ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Rohit Sharma Injury updates: ರೋಹಿತ್‌ಗೆ ಸ್ಕ್ಯಾನಿಂಗ್‌; ಪಂಜಾಬ್‌ ಪಂದ್ಯಕ್ಕೆ ಅನುಮಾನ?

ಆರ್‌ಸಿಬಿ ವಿರುದ್ಧ 13 ಎಸೆತಗಳಿಂದ 19 ರನ್‌ಗಳಿಸಿದ್ದ ರೋಹಿತ್‌ ಬಳಿಕ ನೋವಿನಿಂದ ಮೈದಾನ ತೊರೆದಿದ್ದರು. ಸದ್ಯ ಅವರ ಮೇಲೆ ವೈದ್ಯಕೀಯ ತಂಡ ನಿಗಾ ಇಟ್ಟಿದ್ದು, ಸ್ಕ್ಯಾನಿಂಗ್‌ ಮೂಲಕ ಗಾಯದ ಪ್ರಮಾಣ ಎಷ್ಟಿದೆ ಎಂದು ಪರಿಶೀಲನೆ ನಡೆಸಲಿದೆ. ಒಂದೆರಡು ದಿನಗಳಲ್ಲಿ ಚೇತರಿಸಿಕೊಂಡರೆ ಪಂಜಾಬ್‌ ವಿರುದ್ಧ ಆಡುವ ಸಾಧ್ಯತೆಯಿದೆ.

ಸ್ಕ್ಯಾನಿಂಗ್‌ಗೆ ಒಳಗಾದ ರೋಹಿತ್‌; ಪಂಜಾಬ್‌ ಪಂದ್ಯಕ್ಕೆ ಅನುಮಾನ?

rohit sharma injury -

Abhilash BC
Abhilash BC Apr 14, 2026 10:23 AM

ಮುಂಬಯಿ, ಎ.14: ಮುಂಬೈ ಇಂಡಿಯನ್ಸ್ (MI) ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರು ಭಾನುವಾರ (ಏಪ್ರಿಲ್ 12) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯದಲ್ಲಿ ಅನುಭವಿಸಿದ ಮಂಡಿರಜ್ಜು ಗಾಯದ ತೀವ್ರತೆಯನ್ನು ನಿರ್ಧರಿಸಲು ಸ್ಕ್ಯಾನ್‌ಗೆ ಒಳಗಾಗಲಿದ್ದಾರೆ ಎಂದು ವರದಿಯಾಗಿದೆ. ಕ್ರಿಕ್‌ಬಜ್ ಪ್ರಕಾರ, ಗುರುವಾರ (ಏಪ್ರಿಲ್ 16) ಪಂಜಾಬ್ ಕಿಂಗ್ಸ್(Punjab Kings) ವಿರುದ್ಧದ ಮುಂದಿನ ಪಂದ್ಯದಲ್ಲಿ ರೋಹಿತ್‌ ಆಡುವುದು ಅನುಮಾನ ಎಂದಿದೆ.

ಆರ್‌ಸಿಬಿ ವಿರುದ್ಧ 13 ಎಸೆತಗಳಿಂದ 19 ರನ್‌ಗಳಿಸಿದ್ದ ರೋಹಿತ್‌ ಬಳಿಕ ನೋವಿನಿಂದ ಮೈದಾನ ತೊರೆದಿದ್ದರು. ಸದ್ಯ ಅವರ ಮೇಲೆ ವೈದ್ಯಕೀಯ ತಂಡ ನಿಗಾ ಇಟ್ಟಿದ್ದು, ಸ್ಕ್ಯಾನಿಂಗ್‌ ಮೂಲಕ ಗಾಯದ ಪ್ರಮಾಣ ಎಷ್ಟಿದೆ ಎಂದು ಪರಿಶೀಲನೆ ನಡೆಸಲಿದೆ. ಒಂದೆರಡು ದಿನಗಳಲ್ಲಿ ಚೇತರಿಸಿಕೊಂಡರೆ ಪಂಜಾಬ್‌ ವಿರುದ್ಧ ಆಡುವ ಸಾಧ್ಯತೆಯಿದೆ.

