ರೋಹಿತ್ ಶರ್ಮರ ಸಿಕ್ಸರ್ ದಾಖಲೆ ಮುರಿದ ಸಂಜು ಸ್ಯಾಮ್ಸನ್
Sanju Samson: 15 ರನ್ ಗಳಿಸಿದ್ದಾಗ ಹ್ಯಾರಿ ಬ್ರೂಕ್ ಕೈಚೆಲ್ಲಿದ ಕ್ಯಾಚ್‌ನ ಲಾಭ ಪಡೆದ ಸಂಜು, 42 ಎಸೆತಕ್ಕೆ 89 ರನ್ ಸಿಡಿಸಿ ಔಟಾದರು. ವಿಂಡೀಸ್ ಪಂದ್ಯದಲ್ಲಿ ಅಬ್ಬರಿಸಿದ್ದ ಅವರು ಈ ಬಾರಿಯೂ ಭಾರತವನ್ನು ಕಾಪಾಡಿದರು. 2ನೇ ವಿಕೆಟ್‌ಗೆ ಇಶಾನ್ ಕಿಶನ್ ಜೊತೆ 97 ರನ್ ಸೇರಿಸಿದರು
Sanju Samson got off to a flier -
ಮುಂಬಯಿ, ಮಾ.6: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದಿದ್ದ ಟಿ20 ವಿಶ್ವಕಪ್‌ನ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಸಂಜು ಸ್ಯಾಮ್ಸನ್ 42 ಎಸೆತಗಳಲ್ಲಿ 89 ರನ್ ಗಳಿಸಿ ಅಮೋಘ ಆಟವಾಡಿದರು. ಇದೇ ವೇಳೆ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ ಅವರ ಸಿಕ್ಸರ್ ದಾಖಲೆಯೊಂದನ್ನು ಮುರಿದರು.
ಪಂದ್ಯದಲ್ಲಿ ಬರೋಬ್ಬರಿ 7 ಸಿಕ್ಸರ್ ಬಾರಿಸಿದ ಸಂಜು ಸ್ಯಾಮ್ಸನ್, ಟಿ20 ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಮಾಜಿ ನಾಯಕ ರೋಹಿತ್ ಶರ್ಮ ಹೆಸರಿನಲ್ಲಿತ್ತು. ಅವರು ಕಳೆದ 2024ರ ಆವೃತ್ತಿಯಲ್ಲಿ 15 ಸಿಕ್ಸರ್ ಬಾರಿಸಿದ್ದರು. ಹಾಲಿ ಆವೃತ್ತಿಯಲ್ಲಿ 15* ಸಿಕ್ಸರ್ ಬಾರಿಸಿರುವ ಶಿವಂ ದುಬೆ ಸದ್ಯ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಅಗ್ರಸ್ಥಾನಕ್ಕಾಗಿ ಸಂಜು ಮತ್ತು ದುಬೆ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಫೈನಲ್ ಪಂದ್ಯದಲ್ಲಿ ಯಾರು ಹೆಚ್ಚು ಸಿಕ್ಸರ್ ಬಾರಿಸುತ್ತಾರೋ ಅವರು ಅಗ್ರಸ್ಥಾನ ಪಡೆಯಲಿದ್ದಾರೆ.
ಟಿ20 ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಭಾರತೀಯರಿಂದ ಅತಿ ಹೆಚ್ಚು ಸಿಕ್ಸರ್‌ಗಳು
ಸಂಜು ಸ್ಯಾಮ್ಸನ್ 16*(2026)
ರೋಹಿತ್ ಶರ್ಮಾ 15 (2024)
ಶಿವಂ ದುಬೆ 15* (2026)
ಇಶಾನ್ ಕಿಶನ್ 14* (2026)
ಹಾರ್ದಿಕ್ ಪಾಂಡ್ಯ 14* (2026)
ನಾಟೌಟ್‌ಗೆ ಸಂಭ್ರಮಿಸಿದ ಪತ್ನಿಯನ್ನು ತಡೆದ ಧೋನಿ; ವಿಡಿಯೊ ವೈರಲ್
ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಸಂಜು, "ಈ ಗೆಲುವಿನ ಸಂಪೂರ್ಣ ಕ್ರೆಡಿಟ್ ಜಸ್ಪ್ರೀತ್ ಬುಮ್ರಾಗೆ ಸಲ್ಲಬೇಕು. ಅವರು ವಿಶ್ವದರ್ಜೆಯ ಬೌಲರ್, ಒಂದು ತಲೆಮಾರಿಗೆ ಒಮ್ಮೆ ಮಾತ್ರ ಸಿಗುವ ಅದ್ಭುತ ಆಟಗಾರ. ಈ ಪಂದ್ಯಶ್ರೇಷ್ಠ ಪ್ರಶಸ್ತಿ ನಿಜವಾಗಿಯೂ ಅವರಿಗೆ ಸಿಗಬೇಕಿತ್ತು. ಡೆತ್ ಓವರ್‌ಗಳಲ್ಲಿ ಅವರು ಅಷ್ಟು ಅದ್ಭುತವಾಗಿ ಬೌಲಿಂಗ್ ಮಾಡದಿದ್ದರೆ, ನಾನು ಇಂದು ಇಲ್ಲಿ (ಪ್ರಶಸ್ತಿ ವೇದಿಕೆಯಲ್ಲಿ) ನಿಂತಿರುತ್ತಿರಲಿಲ್ಲ" ಎಂದು ಸಂಜು ಭಾವುಕರಾಗಿ ನುಡಿದರು.
15 ರನ್ ಗಳಿಸಿದ್ದಾಗ ಹ್ಯಾರಿ ಬ್ರೂಕ್ ಕೈಚೆಲ್ಲಿದ ಕ್ಯಾಚ್‌ನ ಲಾಭ ಪಡೆದ ಸಂಜು, 42 ಎಸೆತಕ್ಕೆ 89 ರನ್ ಸಿಡಿಸಿ ಔಟಾದರು. ವಿಂಡೀಸ್ ಪಂದ್ಯದಲ್ಲಿ ಅಬ್ಬರಿಸಿದ್ದ ಅವರು ಈ ಬಾರಿಯೂ ಭಾರತವನ್ನು ಕಾಪಾಡಿದರು. 2ನೇ ವಿಕೆಟ್‌ಗೆ ಇಶಾನ್ ಕಿಶನ್ ಜೊತೆ 97 ರನ್ ಸೇರಿಸಿದರು. ಪವರ್-ಪ್ಲೇನಲ್ಲಿ 67 ರನ್ ಸೇರಿಸಿದ ಭಾರತ, ಕೊನೆವರೆಗೂ ರನ್ ವೇಗ ಕಾಪಾಡಿಕೊಂಡಿತು.