ಆರ್‌ಸಿಬಿ ಹೆಸರು ಬದಲಾಗುತ್ತಾ?; ಹೊಸ ಮಾಲೀಕ ಆರ್ಯಮಾನ್ ಬಿರ್ಲಾ ಸ್ಪಷ್ಟನೆ
RCB Name change: ಆರ್‌ಸಿಬಿ ತಂಡದ ಬ್ರ್ಯಾಂಡ್ ಮೌಲ್ಯವು ಅಂದಾಜು ₹ 2,869 ಕೋಟಿಗೆ (312 ಮಿಲಿಯನ್ ಡಾಲರ್) ಏರಿದೆ. ಈ ಸಾಧನೆ ಮಾಡಿದ ಮೊದಲ ತಂಡವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಐಪಿಎಲ್ ಉದ್ಯಮ ವ್ಯವಹಾರವು ವರ್ಷದಿಂದ ವರ್ಷಕ್ಕೆ ಶೇ 11.4ರಂತೆ ಪ್ರಗತಿ ಕಾಣುತ್ತ ₹ 1.97 ಲಕ್ಷ ಕೋಟಿಗೆ (20.6 ಬಿಲಿಯನ್ ಡಾಲರ್) ಏರಿಕೆಯಾಗಿದೆ.
Royal Challengers Bengaluru -
ಬೆಂಗಳೂರು, ಸೆ.9: ಹಾಲಿ ಐಪಿಎಲ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಈಗಾಗಲೇ ಹೊಸ ಮಾಲೀಕರ ಕೈಸೇರಿದೆ. ಮುಂದಿನ ಆವೃತ್ತಿಯಲ್ಲಿ ತಂಡದ ಹೆಸರು ಬದಲಾಗುವುದೇ ಎಂಬ ಬಗ್ಗೆ ಅಭಿಮಾನಿಗಳಲ್ಲಿ ಅನುಮಾನ ಮೂಡಿತ್ತು. ಈ ಬಗ್ಗೆ ತಂಡದ ಹೊಸ ಮಾಲೀಕ ಆರ್ಯಮಾನ್ ಬಿರ್ಲಾ ಸ್ಪಷ್ಟನೆ ನೀಡಿದ್ದು, ತಂಡದ ಹೆಸರು ಬದಲಾವಣೆಯ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
"ರಾಯಲ್ ಚಾಲೆಂಜರ್ಸ್ ಬೆಂಗಳೂರು, ಈ ಹೆಸರು ಬದಲಾಗುವುದಿಲ್ಲ. ಇದೊಂದು ದೊಡ್ಡ ಬ್ರ್ಯಾಂಡ್. ಈ ಹೆಸರು ನಮಗೂ ಇಷ್ಟ. ತಂಡದ ಹೆಸರು ಬದಲಾಯಿಸುವ ಯಾವ ಯೋಚನೆಯೂ ನಮಗಿಲ್ಲ' ಎಂದು ಆರ್ಯಮಾನ್ ಬಿರ್ಲಾ ಹೇಳಿದ್ದಾರೆ. ಆರ್‌ಸಿಬಿ ತಂಡ ಕಳೆದ ಮಾರ್ಚ್ನಲ್ಲಿ ಆದಿತ್ಯಾ ಬಿರ್ಲಾ ಗ್ರೂಪ್ ಒಳಗೊಂಡ ವಾಣಿಜ್ಯ ಒಕ್ಕೂಟಕ್ಕೆ 16,660 ಕೋಟಿ ರೂ. ಮೊತ್ತಕ್ಕೆ ಮಾರಾಟವಾಗಿತ್ತು.
ಭಾರತ-ಪಾಕಿಸ್ತಾನ ಮಹಿಳಾ ಏಷ್ಯಾ ಕಪ್ ಪಂದ್ಯದ ವೇಳೆ ಭಾರತದ ರಾಷ್ಟ್ರಗೀತೆ ಹಾಡಿದ ಪಾಕ್ ಅಭಿಮಾನಿ!
ಐಪಿಎಲ್ ಸ್ಥಾಪನೆಯಾದಾಗ ಆರ್‌ಸಿಬಿ ತಂಡವನ್ನು ಮದ್ಯದ ದೊರೆ ವಿಜಯ್ ಮಲ್ಯ 111.6 ಮಿಲಿಯನ್ ಡಾಲರ್‌ಗೆ ಖರೀದಿಸಿದ್ದರು. ಅಂದರೆ ಅಂದಿನ ಡಾಲರ್ ಮೌಲ್ಯದ ಪ್ರಕಾರ ಅಂದಾಜು ₹480 ಕೋಟಿ. 2016 ಮಲ್ಯ ತಂಡದ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದ ಬಳಿಕ, ಫ್ರಾಂಚೈಸಿಯನ್ನು ಡಿಯಾಜಿಯೋ ಸಂಸ್ಥೆ ನಿರ್ವಹಿಸುತ್ತಿತ್ತು.
ಆರ್‌ಸಿಬಿ ತಂಡದ ಬ್ರ್ಯಾಂಡ್ ಮೌಲ್ಯವು ಅಂದಾಜು ₹ 2,869 ಕೋಟಿಗೆ (312 ಮಿಲಿಯನ್ ಡಾಲರ್) ಏರಿದೆ. ಈ ಸಾಧನೆ ಮಾಡಿದ ಮೊದಲ ತಂಡವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಐಪಿಎಲ್ ಉದ್ಯಮ ವ್ಯವಹಾರವು ವರ್ಷದಿಂದ ವರ್ಷಕ್ಕೆ ಶೇ 11.4ರಂತೆ ಪ್ರಗತಿ ಕಾಣುತ್ತ ₹ 1.97 ಲಕ್ಷ ಕೋಟಿಗೆ (20.6 ಬಿಲಿಯನ್ ಡಾಲರ್) ಏರಿಕೆಯಾಗಿದೆ. 2023ರಿಂದೀಚೆಗೆ ಐಪಿಎಲ್ ಬ್ರ್ಯಾಂಡ್ 1.1 ಬಿಲಿಯನ್ ಅಮೆರಿಕನ್ ಡಾಲರ್ ಹೆಚ್ಚಿದೆ.
ಜಾಗತಿಕ ದರ್ಜೆಯ ಹೂಡಿಕೆ ಬ್ಯಾಂಕ್ ‘ಹೌಲಿಹಾನ್ ಲೋಕೆ’ ಅಧ್ಯಯನ ವರದಿ ಪ್ರಕಾರ ಆರ್‌ಸಿಬಿಯು 300 ಮಿಲಿಯನ್ ಡಾಲರ್ ದಾಟಿದ ಮೊದಲ ತಂಡವಾಗಿದೆ. 2025ರಲ್ಲಿ 269 ಮಿಲಿಯನ್ ಅಮೆರಿಕನ್ ಡಾಲರ್ (₹2574 ಕೋಟಿ) ಇತ್ತು. ಅತ್ಯಧಿಕ ಮೌಲ್ಯ ಪಡೆದ ಪಟ್ಟಿಯಲ್ಲಿ ಆರ್‌ಸಿಬಿ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಮುಂಬೈ ಇಂಡಿಯನ್ಸ್ (₹2526 ಕೋಟಿ), ಚೆನ್ನೈ ಸೂಪರ್ ಕಿಂಗ್ಸ್ (₹ 2335 ಕೋಟಿ) ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ (₹ 2345 ಕೋಟಿ) ತಂಡಗಳು ಇವೆ.