ಟೆಸ್ಟ್ ಕ್ರಿಕೆಟ್‌ನಲ್ಲಿ ಧೋನಿ ಜತೆ ಎಲೈಟ್ ಪಟ್ಟಿ ಸೇರಿದ ರಿಷಭ್ ಪಂತ್; ಈ ಸಾಧನೆಗೈದ ಮೂರನೇ ಭಾರತೀಯ
Rishabh Pant: 1983 ರ ವಿಶ್ವಕಪ್ ವಿಜೇತ ಭಾರತದ ತಂಡದ ಸದಸ್ಯರಲ್ಲಿ ಒಬ್ಬರಾಗಿದ್ದ ಸೈಯದ್ ಕಿರ್ಮಾನಿ, ಒಂದು ದಶಕಕ್ಕೂ ಹೆಚ್ಚು ಕಾಲ ತಮ್ಮ ವೃತ್ತಿಜೀವನದಲ್ಲಿ ಒಟ್ಟು 88 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು 1976 ರಿಂದ 1986 ರವರೆಗೆ ಭಾರತವನ್ನು ಪ್ರತಿನಿಧಿಸಿದರು.
Rishabh Pant -
ಮುಲ್ಲನ್‌ಪುರ, ಜೂ.6: ರಿಷಭ್ ಪಂತ್(Rishabh Pant) ತಮ್ಮ ಟೆಸ್ಟ್ ಉಪನಾಯಕತ್ವವನ್ನು ಕಳೆದುಕೊಂಡಿರಬಹುದು, ಆದರೆ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಭಾರತೀಯ ಟೆಸ್ಟ್ ಇತಿಹಾಸದಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಮುಲ್ಲನ್‌ಪುರದಲ್ಲಿ ಆರಂಭಗೊಂಡ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಸ್ಥಾನ ಪಡೆಯುವ ಮೂಲಕ ಭಾರತದ ಟೆಸ್ಟ್ ಇತಿಹಾಸದಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿದ ಮೂರನೇ ನಿಯೋಜಿತ ವಿಕೆಟ್ ಕೀಪರ್ ಎನಿಸಿಕೊಂಡರು. ಈ ಮೂಲಕ ದಿಗ್ಗಜರಾದ ಎಂ.ಎಸ್ ಧೋನಿ ಮತ್ತು ಸೈಯದ್ ಕಿರ್ಮಾನಿ ಜತೆ ಎಲೈಟ್ ಪಟ್ಟಿ ಸೇರಿದರು.
1983 ರ ವಿಶ್ವಕಪ್ ವಿಜೇತ ಭಾರತದ ತಂಡದ ಸದಸ್ಯರಲ್ಲಿ ಒಬ್ಬರಾಗಿದ್ದ ಸೈಯದ್ ಕಿರ್ಮಾನಿ, ಒಂದು ದಶಕಕ್ಕೂ ಹೆಚ್ಚು ಕಾಲ ತಮ್ಮ ವೃತ್ತಿಜೀವನದಲ್ಲಿ ಒಟ್ಟು 88 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು 1976 ರಿಂದ 1986 ರವರೆಗೆ ಭಾರತವನ್ನು ಪ್ರತಿನಿಧಿಸಿದರು.
ಭಾರತ ಪರ ಅತಿ ಹೆಚ್ಚು ಟೆಸ್ಟ್ ಪಂದ್ಯಗಳಲ್ಲಿ ಕೀಪಿಂಗ್ ಮಾಡಿದ ದಾಖಲೆ ಮಾಜಿ ನಾಯಕ ಹಾಗೂ ಆಟಗಾರ ಎಂಎಸ್ ಧೋನಿ ಹೆಸರಿನಲ್ಲಿದೆ. ಧೋನಿ 90 ಪಂದ್ಯಗಳನ್ನು ಆಡಿದ್ದಾರೆ. 2014 ರಲ್ಲಿ ಅವರು ಟೆಸ್ಟ್‌ಗೆ ನಿವೃತ್ತಿ ಹೇಳಿದ್ದರು. 28 ವರ್ಷದ ಪಂತ್‌ಗೆ ಧೋನಿಯ ಸಾರ್ವಕಾಲಿಕ ದಾಖಲೆಯನ್ನು ಮುರಿಯಲು ಅವಕಾಶವಿದೆ. ವಿಶ್ವಕಪ್ ಟೆಸ್ಟ್ ಶುರುವಾದಗಿನಿಂದ ಭಾರತ ಹೆಚ್ಚು ಟೆಸ್ಟ್ ಸರಣಿಯನ್ನಾಡುತ್ತಿದೆ.
