SRH vs KKR: ಐಪಿಎಲ್‌ನಲ್ಲಿ 200 ವಿಕೆಟ್ ಪೂರ್ತಿಗೊಳಿಸಿದ ನರೈನ್; ಈ ಸಾಧನೆಗೈದ ಮೊದಲ ವಿದೇಶಿಗ
IPL 2026: ಐಪಿಎಲ್‌ನಲ್ಲಿ 200 ವಿಕೆಟ್‌ಗಳನ್ನು ಪಡೆದ ಮೊದಲ ವಿದೇಶಿ ಆಟಗಾರ ಎಂಬ ದಾಖಲೆಗೂ ಪಾತ್ರರಾಗಿರುವ ನರೈನ್, ಒಟ್ಟಾರೆಯಾಗಿ ಯುಜ್ವೇಂದ್ರ ಚಾಹಲ್ ಮತ್ತು ಭುವನೇಶ್ವರ ಕುಮಾರ್ ನಂತರ ಈ ಸಾಧನೆಗೈದ ಮೂರನೇ ಆಟಗಾರ ಎನಿಸಿದರು. ನರೈನ್ ಈಗ 201 ವಿಕೆಟ್‌ಗಳನ್ನು ಹೊಂದಿದ್ದಾರೆ.
Sunil Narine -
ಹೈದರಾಬಾದ್, ಮೇ 3: ಕೋಲ್ಕತ್ತಾ ನೈಟ್ ರೈಡರ್ಸ್(SRH vs KKR) ತಂಡದ ಸ್ಟಾರ್ ಆಟಗಾರ ಸುನಿಲ್ ನರೈನ್(Sunil Narine) ಇಂಡಿಯನ್ ಪ್ರೀಮಿಯರ್ ಲೀಗ್(IPL 2026)ನಲ್ಲಿ 200 ವಿಕೆಟ್‌ಗಳನ್ನು ಪೂರ್ಣಗೊಳಿಸುವ ಮೂಲಕ ಇತಿಹಾಸ ನಿರ್ಮಿಸಿದರು. ವೆಸ್ಟ್ ಇಂಡೀಸ್‌ನ ಮಾಜಿ ಆಲ್‌ರೌಂಡರ್, ಭಾರತೀಯ ಶ್ರೀಮಂತ ಲೀಗ್‌ನ ಇತಿಹಾಸದಲ್ಲಿ ಒಂದೇ ಫ್ರಾಂಚೈಸಿಗೆ 200 ವಿಕೆಟ್‌ಗಳನ್ನು ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೇ 3 ರ ಭಾನುವಾರದಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ನರೈನ್ ಈ ಮೈಲಿಗಲ್ಲು ಸಾಧಿಸಿದರು.
ಐಪಿಎಲ್‌ನಲ್ಲಿ ಕೆಕೆಆರ್ ಪರ ಮಾತ್ರ ಆಡಿರುವ ನರೈನ್, ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಎಸ್‌ಆರ್‌ಹೆಚ್ ಪಂದ್ಯದ ಸಮಯದಲ್ಲಿ ಮತ್ತೊಮ್ಮೆ ಅತ್ಯುತ್ತಮ ಪ್ರದರ್ಶನ ನೀಡಿ ಎರಡು ವಿಕೆಟ್ ಕಿತ್ತರು. 200 ವಿಕೆಟ್ ಪೂರ್ತಿಗೊಳಿಸಲು ಅವರಿಗೆ ಕೇವಲ ಒಂದು ವಿಕೆಟ್ ಅಗತ್ಯವಿತ್ತು.
