ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಟಿ20 ಶ್ರೇಯಾಂಕದಲ್ಲಿ ಭಾರೀ ಜಿಗಿತ ಕಂಡ ಶ್ರೇಯಸ್‌ ಅಯ್ಯರ್‌, ಬ್ರೂಕ್‌

ICC T20I Rankings: ಐಸಿಸಿ ಟಿ20ಐ ಬೌಲರ್ ಶ್ರೇಯಾಂಕದಲ್ಲಿ, ಸೂಪರ್ ಸ್ಟಾರ್ ಜಸ್ಪ್ರೀತ್ ಬುಮ್ರಾ ಐದು ಸ್ಥಾನ ಕುಸಿದು ಈಗ ಅಗ್ರ 10 ರಿಂದ ಹೊರಬಿದ್ದಿದ್ದಾರೆ. 2026 ರ ಐಸಿಸಿ ಪುರುಷರ ಟಿ 20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಪರ ನಾಲ್ಕು ವಿಕೆಟ್ ಪಡೆದ 32 ವರ್ಷದ ಬುಮ್ರಾ, 654 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದು, ಈಗ 13 ನೇ ಸ್ಥಾನದಲ್ಲಿದ್ದಾರೆ.

ಟಿ20 ಶ್ರೇಯಾಂಕದಲ್ಲಿ ಭಾರೀ ಜಿಗಿತ ಕಂಡ ಶ್ರೇಯಸ್‌ ಅಯ್ಯರ್‌, ಬ್ರೂಕ್‌

Shreyas Iyer- Harry Brook -

Abhilash BC
Abhilash BC Jul 16, 2026 10:10 AM

ದುಬೈ, ಜು.16: ಭಾರತ ಟಿ20 ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಅವರು ನೂತನ ಐಸಿಸಿ ಟಿ20ಐ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಭಾರಿ ಏರಿಕೆ ಕಂಡಿದ್ದಾರೆ.‌ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ 218 ರನ್ ಗಳಿಸಿದ್ದ ಅಯ್ಯರ್, ಬ್ಯಾಟಿಂಗ್ ಶ್ರೇಯಾಂಕದಲ್ಲಿ 62 ಸ್ಥಾನಗಳ ಜಿಗಿತವನ್ನು ಕಂಡಿದ್ದು, ಈಗ 31 ನೇ ಸ್ಥಾನದಲ್ಲಿದ್ದಾರೆ. ಅವರ ರೇಟಿಂಗ್‌ ಅಂಕ 580 ಇದೆ.

ಇಂಗ್ಲೆಂಡ್‌ ತಂಡದ ನಾಯಕ ಹ್ಯಾರಿ ಬ್ರೂಕ್ 12 ಸ್ಥಾನಗಳನ್ನು ಜಿಗಿದು ನಂ. 7 ಟಿ20ಐ ಬ್ಯಾಟ್ಸ್‌ಮನ್ ಆದರು. ಯಾರ್ಕ್‌ಷೈರ್‌ನ ಬಲಗೈ ಬ್ಯಾಟ್ಸ್‌ಮನ್ 734 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದಾರೆ, ಇದು 20 ಓವರ್‌ಗಳ ಸ್ವರೂಪದಲ್ಲಿ ಅವರ ಅತ್ಯುತ್ತಮ ಅಂಕಗಳಾಗಿವೆ.

ಬ್ರೂಕ್ ಹೊರತುಪಡಿಸಿ, ಭಾರತದ ವಿರುದ್ಧದ ಐದನೇ ಟಿ20ಐನಲ್ಲಿ ಉತ್ತಮ ಬ್ಯಾಟಿಂಗ್‌ ನಡೆಸಿದ ಜೋಸ್ ಬಟ್ಲರ್‌ ಶ್ರೇಯಾಂಕದಲ್ಲಿ ಒಂದು ಸ್ಥಾನ ಪ್ರಗತಿ ಕಂಡು ಅವರು ಈಗ 748 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ.

ದಿಗ್ಗಜ ರಾಹುಲ್‌ ದ್ರಾವಿಡ್‌ ದಾಖಲೆ ಮೇಲೆ ಕಣ್ಣಿಟ್ಟ ಕೊಹ್ಲಿ; 4 ರನ್‌ ಅಗತ್ಯ

ಇಶಾನ್‌ ಕಿಶನ್‌ ಅಗ್ರಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಅಭಿಷೇಕ್‌ ಶರ್ಮ ಎರಡನೇ ಸ್ಥಾನದಲ್ಲಿದ್ದಾರೆ. ಟಿ20ಐ ಉಪನಾಯಕ ತಿಲಕ್ ವರ್ಮಾ ಎರಡು ಸ್ಥಾನ ಕುಸಿದಿದ್ದಾರೆ. ಆರನೇ ಸ್ಥಾನದಿಂದ ಎಂಟನೇ ಸ್ಥಾನಕ್ಕೆ ಜಾರಿದ್ದಾರೆ. ಏತನ್ಮಧ್ಯೆ, ಭಾರತದ ಮಾಜಿ ಟಿ20ಐ ನಾಯಕ ಸೂರ್ಯಕುಮಾರ್ ಯಾದವ್ ಮೂರು ಸ್ಥಾನ ಕುಸಿದು ಈಗ 16 ನೇ ಸ್ಥಾನದಲ್ಲಿದ್ದಾರೆ.

ಐಸಿಸಿ ಟಿ20ಐ ಬೌಲರ್ ಶ್ರೇಯಾಂಕದಲ್ಲಿ, ಸೂಪರ್ ಸ್ಟಾರ್ ಜಸ್ಪ್ರೀತ್ ಬುಮ್ರಾ ಐದು ಸ್ಥಾನ ಕುಸಿದು ಈಗ ಅಗ್ರ 10 ರಿಂದ ಹೊರಬಿದ್ದಿದ್ದಾರೆ. 2026 ರ ಐಸಿಸಿ ಪುರುಷರ ಟಿ 20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಪರ ನಾಲ್ಕು ವಿಕೆಟ್ ಪಡೆದ 32 ವರ್ಷದ ಬುಮ್ರಾ, 654 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದು, ಈಗ 13 ನೇ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್ ಪರ, ಜೋಫ್ರಾ ಆರ್ಚರ್ ಭಾರತದ ವಿರುದ್ಧದ ನಾಲ್ಕು ಟಿ 20 ಪಂದ್ಯಗಳಲ್ಲಿ ಏಳು ವಿಕೆಟ್‌ಗಳನ್ನು ಪಡೆದು ಎಂಟು ಸ್ಥಾನಗಳ ಜಿಗಿತವನ್ನು ಕಂಡಿದ್ದಾರೆ ಮತ್ತು ಈಗ ಐಸಿಸಿ ಟಿ 20 ಐ ಬೌಲರ್ ಶ್ರೇಯಾಂಕದಲ್ಲಿ 18 ನೇ ಸ್ಥಾನದಲ್ಲಿದ್ದಾರೆ. ಅಫ್ಘಾನಿಸ್ತಾನದ ಸ್ಪಿನ್ನರ್‌ ರಶೀದ್‌ ಖಾನ್‌ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ.