ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಾರ್ವೆ ಚೆಸ್ ಗೆದ್ದು ಇತಿಹಾಸ ನಿರ್ಮಿಸಿದ ಆರ್. ಪ್ರಜ್ಞಾನಂದ

R. Praggnanandhaa: ಟೂರ್ನಿಯುದ್ದಕ್ಕೂ ಅಮೋಘ ಆಟವಾಡಿದ ಪ್ರಜ್ಞಾನಂದ ಎಲೈಟ್ ಪಂದ್ಯಾವಳಿಯಲ್ಲಿ ವಿಶ್ವ ನಂ.1 ಮ್ಯಾಗ್ನಸ್ ಕಾರ್ಲ್‌ಸೆನ್, ಹಾಲಿ ವಿಶ್ವ ಚಾಂಪಿಯನ್ ಡಿ ಗುಕೇಶ್, ಅಲಿರೆಜಾ ಫಿರೌಜ್ಜಾ, ವೆಸ್ಲಿ ಸೊ ಮತ್ತು ಕೀಮರ್ ಅವರನ್ನು ಮಣಿಸಿದ್ದರು. 20 ವರ್ಷದ ಆಟಗಾರ ಸತತ ನಾಲ್ಕು ಕ್ಲಾಸಿಕ್ ಪಂದ್ಯಗಳನ್ನು ಗೆದ್ದು ಅಗ್ರಸ್ಥಾನ ಪಡೆದರು.

ನಾರ್ವೆ ಚೆಸ್ ಗೆದ್ದು ಇತಿಹಾಸ ನಿರ್ಮಿಸಿದ ಆರ್. ಪ್ರಜ್ಞಾನಂದ

R Praggnanandhaa -

Abhilash BC
Abhilash BC Jun 6, 2026 8:11 AM

ನವದೆಹಲಿ, ಜೂ.6: ಡೀಚ್‌ಮನ್ ಬ್ಜೋರ್ವಿಕಾದಲ್ಲಿ ನಡೆದ 10ನೇ ಮತ್ತು ಅಂತಿಮ ಸುತ್ತಿನಲ್ಲಿ ಭಾರತೀಯ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ(Praggnanandhaa) ಅವರು ಜರ್ಮನ್ ವಿನ್ಸೆಂಟ್ ಕೀಮರ್ ಅವರನ್ನು ಸೋಲಿಸಿ 2026 ರ ನಾರ್ವೆ ಚೆಸ್ ಪ್ರಶಸ್ತಿಯನ್ನು ಗೆದ್ದರು. ಈ ಸಾಧನೆಗೈದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೊನೆಯ ಸುತ್ತಿನಲ್ಲಿ ಭರ್ಜರಿ ಗೆಲುವಿನೊಂದಿಗೆ ಅವರು 18 ಅಂಕಗಳೊಂದಿಗೆ ಲೀಡರ್‌ಬೋರ್ಡ್‌ನಲ್ಲಿ ಅಗ್ರಸ್ಥಾನ ಪಡೆದರು, ಅಮೆರಿಕದ ವೆಸ್ಲಿ ಸೋಗಿಂತ ಒಂದು ಅಂಕ ಮುಂದಿದ್ದರು.

ಟೂರ್ನಿಯುದ್ದಕ್ಕೂ ಅಮೋಘ ಆಟವಾಡಿದ ಪ್ರಜ್ಞಾನಂದ ಎಲೈಟ್ ಪಂದ್ಯಾವಳಿಯಲ್ಲಿ ವಿಶ್ವ ನಂ.1 ಮ್ಯಾಗ್ನಸ್ ಕಾರ್ಲ್‌ಸೆನ್, ಹಾಲಿ ವಿಶ್ವ ಚಾಂಪಿಯನ್ ಡಿ ಗುಕೇಶ್, ಅಲಿರೆಜಾ ಫಿರೌಜ್ಜಾ, ವೆಸ್ಲಿ ಸೊ ಮತ್ತು ಕೀಮರ್ ಅವರನ್ನು ಮಣಿಸಿದ್ದರು. 20 ವರ್ಷದ ಆಟಗಾರ ಸತತ ನಾಲ್ಕು ಕ್ಲಾಸಿಕ್ ಪಂದ್ಯಗಳನ್ನು ಗೆದ್ದು ಅಗ್ರಸ್ಥಾನ ಪಡೆದರು.