ಕ್ರಿಕೆಟ್ ಆಟಗಾರರು ವಿಕೆಟ್‌ಗಳ ನಡುವಿನ ಓಟಗಳು ಅಥವಾ ಹಠಾತ್ ಔಟ್‌ಫೀಲ್ಡ್ ವೇಗವರ್ಧನೆಗಳ ಸಮಯದಲ್ಲಿ ಮಂಡಿರಜ್ಜು ಗಾಯಗಳು ಆಗಾಗ್ಗೆ ಸಂಭವಿಸುತ್ತವೆ. ಈ ಗಾಯಗಳನ್ನು ಮೂರು ಶ್ರೇಣಿಗಳಾಗಿ ವರ್ಗೀಕರಿಸಲಾಗಿದೆ.

ಸೋತರೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡ ರಾಜಸ್ಥಾನ್‌; 4ನೇ ಸ್ಥಾನಕ್ಕೇರಿದ ಹೈದರಾಬಾದ್‌

ಗ್ರೇಡ್ 1 ಗಾಯವು ಸೌಮ್ಯವಾದ ಒತ್ತಡವಾಗಿದ್ದು, ಇದರಲ್ಲಿ ಸ್ನಾಯು ನಾರುಗಳು ಹಿಗ್ಗುತ್ತವೆ ಆದರೆ ಹರಿದು ಹೋಗುವುದಿಲ್ಲ. ಗ್ರೇಡ್ 2 ಭಾಗಶಃ ಹರಿದು ಹೋಗುವುದರಿಂದ ತಕ್ಷಣದ ನೋವು ಕಾಣಿಸುತ್ತದೆ. ಗ್ರೇಡ್ 3 ಸ್ನಾಯು ಅಥವಾ ಅದರ ಸಂಪರ್ಕಿಸುವ ಸ್ನಾಯುರಜ್ಜು ತೀವ್ರವಾದ, ಸಂಪೂರ್ಣ ಛಿದ್ರತೆಯನ್ನು ಪ್ರತಿನಿಧಿಸುತ್ತದೆ.

ಕೊಹ್ಲಿ ಫಿಟ್‌

ಇದೇ ಪಂದ್ಯದಲ್ಲಿ ಗಾಯಗೊಂಡಿದ್ದ ಆರ್‌ಸಿಬಿಯ ವಿರಾಟ್‌ ಕೊಹ್ಲಿ ಫಿಟ್‌ ಆಗಿದ್ಧು ಬುಧವಾರ ನಡೆಯುವ ಲಖನೌ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಪಾದದ ಗಾಯಕ್ಕೆ ತುತ್ತಾಗಿದ್ದ ಕೊಹ್ಲಿ ಮುಂಬೈ ಪಂದ್ಯದಲ್ಲಿ ಫೀಲ್ಡಿಂಗ್‌ ನಡೆಸದೆ ಡಗೌಟ್‌ನಲ್ಲಿ ಕುಳಿತಿದ್ದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಮುಂಬೈ ತಂಡವು 5 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿ ಶರಣಾಯಿತು. ಮುಂಬೈ ಆಡಿದ ನಾಲ್ಕು ಪಂದ್ಯಗಳ ಪೈಕಿ ಕೇವಲ ಒಂದು ಪಂದ್ಯ ಮಾತ್ರ ಗೆದ್ದಿದೆ. ತಂಡದ ಈ ಕಳಪೆ ಪ್ರದರ್ಶನ ಕಂಡು ಅಭಿಮಾನಿಗಳು ಪಾಂಡ್ಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದು ಅವರನ್ನು ನಾಯಕತ್ವದಿಂದ ಕೆಳಗಿಳಿಸುವಂತೆ ಒತ್ತಾಯಿಸಿದ್ದಾರೆ.