ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೀಪ್ತಿ ಶರ್ಮಾ ದಾಖಲೆ ಹಿಂದಿಕ್ಕಿದ ಶ್ರೀ ಚರಣಿ

ಪಂದ್ಯದ ಬಗ್ಗೆ ಹೇಳುವುದಾದರೆ, ಟಾಸ್‌ ಗೆದ್ದ ಹಾಂಗ್‌ಕಾಂಗ್‌ ತಂಡವು ಫೀಲ್ಡಿಂಗ್‌ ಆಯ್ದುಕೊಂಡಿತು. ಮಂದಾನ ಅವರ ಶತಕದ ಆಟದ ಎದುರು ಹಾಂಗ್‌ಕಾಂಗ್ ಬೌಲರ್‌ಗಳು ಬೆಚ್ಚಿದರು. ಹರ್ಮನ್‌ಪ್ರೀತ್‌ ಕೌರ್‌ ಪಡೆ 194 ರನ್‌ಗಳ ಕಠಿಣ ಸವಾಲು ಒಡ್ಡಿತು. ಗುರಿ ಬೆನ್ನಟ್ಟಿದ ಹಾಂಗ್‌ಕಾಂಗ್‌ 16.2 ಓವರ್‌ಗಳಲ್ಲಿ ಬರೀ 56 ರನ್‌ಗಳಿಗೆ ಸರ್ವಪತನವಾಯಿತು.

ದೀಪ್ತಿ ಶರ್ಮಾ ದಾಖಲೆ ಹಿಂದಿಕ್ಕಿದ ಶ್ರೀ ಚರಣಿ

Shree Charani -

Abhilash BC
Abhilash BC Sep 4, 2026 1:56 PM

ದುಬೈ, ಸೆ.4: ಮಹಿಳಾ ಏಷ್ಯಾಕಪ್‌ನ ಎರಡನೇ ಪಂದ್ಯದಲ್ಲಿ ಭಾರತ ತಂಡ ಹಾಂಗ್‌ಕಾಂಗ್ ವಿರುದ್ಧ 137 ರನ್‌ ಅಂತರದ ಗೆಲುವು ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು. ಇದೇ ಪಂದ್ಯದಲ್ಲಿ ಎರಡು ವಿಕೆಟ್‌ ಕಿತ್ತ ಸ್ಪಿನ್ನರ್‌ ಶ್ರೀ ಚರಣಿ ದಾಖಲೆಯೊಂದನ್ನು ಬರೆದರು.

ಪಂದ್ಯದಲ್ಲಿ 3.2 ಓವರ್ ಬೌಲಿಂಗ್ ಮಾಡಿದ ಚರಣಿ 16 ರನ್ ಬಿಟ್ಟುಕೊಟ್ಟು ಎರಡು ವಿಕೆಟ್‌ಗಳನ್ನು ಪಡೆದರು. ಈ ಮೂಲಕ, ಕ್ಯಾಲೆಂಡರ್ ವರ್ಷದಲ್ಲಿ ಭಾರತೀಯ ಮಹಿಳಾ ತಂಡದ ಪರ ಅತಿ ಹೆಚ್ಚು T20I ವಿಕೆಟ್‌ಗಳನ್ನು ಪಡೆದ ಆಟಗಾರ್ತಿಯರ ಪಟ್ಟಿಯಲ್ಲಿ ದೀಪ್ತಿ ಶರ್ಮಾ ಅವರನ್ನು ಹಿಂದಿಕ್ಕಿದರು.

ಇದು ಹಾಲಿ ವರ್ಷದಲ್ಲಿ ಚರಣಿಯವರ 31ನೇ ವಿಕೆಟ್ ಆಗಿತ್ತು. ದಾಖಲೆ ಪೂನಂ ಯಾದವ್ ಅವರ ಹೆಸರಿನಲ್ಲಿದೆ. ಪೂನಂ 2018ರಲ್ಲಿ 35 ವಿಕೆಟ್‌ ಕಿತ್ತಿದ್ದರು. ದೀಪ್ತಿ ಶರ್ಮ 2024ರಲ್ಲಿ 30 ವಿಕೆಟ್‌ ಪಡೆದಿದ್ದರು.

