ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

'ಡ್ರಾ'ದತ್ತ ಸಾಗಿದ ಕರ್ನಾಟಕ-ಸೌರಾಷ್ಟ್ರ ಪಂದ್ಯ

Karnataka vs Saurashtra: ಕರ್ನಾಟಕ ಪರ ಉತ್ತಮ ಬೌಲಿಂಗ್‌ ದಾಳಿ ನಡೆಸಿದ ವಿದ್ವತ್ ಕಾವೇರಪ್ಪ 57 ರನ್‌ ವೆಚ್ಚದಲ್ಲಿ 4 ವಿಕೆಟ್‌ ಕಿತ್ತು ಮಿಂಚಿದರು. ಉಳಿದಂತೆ ವಿಜಯ್‌ಕುಮಾರ್ ವೈಶಾಕ್, ಅಭಿಲಾಷ್‌ ಶೆಟ್ಟಿ ತಲಾ ಎರಡು ವಿಕೆಟ್‌ ಪಡೆದರು. ನಾಯಕ ಶ್ರೇಯಸ್‌ ಗೋಪಾಲ್‌ ಒಂದು ವಿಕೆಟ್‌ ಕಲೆಹಾಕಿದರು.

'ಡ್ರಾ'ದತ್ತ ಸಾಗಿದ ಕರ್ನಾಟಕ-ಸೌರಾಷ್ಟ್ರ ಪಂದ್ಯ

Karnataka vs Saurashtra -

Abhilash BC
Abhilash BC Oct 20, 2026 7:06 PM

ಬೆಂಗಳೂರು, ಅ.20: ಆಲೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ಸೌರಾಷ್ಟ್ರ ನಡುವಣ ರಣಜಿ ಪಂದ್ಯ ಡ್ರಾ ಹಾದಿ ಹಿಡಿದಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಕರ್ನಾಟಕವು 2 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿದ್ದು, 92 ರನ್‌ಗಳ ಮುನ್ನಡೆಯಲ್ಲಿದೆ. ಆದರೆ ಬುಧವಾರ ಕೊನೆಯ ದಿನವಾದ ಕಾರಣ ಪವಾಡವೊಂದು ಸಂಭವಿಸಿದರಷ್ಟೇ ಗೆಲುವು ಸಾಧ್ಯ.

4 ವಿಕೆಟ್‌ಗೆ 164 ರನ್‌ ಗಳಿಸಿದ್ದಲ್ಲಿಂದ ಮಂಗಳವಾರ ಆಟ ಮುಂದುವರಿಸಿದ ಸೌರಾಷ್ಟ ತಂಡ 349 ರನ್‌ ಗಳಿಸಿ ಆಲೌಟ್‌ ಆಯಿತು. 7 ರನ್‌ ಮುನ್ನಡೆ ಗಳಿಸಿತು. 25 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಅರ್ಪಿತ್‌ ವಸಾವಡಾ ಅರ್ಧಶತಕ ಬಾರಿಸಿದರು. 65 ರನ್‌ ಗಳಿಸಿದ ಅವರು ಕಾವೇರಪ್ಪ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆಗುವ ಮೂಲಕ ಇನಿಂಗ್ಸ್‌ ಮುಕ್ತಾಯಗೊಳಿಸಿದರು.

ಆ ಬಳಿಕ ಕೆಳ ಕ್ರಮಾಂಕದಲ್ಲಿ ಸಮ್ಮರ್ ಗಜ್ಜರ್ ರಕ್ಷಣಾತ್ಮಕ ಬ್ಯಾಟಿಂಗ್‌ ನಡೆಸಿ ತಂಡಕ್ಕೆ ನೆರವಾದರು. ಅವರು ಕೂಡ ಅರ್ಧಶತಕ ಸಿಡಿಸಿದರು. 121 ಎಸೆತ ಎದರಿಸಿದ ಅವರು 79 ರನ್‌ ಗಳಿಸಿದರು. ಪಾರ್ಥ ಭುಟ್(28) ಮತ್ತು ಪ್ರೇರಕ್ ಮಂಕಡ್(20) ರನ್‌ ಕೊಡುಗೆ ನೀಡಿದರು.

ಏಷ್ಯನ್ ಪ್ಯಾರಾ ಗೇಮ್ಸ್; ಒಂದೇ ದಿನ ದಾಖಲೆಯ 24 ಪದಕಗಳೊಂದಿಗೆ ಭಾರತ ಮಿಂಚು

ಕರ್ನಾಟಕ ಪರ ಉತ್ತಮ ಬೌಲಿಂಗ್‌ ದಾಳಿ ನಡೆಸಿದ ವಿದ್ವತ್ ಕಾವೇರಪ್ಪ 57 ರನ್‌ ವೆಚ್ಚದಲ್ಲಿ 4 ವಿಕೆಟ್‌ ಕಿತ್ತು ಮಿಂಚಿದರು. ಉಳಿದಂತೆ ವಿಜಯ್‌ಕುಮಾರ್ ವೈಶಾಕ್, ಅಭಿಲಾಷ್‌ ಶೆಟ್ಟಿ ತಲಾ ಎರಡು ವಿಕೆಟ್‌ ಪಡೆದರು. ನಾಯಕ ಶ್ರೇಯಸ್‌ ಗೋಪಾಲ್‌ ಒಂದು ವಿಕೆಟ್‌ ಕಲೆಹಾಕಿದರು.

ಎರಡನೇ ಇನಿಂಗ್ಸ್‌ ಆರಂಭಿಸಿ ಕರ್ನಾಟಕ ಪರ ಅನೀಶ್ ಕೆ.ವಿ.(37*) ಮತ್ತು ಕರುಣ್‌ ನಾಯರ್‌(19*) ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ರೋಹನ್ ಪಾಟೀಲ್ 38 ಮತ್ತು ಅನೀಶ್ವರ್ ಗೌತಮ್ 3 ರನ್‌ ಗಳಿಸಿ ವಿಕೆಟ್‌ ಕಳೆದುಕೊಂಡರು.

ಫಲಿತಾಂಶವೊಂದನ್ನು ಪಡೆಯಲು ಕರ್ನಾಟಕಕ್ಕೆ ಇರುವ ಅತ್ಯುತ್ತಮ ಅವಕಾಶವೆಂದರೆ, ನಾಲ್ಕನೇ ದಿನದ ಮೊದಲ ಅಧಿವೇಶನದಲ್ಲಿ ವೇಗವಾಗಿ ರನ್ ಕಲೆಹಾಕುವುದು ಮತ್ತು ನಂತರದ ಎರಡು ಅಧಿವೇಶನಗಳಲ್ಲಿ ಸೌರಾಷ್ಟ್ರ ತಂಡವನ್ನು ಆಲೌಟ್ ಮಾಡಲು ಪ್ರಯತ್ನಿಸುವುದು. ಕಳೆದ ವಾರ ಮುಲಾಪಾಡುವಿನಲ್ಲಿ ಆಂಧ್ರ ವಿರುದ್ಧವೂ ತಂಡವು ಇದೇ ರೀತಿಯ ಪ್ರಯತ್ನ ನಡೆಸಿತ್ತು, ಆದರೆ ಯಶಸ್ವಿಯಾಗಲಿಲ್ಲ. ನಾಳೆ ಮತ್ತೊಂದು ಪ್ರಯತ್ನ ನಡೆಸಲಿದೆ.