ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

DC vs PBKS: ಕಳಪೆ ಬೌಲಿಂಗ್‌, ಫೀಲ್ಡಿಂಗ್‌ ಸೋಲಿಗೆ ಕಾರಣ; ನಾಯಕ ಶ್ರೇಯಸ್‌ ಅಯ್ಯರ್‌

IPL 2026: ಪಂದ್ಯದ ಬಳಿಕ ಮಾತನಾಡಿದ ಅಯ್ಯರ್‌, ಸರಳವಾಗಿ ಹೇಳಬೇಕೆಂದರೆ ಕಳಪೆ ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಸೋಲಿಗೆ ಕಾರಣ. 210 ಉತ್ತಮ ಸ್ಕೋರ್ ಎಂದು ಭಾವಿಸಿದ್ದೆ. ಆದರೆ ಬೌಲರ್‌ಗಳು ದುಬಾರಿಯಾದರು ಎಂದು ಶ್ರೇಯಸ್ ಹೇಳಿದರು.

ಕಳಪೆ ಬೌಲಿಂಗ್‌, ಫೀಲ್ಡಿಂಗ್‌ ಸೋಲಿಗೆ ಕಾರಣ; ನಾಯಕ ಶ್ರೇಯಸ್‌ ಅಯ್ಯರ್‌

Shreyas Iyer -

Abhilash BC
Abhilash BC May 12, 2026 10:32 AM

ಧರ್ಮಶಾಲಾ, ಮೇ 12: ಕಳಪೆ ಫೀಲ್ಡಿಂಗ್‌ ಮತ್ತು ಬೌಲಿಂಗ್‌ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಸೋಲಿಗೆ ಕಾರಣ ಎಂದು ಪಂಜಾಬ್‌ ಕಿಂಗ್ಸ್‌(DC vs PBKS) ತಂಡದ ನಾಯ ಶ್ರೇಯಸ್‌ ಅಯ್ಯರ್‌(Shreyas Iyer) ದೂರಿದ್ದಾರೆ. ಸೋಮವಾರ ರಾತ್ರಿ ನಡೆದಿದ್ದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಪಂದ್ಯದಲ್ಲಿ 200 ಪ್ಲಸ್‌ ಮೊತತ ಪೇರಿಸಿಯೂ ಪಂಜಾಬ್‌ 3 ವಿಕೆಟ್‌ ಅಂತರದ ಸೋಲು ಕಂಡಿತ್ತು.

ಪಂದ್ಯದ ಬಳಿಕ ಮಾತನಾಡಿದ ಅಯ್ಯರ್‌, ಸರಳವಾಗಿ ಹೇಳಬೇಕೆಂದರೆ ಕಳಪೆ ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಸೋಲಿಗೆ ಕಾರಣ. 210 ಉತ್ತಮ ಸ್ಕೋರ್ ಎಂದು ಭಾವಿಸಿದ್ದೆ. ಆದರೆ ಬೌಲರ್‌ಗಳು ದುಬಾರಿಯಾದರು ಎಂದು ಶ್ರೇಯಸ್ ಹೇಳಿದರು.

"ಚಹಲ್ ಬೌಲಿಂಗ್ ಬಗ್ಗೆ ನನ್ನ ಮನಸ್ಸಿನಲ್ಲಿ ಒಂದು ಯೋಚನೆ ಇತ್ತು, ಆದರೆ ಚೆಂಡು ಸೀಮಿಂಗ್ ಆಗುತ್ತಿದ್ದ ರೀತಿ ಮತ್ತು ಅದು ಸೀಮರ್‌ಗಳಿಗೆ ಸಹಾಯ ಮಾಡುತ್ತಿದ್ದ ರೀತಿ, ನಾವು ನಮ್ಮ ಲೈನ್ ಮತ್ತು ಲೆಂತ್ ಅನ್ನು ನಿಖರವಾಗಿ ಕಾರ್ಯಗತಗೊಳಿಸಿದ್ದರೆ, ನಾವು ವಿಕೆಟ್‌ಗಳನ್ನು ಹೊರತೆಗೆಯಲು ಸಾಧ್ಯವಾಗುತ್ತಿತ್ತು ಎಂದು ನಾನು ಭಾವಿಸುತ್ತೇನೆ, ಆದರೆ ದುರದೃಷ್ಟವಶಾತ್, ನಾವು ಹಾಗೆ ಮಾಡಲಿಲ್ಲ," ಎಂದು ಶ್ರೇಯಸ್ ಹೇಳಿದರು.

