ರವೀಂದ್ರ ಜಡೇಜಾ ಐಕಾನಿಕ್ ಪುಷ್ಪ ಶೈಲಿಯ ಸಂಭ್ರಮಾಚರಣೆಗೆ ಫಿದಾ ಆದ ಪ್ರೇಕ್ಷಕರು
Ravindra Jadeja Pushpa celebration: ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ಹೊರತಾಗಿಯೂ ರಾಜಸ್ಥಾನ ಫೈನಲ್‌ಗೇರಿಲ್ಲ. ತಂಡ ಶುಕ್ರವಾರ ಕ್ವಾಲಿಫೈಯರ್-2 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ. ಇದರಲ್ಲಿ ಗೆದ್ದ ತಂಡ ಫೈನಲ್‌ಗೇರಲಿದೆ. ಗುಜರಾತ್ ತಂಡ ಮಂಗಳವಾರ ಕ್ವಾಲಿಫೈಯರ್-1ರಲ್ಲಿ ಆರ್‌ಸಿಬಿ ವಿರುದ್ಧ ಸೋತಿತ್ತು.
Ravindra Jadeja Pushpa celebration -
ಮುಲ್ಲನ್‌ಪುರ, ಮೇ 28: ಬುಧವಾರ ರಾತ್ರಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್‌ನ ಎಲಿಮಿನೇಟರ್(IPL Eliminator 2026) ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್(RR vs SRH) ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 47 ರನ್‌ಗಳ ಗೆಲುವು ದಾಖಲಿಸಿ ‘ಸೆಮಿಫೈನಲ್’ ಮಾದರಿಯ ಎರಡನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯಿತು. ಈ ಪಂದ್ಯದಲ್ಲಿ ರವೀಂದ್ರ ಜಡೇಜಾ(Ravindra Jadeja ) ಅವರು ನಿತೀಶ್ ಕುಮಾರ್ ರೆಡ್ಡಿಯ ವಿಕೆಟ್ ಪಡೆದ ಬಳಿಕ ಐಕಾನಿಕ್ 'ಪುಷ್ಪ' ಗೆಸ್ಚರ್(Pushpa celebration)ನೊಂದಿಗೆ ಸಂಭ್ರಮಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
11 ನೇ ಓವರ್‌ನಲ್ಲಿ, ನಿತೀಶ್ ಕುಮಾರ್ ರೆಡ್ಡಿ ಅವರು ಜಡೇಜಾ ಅವರ ಎಸೆತವನ್ನು ಸಿಕ್ಸರ್‌ಗಟ್ಟುವ ಪ್ರಯತ್ನದಲ್ಲಿ ಚೆಂಡನ್ನು ಡೀಪ್ ಮಿಡ್-ವಿಕೆಟ್ ಕಡೆಗೆ ಬಾರಿಸಿದರು. ಆದರೆ ಹೊಡೆತವನ್ನು ಸಮಯಕ್ಕೆ ಸರಿಯಾಗಿ ಹೊಡೆಯಲು ವಿಫಲರಾಗಿ ದಾಸುನ್ ಶನಕ ಹಿಡಿದ ಕ್ಯಾಚ್‌ಗೆ ವಿಕೆಟ್ ಕಳೆದುಕೊಂಡರು. ಈ ವೇಳೆ ಜಡೇಜಾ ನಿತೀಶ್ ಕುಮಾರ್ ಕಡೆ ನೋಡಿ 'ಪುಷ್ಪ' ಶೈಲಿಯಲ್ಲಿ ಸಂಭ್ರಮಿಸಿದರು. ರೆಡ್ಡಿ ಕೇವಲ 20 ಎಸೆತಗಳಲ್ಲಿ 38 ರನ್ ಬಾರಿಸಿದರು. ಜಡೇಜಾ ಪಂದ್ಯದಲ್ಲಿ 3 ಓವರ್‌ಗೆ 21 ರನ್ ಬಿಟ್ಟುಕೊಟ್ಟು 2 ವಿಕೆಟ್ ಕಿತ್ತರು.