ಕ್ಯಾಲೆಂಡರ್ ವರ್ಷದಲ್ಲಿ ಭಾರತ ಪರ ಅತಿ ಹೆಚ್ಚು ಟಿ20 ವಿಕೆಟ್‌ಗಳು

ಪೂನಂ ಯಾದವ್-35

ಶ್ರೀ ಚರಣಿ-31*

ದೀಪ್ತಿ ಶರ್ಮಾ-30

ದೀಪ್ತಿ ಶರ್ಮಾ-29

ರಾಧಾ ಯಾದವ್-29

ಪಂದ್ಯದ ಬಗ್ಗೆ ಹೇಳುವುದಾದರೆ, ಟಾಸ್‌ ಗೆದ್ದ ಹಾಂಗ್‌ಕಾಂಗ್‌ ತಂಡವು ಫೀಲ್ಡಿಂಗ್‌ ಆಯ್ದುಕೊಂಡಿತು. ಮಂದಾನ ಅವರ ಶತಕದ ಆಟದ ಎದುರು ಹಾಂಗ್‌ಕಾಂಗ್ ಬೌಲರ್‌ಗಳು ಬೆಚ್ಚಿದರು. ಹರ್ಮನ್‌ಪ್ರೀತ್‌ ಕೌರ್‌ ಪಡೆ 194 ರನ್‌ಗಳ ಕಠಿಣ ಸವಾಲು ಒಡ್ಡಿತು. ಗುರಿ ಬೆನ್ನಟ್ಟಿದ ಹಾಂಗ್‌ಕಾಂಗ್‌ 16.2 ಓವರ್‌ಗಳಲ್ಲಿ ಬರೀ 56 ರನ್‌ಗಳಿಗೆ ಸರ್ವಪತನವಾಯಿತು.

ಚೀನಾ ಮಾಸ್ಟರ್ಸ್‌: ಕ್ವಾರ್ಟರ್‌ನಲ್ಲಿ ಸೋತ ಶ್ರೀಕಾಂತ್‌

ಭಾರತ ಪರ ಮಂಧಾನ ಮತ್ತು ಶಫಾಲಿ ಬಿಟ್ಟರೆ ಪ್ರತೀಕಾ ರಾವಲ್‌ (10), ವಿಕೆಟ್‌ ಕೀಪರ್ ರಿಚಾ ಘೋಷ್‌ (11) ಮತ್ತು ಕೌರ್‌ (10) ನಿರಾಸೆ ಮೂಡಿಸಿದರು. ಬೌಲಿಂಗ್‌ನಲ್ಲಿ ಪ್ರೇಮಾ ರಾವತ್‌ 12ಕ್ಕೆ 2, ದೀಪ್ತಿ ಶರ್ಮಾ 9ಕ್ಕೆ 3 ವಿಕೆಟ್‌ ಕಿತ್ತು ಅತ್ಯುತ್ತಮ ಪ್ರದರ್ಶನ ತೋರಿದರು.

ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 193 (ಸ್ಮೃತಿ ಮಂದಾನ 124, ಶಫಾಲಿ ವರ್ಮಾ 28; ಮರೀನಾ ಲ್ಯಾಂಪ್ಲೌ 46ಕ್ಕೆ 2, ಜಾಯ್ಲೀನ್ ಕೌರ್ 12ಕ್ಕೆ 1). ಹಾಂಗ್‌ಕಾಂಗ್‌: 16.2 ಓವರ್‌ಗಳಲ್ಲಿ 56 (ನತಾಷಾ ಮೈಲ್ಸ್‌ 15; ದೀಪ್ತಿ ಶರ್ಮಾ 9ಕ್ಕೆ3, ನಂದನಿ ಶರ್ಮಾ 6ಕ್ಕೆ2, ಶ್ರೀಚರಣಿ 16ಕ್ಕೆ2, ಪ್ರೇಮಾ ರಾವತ್‌ 12ಕ್ಕೆ2).