"ಹಾರ್ಡ್ ಲೆಂತ್ ಅತ್ಯುತ್ತಮ ಚೆಂಡು ಎಂದು ನಾನು ಯಾವಾಗಲೂ ಹೇಳುತ್ತೇನೆ, ವಿಶೇಷವಾಗಿ ಹೊಸ ಬ್ಯಾಟ್ಸ್‌ಮನ್ ಬರುತ್ತಿರುವಾಗ ಅದನ್ನು ಹೊಡೆಯುವುದು ಸುಲಭವಲ್ಲ. ಏಕೆಂದರೆ ನೀವು ಆ ಚೆಂಡುಗಳನ್ನು ಪುನರಾವರ್ತಿಸುತ್ತಿದ್ದರೆ, ಕನಿಷ್ಠ ಒಂದು ಚೆಂಡಾದರೂ ತಪ್ಪಾಗಿ ಹೊಡೆಯುವ ಅವಕಾಶವನ್ನು ನೀಡುತ್ತದೆ ಮತ್ತು ನೀವು ವಿಕೆಟ್ ಪಡೆಯಬಹುದು. ಆದರೆ ನಮ್ಮ ಬೌಲರ್‌ಗಳಿಗೆ ಯೋಜನೆ ಕೊರತೆಯಿದೆ" ಎಂದು ಅವರು ಹೇಳಿದರು.

DC vs PBKS: ಬೃಹತ್‌ ಮೊತ್ತದ ಚೇಸಿಂಗ್‌ ನಡೆಸಿ ದಾಖಲೆ ಬರೆದ ಡೆಲ್ಲಿ ಕ್ಯಾಪಿಟಲ್ಸ್‌; ಈ ಸಾಧನೆಗೈದ ಮೊದಲ ತಂಡ

ಪಂದ್ಯದಲ್ಲಿ ಟಾಸ್‌ ಗೆದ್ದ ಡೆಲ್ಲಿ ತಂಡ ಫೀಲ್ಡಿಂಗ್‌ ಆಯ್ದುಕೊಂಡಿತು ಬ್ಯಾಟಿಂಗ್‌ ಆಹ್ವಾನ ಪಡೆದ ಪಂಜಾಬ್‌, ಆರಂಭಿಕ ಆಟಗಾರ ಪ್ರಿಯಾಂಶ್‌ ಆರ್ಯ (56) ಮತ್ತು ಶ್ರೇಯಸ್‌ (59) ಅವರ ಅರ್ಧಶತಕಗಳ ನೆರವಿನಿಂದ 5 ವಿಕೆಟ್‌ಗೆ 210 ರನ್‌ ಗಳಿಸಿತು.

ಗುರಿ ಬೆನ್ನಟ್ಟಿದ ಡೆಲ್ಲಿ ಆರಂಭದಲ್ಲೇ ಆಘಾತ ಎದುರಿಸಿತು. ತಂಡ 14 ರನ್‌ ಗಳಿಸುವಷ್ಟರಲ್ಲಿ ಆರಂಭಿಕ ಆಟಗಾರರಾದ ಕೆ.ಎಲ್‌. ರಾಹುಲ್‌ (9) ಮತ್ತು ಅಭಿಷೇಕ್‌ ಪೊರೆಲ್‌ (5) ಡಗ್ಔಟ್‌ ಸೇರಿದರು. ನಂತರ ಬಂದ ಸಾಹಿಲ್ ಪರಾಖ್ (13) ಮತ್ತು ಟ್ರಿಸ್ಟನ್‌ ಸ್ಟಬ್ಸ್‌ (12) ಅವರೂ ನಿರಾಸೆ ಅನುಭವಿಸಿದರು. ಇನ್ನೇನು ತಂಡ ಸೋಲುತ್ತದೆ ಎನ್ನುವಾಗ ಅಕ್ಷರ್‌ (56) ಮತ್ತು ಮಿಲ್ಲರ್‌ (51) ಬಿರುಸಿನ ಬ್ಯಾಟಿಂಗ್‌ ನಡೆಸಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ತಂಡ ಒಂದು ಓವರ್‌ ಇರುವಂತೆ 7 ವಿಕೆಟ್‌ಗೆ 216 ರನ್‌ ಗಳಿಸಿ ಸಂಭ್ರಮಿಸಿತು.