Ravindra Jadeja and Sushant Mishra making sure the wicket-taking party keeps going 🙌
— IndianPremierLeague (@IPL) May 27, 2026
Updates ▶️ https://t.co/OBIYYIuhbt #TATAIPL | #Eliminator | #TheFinalLeap | #SRHvRR pic.twitter.com/BJHptPcrLJ
ಆಕ್ರಮಣಕಾರಿ ಆಟಗಾರರ ಪಡೆಯನ್ನೇ ಹೊಂದಿದ್ದ ಸನ್‌ರೈಸರ್ಸ್, ಈ ಮೊತ್ತವನ್ನು ಬೆನ್ನತ್ತಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಒತ್ತಡಕ್ಕೊಳಗಾದ ಬ್ಯಾಟರ್ಸ್ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿದರು. ಅಭಿಷೇಕ್ ಸೊನ್ನೆ ಸುತ್ತಿದರು. ಇಶಾನ್ ಕಿಶನ್ ಅಬ್ಬರ 33 ರನ್(11 ಎಸೆತ)ಗೆ ಕೊನೆಗೊಂಡಿತು. ಟ್ರ್ಯಾವಿಸ್ ಹೆಡ್(17) ಹೆನ್ರಿಚ್ ಕ್ಲಾಸೆನ್(18) ವಿಫಲರಾಗುವುದರೊಂದಿಗೆ ತಂಡದ ಸೋಲು ಖಚಿತವಾಯಿತು.
RR vs GT: ಗುಜರಾತ್-ರಾಜಸ್ಥಾನ್ ಹೈವೋಲ್ಟೇಜ್ ಕ್ವಾಲಿಫೈಯರ್-2 ಪಂದ್ಯ ಯಾವಾಗ?
ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ಪರ 15 ವರ್ಷದ ವೈಭವ್ ಸೂರ್ಯವಂಶಿ ಅಕ್ಷರಶಃ ಆರ್ಭಟಿಸಿದರು. ಒಬ್ಬ ಬೌಲರನ್ನೂ ಬಿಡದೆ ದಂಡಿಸಿ 29 ಎಸೆತಕ್ಕೆ 97 ರನ್ ಗಳಿಸಿ ಕೇವಲ ಮೂರು ರನ್ ಅಂತರದಿಂದ ಐಪಿಎಲ್‌ನ ಅತಿ ವೇಗದ ಶತಕದ ದಾಖಲೆ ಮುರಿಯವ ಅವಕಾಶದಿಂದ ವಂಚಿತರು. ಆದರೆ ತಂಡವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಧ್ರುವ್ ಜುರೆಲ್ 21 ಎಸೆತಕ್ಕೆ 50, ನಾಯಕ ರಿಯಾನ್ ಪರಾಗ್ 12 ಎಸೆತಕ್ಕೆ 26, ಜೈಸ್ವಾಲ್ 29 ಎಸೆತಕ್ಕೆ 29 ರನ್ ಸಿಡಿಸಿದರು. ಮಾರಕ ದಾಳಿ ಸಂಘಟಿಸಿದ ಜೋಫ್ರಾ ಆರ್ಚರ್ 3 ವಿಕೆಟ್ ಪಡೆದರು.
ಈ ಪಂದ್ಯದಲ್ಲಿ ಗೆದ್ದ ಹೊರತಾಗಿಯೂ ರಾಜಸ್ಥಾನ ಫೈನಲ್‌ಗೇರಿಲ್ಲ. ತಂಡ ಶುಕ್ರವಾರ ಕ್ವಾಲಿಫೈಯರ್-2 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ. ಇದರಲ್ಲಿ ಗೆದ್ದ ತಂಡ ಫೈನಲ್‌ಗೇರಲಿದೆ.