"ಸತತ ಎರಡು ಪಂದ್ಯಗಳಲ್ಲಿ ಸೋತಾಗ ನಾನು ಇದರ ಬಗ್ಗೆ ಯೋಚಿಸಲಿಲ್ಲ. ನಾನು ಚೆಸ್ ಆಡಲು ಬಯಸಿದ್ದೆ" ಎಂದು ಪ್ರಗ್ನಾನಂದ ಪ್ರಶಸ್ತಿ ಬಳಿಕ ಹೇಳಿದರು.

IND vs AFG Test: ಆಫ್ಘಾನ್‌ ಟೆಸ್ಟ್‌ನಲ್ಲಿ ಭಾರತ ಪರ ಎರಡು ಪದಾರ್ಪಣೆ ಸಾಧ್ಯತೆ

ಪ್ರಜ್ಞಾನಂದ ಅವರ ಪ್ರಶಸ್ತಿ ಓಟದಲ್ಲಿ ಏಳು ಬಾರಿ ನಾರ್ವೆ ಚೆಸ್ ಚಾಂಪಿಯನ್ ಮತ್ತು ವಿಶ್ವದ ನಂ. 1 ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಕ್ಲಾಸಿಕಲ್ ಸ್ವರೂಪದಲ್ಲಿ ಎರಡು ಗೆಲುವುಗಳು ಸೇರಿವೆ. ವಿಶ್ವನಾಥನ್ ಆನಂದ್ (ಲಿನಾರೆಸ್-ಮೊರೆಲಿಯಾ 2007) ಮತ್ತು ವೆಸೆಲಿನ್ ಟೊಪಾಲೋವ್ (ಬಿಲ್ಬಾವೊ ಮಾಸ್ಟರ್ಸ್ ಗ್ರ್ಯಾಂಡ್ ಸ್ಲ್ಯಾಮ್ ಫೈನಲ್ 2008) ನಂತರ ಟೂರ್ನಮೆಂಟ್‌ನಲ್ಲಿ ನಾರ್ವೆಯ ಸ್ಪರ್ಧಿ ವಿರುದ್ಧ ಎರಡು ಗೆಲುವು ಗಳಿಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.



ಮಹಿಳೆಯರ ವಿಭಾಗದಲ್ಲಿ ನಿರಾಸೆ

ಮಹಿಳೆಯರ ವಿಭಾಗದಲ್ಲಿ, ಅಂತಿಮ ಸುತ್ತಿನಲ್ಲಿ ಎಲ್ಲಾ ಆಟಗಳು ನಿರ್ಣಾಯಕವಾಗಿ ಕೊನೆಗೊಂಡವು. ಒಂದು ಸುತ್ತು ಬಾಕಿ ಇರುವಾಗ ಕಝಾಕಿಸ್ತಾನದ ಬಿಬಿಸಾರಾ ಅಸ್ಸೌಬಯೇವಾ, ವಿಶ್ವ ಚಾಂಪಿಯನ್ ಜು ವೆಂಜುನ್ ವಿರುದ್ಧ ಸೋತರು. ಅವರು 16.5 ಅಂಕಗಳೊಂದಿಗೆ ಆಟ ಮುಗಿಸಿದರು. ಆದರೆ ಚೀನಾದ ಝು ಜಿನರ್ ಭಾರತೀಯ ಏಸ್ ಕೊನೆರು ಹಂಪಿ ಅವರನ್ನು ಹಿಂದಿಕ್ಕಿ 16 ಅಂಕಗಳೊಂದಿಗೆ ಎರಡನೇ ಸ್ಥಾನವನ್ನು ಪಡೆದರು. ಉಕ್ರೇನ್‌ನ ಅನ್ನಾ ಮುಜಿಚುಕ್ ದಿವ್ಯಾ ದೇಶಮುಖ್ ಅವರನ್ನು ಸೋಲಿಸಿ ಮೂರನೇ ಸ್ಥಾನ ಪಡೆದರು.