ಐಪಿಎಲ್‌ನಲ್ಲಿ ಒಂದೇ ತಂಡಕ್ಕೆ ಅತಿ ಹೆಚ್ಚು ವಿಕೆಟ್‌ಗಳು
200: ಕೆಕೆಆರ್ ಪರ ನರೈನ್
186: ಮುಂಬೈ ಪರ ಬುಮ್ರಾ
170: ಮುಂಬೈ ಪರ ಮಾಲಿಂಗ
157: ಸನ್‌ರೈಸರ್ಸ್ ಪರ ಭುವನೇಶ್ವರ್
143: ಸಿಎಸ್‌ಕೆ ಪರ ಜಡೇಜ
139: ಆರ್‌ಸಿಬಿ ಪರ ಚಾಹಲ್
139: ಚೆನ್ನೈ ಪರ ಬ್ರಾವೋ
200 moments of Narine magic ✅pic.twitter.com/hQLXPsHsLm
— KolkataKnightRiders (@KKRiders) May 3, 2026
ಐಪಿಎಲ್‌ನಲ್ಲಿ 200 ವಿಕೆಟ್‌ಗಳನ್ನು ಪಡೆದ ಮೊದಲ ವಿದೇಶಿ ಆಟಗಾರ ಎಂಬ ದಾಖಲೆಗೂ ಪಾತ್ರರಾಗಿರುವ ನರೈನ್, ಒಟ್ಟಾರೆಯಾಗಿ ಯುಜ್ವೇಂದ್ರ ಚಾಹಲ್ ಮತ್ತು ಭುವನೇಶ್ವರ ಕುಮಾರ್ ನಂತರ ಈ ಸಾಧನೆಗೈದ ಮೂರನೇ ಆಟಗಾರ ಎನಿಸಿದರು. ನರೈನ್ ಈಗ 201 ವಿಕೆಟ್‌ಗಳನ್ನು ಹೊಂದಿದ್ದಾರೆ. ಚಹಾಲ್(228) ಅಗ್ರಸ್ಥಾನದಲ್ಲಿದ್ದರೆ, ಭುವನೇಶ್ವರ್ (215) ಎರಡನೇ ಸ್ಥಾನದಲ್ಲಿದ್ದಾರೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳು
ಯುಜ್ವೇಂದ್ರ ಚಾಹಲ್: 228 ವಿಕೆಟ್‌ಗಳು
ಭುವನೇಶ್ವರ್ ಕುಮಾರ್: 215 ವಿಕೆಟ್‌ಗಳು
ಸುನಿಲ್ ನರೈನ್: 201 ವಿಕೆಟ್‌ಗಳು
ಪಿಯೂಷ್ ಚಾವ್ಲಾ: 192 ವಿಕೆಟ್‌ಗಳು
ಆರ್ ಅಶ್ವಿನ್: 187 ವಿಕೆಟ್‌ಗಳು
SRH vs KKR: ಹೈದರಾಬಾದ್‌ನಲ್ಲಿ ಮುಳುಗಿದ 'ಸನ್'; ಕೆಕೆಆರ್‌ಗೆ ಹ್ಯಾಟ್ರಿಕ್ ಗೆಲುವು
ಪಂದ್ಯ ಗೆದ್ದ ಕೆಕೆಆರ್
ಪಂದ್ಯದಲ್ಲಿ ಕೆಕೆಆರ್ 7 ವಿಕೆಟ್ ಅಂತರದ ಗೆಲುವು ಸಾಧಿಸಿತು. ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಸನ್‌ರೈಸರ್ಸ್ 19 ಓವರ್‌ಗಳಲ್ಲಿ 165 ರನ್‌ಗೆ ಸರ್ವಪತನ ಕಂಡಿತು. ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಕೋಲ್ಕತಾ ನೈಟ್ ರೈಡರ್ಸ್ ತಂಡ 18.2 ಓವರ್‌ಗಳಲ್ಲಿ 3 ವಿಕೆಟ್‌ಗೆ 169 ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಇದು ಕೆಕೆಆರ್‌ಗೆ ಒಲಿದ ಹ್ಯಾಟ್ರಿಕ್ ಗೆಲುವು. ಇದಕ್ಕೂ ಮುನ್ನ ಆಡಿದ 6 ಪಂದ್ಯಗಳಲ್ಲಿ ಸೋಲು ಕಂಡಿತ್ತು.