂಡ 6 ವಿಕೆಟ್‌ ಅಂತರದ ಸೋಲು ಕಂಡಿತು. ಈ ಪಂದ್ಯದಲ್ಲಿ ಗೋಲ್ಡನ್‌ ಡಕ್‌ ಆದ ಫಿಲ್‌ ಸಾಲ್ಟ್‌(Phil Salt) ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.

ಜೋಫ್ರಾ ಆರ್ಚರ್‌ ಎಸೆದ ಇನಿಂಗ್ಸ್‌ನ ಮೊದಲ ಎಸೆತದಲ್ಲೇ ವಿಕೆಟ್‌ ಕಳೆದುಕೊಂಡ ಸಾಲ್ಟ್‌, ಐಪಿಎಲ್ ಪಂದ್ಯದ ಮೊದಲ ಎಸೆತದಲ್ಲೇ ಮೂರು ಬಾರಿ ಔಟ್ ಆದ ಆರ್‌ಸಿಬಿಯ ಮೊದಲ ಹಾಗೂ ಒಟ್ಟಾರೆಯಾಗಿ 4ನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಐಪಿಎಲ್‌ನಲ್ಲಿ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಔಟಾದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಭಾರತದ ಮಾಜಿ ವಿಕೆಟ್‌ಕೀಪರ್-ಬ್ಯಾಟರ್ ಪಾರ್ಥಿವ್ ಪಟೇಲ್ ಅಗ್ರಸ್ಥಾನದಲ್ಲಿದ್ದಾರೆ. ಪಟೇಲ್ ಆರು ತಂಡಗಳಿಗಾಗಿ 139 ಐಪಿಎಲ್ ಪಂದ್ಯಗಳನ್ನು ಆಡಿ ಐಪಿಎಲ್‌ನಲ್ಲಿ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ನಾಲ್ಕು ಬಾರಿ ಔಟಾಗಿದ್ದಾರೆ. ಉಳಿದಂತೆ ಡ್ವೇನ್ ಸ್ಮಿತ್, ಪೃಥ್ವಿ ಶಾ, ಕೆಎಲ್ ರಾಹುಲ್ ಮತ್ತು ಸಾಲ್ಟ್ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಮೂರು ಬಾರಿ ಔಟಾಗಿದ್ದಾರೆ.

ಐಪಿಎಲ್‌ನಲ್ಲಿ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಅತಿ ಹೆಚ್ಚು ಬಾರಿ ಔಟ್ ಆದ ಆಟಗಾರರು

4 - ಪಾರ್ಥಿವ್ ಪಟೇಲ್

3 - ಡ್ವೇನ್ ಸ್ಮಿತ್

3 - ಪೃಥ್ವಿ ಶಾ

3 – ಕೆಎಲ್ ರಾಹುಲ್

3 - ಫಿಲ್ ಸಾಲ್ಟ್

ಪಂದ್ಯದ ಬಗ್ಗೆ ಹೇಳುವುದಾದರೆ, ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ಆರ್‌ಸಿಬಿ 8 ವಿಕೆಟ್‌ಗೆ 201 ರನ್‌ ಬಾರಿಸಿತು. ಈ ಬೃಹತ್ ಗುರಿಯನ್ನು ರಾಜಸ್ಥಾನ ರಾಯಲ್ಸ್ 12 ಎಸೆತ ಬಾಕಿ ಇರುವಂತೆ 4 ವಿಕೆಟ್‌ಗೆ 202 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ಚೇಸಿಂಗ್‌ ವೇಳೆ ಸೂರ್ಯವಂಶಿ ಮತ್ತು ಜುರೆಲ್‌ ಆರ್‌ಸಿಬಿ ಬೌಲರ್‌ಗಳನ್ನು ಸರಿಯಾಗಿ ದಂಡಿಸಿದರು. ಜಿದ್ದಿಗೆ ಬಿದ್ದವರಂತೆ ಬ್ಯಾಟ್‌ ಬೀಸಿದ ಈ ಜೋಡಿ 2ನೇ ವಿಕೆಟ್‌ಗೆ ಕೇವಲ 37 ಎಸೆತಗಳಲ್ಲಿ 108 ರನ್‌ ಬಾರಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸೂರ್ಯವಂಶಿ ಅಂತಿಮವಾಗಿ 26 ಎಸೆತಗಳನ್ನು ಎದುರಿಸಿದ ವೈಭವ್ 8 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಬರೊಬ್ಬರಿ 78 ರನ್ ಚಚ್ಚಿದರು.

RCB vs RR:ಆರ್‌ಸಿಬಿ ಸೋಲಿಗೆ ಈ ಆಟಗಾರನೇ ಕಾರಣ ಎಂದ ರಜತ್‌ ಪಾಟಿದಾರ್‌!

ಜುರೇಲ್‌ 43 ಎಸೆತಗಳಿಂದ 8 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿ ಅಜೇಯ 81 ರನ್‌ ಕಲೆಹಾಕಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಜಡೇಜಾ 24 ರನ್‌ ಗಳಿಸಿ ಅಜೇಯರಾಗಿ ಉಳಿದರು. ಮೊದಲ ಪಂದ್ಯ ಆಡಿದ ಜೋಶ್‌ ಹ್ಯಾಜಲ್‌ವುಡ್‌ 2 ವಿಕೆಟ್‌ ಕಿತ್ತರು 44 ರನ್‌ ಬಿಟ್ಟುಕೊಟ್ಟರು.