ಭಾರತ ಪರ ಪದಾರ್ಪಣೆ ಮಾಡಿದ ರಾಜಸ್ಥಾನ ಯುವ ಆಲ್‌ರೌಂಡರ್ ಮಾನವ್ ಸುತಾರ್ ಯಾರು?
ಒಟ್ಟಾರೆಯಾಗಿ, ಪಂತ್ ಇತಿಹಾಸದಲ್ಲಿ 50 ಟೆಸ್ಟ್ ಪಂದ್ಯಗಳನ್ನು ಆಡಿದ 34ನೇ ನಿಯೋಜಿತ ವಿಕೆಟ್ ಕೀಪರ್ ಆಗಿದ್ದಾರೆ. ದಕ್ಷಿಣ ಆಫ್ರಿಕಾದ ಮಾರ್ಕ್ ಬೌಚರ್ (147) ಮತ್ತು ಆಸ್ಟ್ರೇಲಿಯಾದ ಇಯಾನ್ ಹೀಲಿ (119) ಸೇರಿದಂತೆ ಕೇವಲ ಇಬ್ಬರು ವಿಕೆಟ್ ಕೀಪರ್‌ಗಳು 100 ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಮತ್ತೊಂದೆಡೆ, ಧೋನಿ, ಆಡಮ್ ಗಿಲ್‌ಕ್ರಿಸ್ಟ್, ರಾಡ್ ಮಾರ್ಷ್, ಅಲನ್ ನಾಟ್ ಮತ್ತು ಗಾಡ್‌ಫ್ರೇ ಇವಾನ್ಸ್ ಸೇರಿದಂತೆ ಐದು ಆಟಗಾರರು ತಮ್ಮ ತಮ್ಮ ವೃತ್ತಿಜೀವನದಲ್ಲಿ 90 ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್‌ಗಳಲ್ಲಿ ಆಡಿದ್ದಾರೆ.
ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ ಭಾರತೀಯ ವಿಕೆಟ್‌ಕೀಪರ್‌ಗಳು
ಎಂ.ಎಸ್ ಧೋನಿ- 90 (2005-2014)
ಸೈಯದ್ ಕಿರ್ಮಾನಿ- 88 (1976-1986)
ರಿಷಬ್ ಪಂತ್- 50* (2018-ಪ್ರಸ್ತುತ)
ಕಿರಣ್ ಮೋರ್- 49 (1986-1993)
ಫಾರೋಖ್ ಇಂಜಿನಿಯರ್- 46(1961-1975)
ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶುಭಮನ್ ಗಿಲ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. 23 ವರ್ಷದ ಸುತಾರ್‌ಗೆ ಕುಲ್‌ದೀಪ್ ಯಾದವ್ ಅಂತಾರಾಷ್ಟ್ರೀಯ ಕ್ಯಾಪ್ ನೀಡಿ ತಂಡಕ್ಕೆ ಸ್ವಾಗತಿಸಿದರು. ಫೆಬ್ರವರಿ 2022 ರಲ್ಲಿ ಆಂಧ್ರಪ್ರದೇಶ ವಿರುದ್ಧದ ಪಂದ್ಯದ ಮೂಲಕ ಸುತಾರ್ ರಾಜಸ್ಥಾನ ಪರ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ಪ್ರಯಾಣವನ್ನು ಪ್ರಾರಂಭಿಸಿದರು. ಈ ಮೂಲಕ ಈ ಮಾದರಿಯಲ್ಲಿ ತಮ್ಮ ಮೊದಲ ವಿಕೆಟ್ ಪಡೆದರು. ಆ ಚೊಚ್ಚಲ ಪಂದ್ಯದಿಂದ, ಎಡಗೈ ಸ್ಪಿನ್ ಆಲ್‌ರೌಂಡರ್ 29 ಪ್ರಥಮ ದರ್ಜೆ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. 129 ವಿಕೆಟ್‌ಗಳನ್ನು ಗಳಿಸಿದ್ದಾರೆ ಮತ್ತು 2.94 ರ ಎಕಾನಮಿ ಕಾಯ್ದುಕೊಂಡಿದ್ದಾರೆ.