ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚೀನಾ ಮಾಸ್ಟರ್ಸ್; 16ರ ಸುತ್ತಿಗೆ ತನ್ವಿ ಶರ್ಮಾ, ಸೋತು ಹೊರಬಿದ್ದ ಲಕ್ಷ್ಯ ಸೇನ್

China Masters 2026: ದಿನದ ಆರಂಭದಲ್ಲಿ, ಲಕ್ಷ್ಯ ಸೇನ್ ಕೆನಡಾದ ವಿಕ್ಟರ್ ಲೈ ವಿರುದ್ಧ ನೇರ ಗೇಮ್‌ಗಳಿಂದ ಸೋತು ಹೊರಬಿದ್ದರು. ಆದರೆ ಕಿದಂಬಿ ಶ್ರೀಕಾಂತ್ 21-16, 21-15 ಅಂತರದಲ್ಲಿ ಚಿ ಯು-ಜೆನ್ ಅವರನ್ನು ಸೋಲಿಸಿ 16 ರ ಸುತ್ತು ತಲುಪಿದರು. ಏತನ್ಮಧ್ಯೆ, ದೇವಿಕಾ ಸಿಹಾಗ್ 18-21, 15-21 ಅಂತರದಲ್ಲಿ ಕಲೋಯಾನಾ ನಲ್ಬಂಟೋವಾ ವಿರುದ್ಧ ಸೋತರು.

ಚೀನಾ ಮಾಸ್ಟರ್ಸ್; ಸೋತು ಹೊರಬಿದ್ದ ಲಕ್ಷ್ಯ ಸೇನ್

Tanvi Sharma -

Abhilash BC
Abhilash BC Sep 2, 2026 12:12 PM

ನವದೆಹಲಿ, ಸೆ.2: ಬುಧವಾರ ನಡೆದ ಚೀನಾ ಮಾಸ್ಟರ್ಸ್‌ನಲ್ಲಿ ಲಕ್ಷ್ಯ ಸೇನ್ ಅವರ ಅಭಿಯಾನವು 32 ನೇ ಸುತ್ತಿನಲ್ಲಿ ಕೊನೆಗೊಂಡಿತು. ಭಾರತೀಯ ಶಟ್ಲರ್ ಕೆನಡಾದ ವಿಕ್ಟರ್ ಲೈ ವಿರುದ್ಧ 14-21, 7-21 ಅಂತರದಲ್ಲಿ ಸೋತರು. ಇದೇ ವೇಳೆ ಮಹಿಳಾ ಸಿಂಗಲ್ಸ್‌ನಲ್ಲಿ ತನ್ವಿ ಶರ್ಮಾ ಗೆಲುವು ಸಾಧಿಸಿ 16 ನೇ ಸುತ್ತಿಗೆ ತಲುಪಿದರು.

ಬುಧವಾರ ನಡೆದ ಪಂದ್ಯದಲ್ಲಿ ತನ್ವಿ ಶರ್ಮಾ ಅವರು ಅಮಾಲಿ ಶುಲ್ಜ್ ಅವರನ್ನು 21-16, 21-17 ನೇರ ಗೇಮ್‌ಗಳಿಂದ ಸೋಲಿಸಿದರು. ಈ ವರ್ಷದ ಆರಂಭದಲ್ಲಿ ತನ್ವಿ ಅಮಾಲಿಯನ್ನು ಎದುರಿಸಿದ್ದರು. ಥಾಮಸ್ ಮತ್ತು ಉಬರ್ ಕಪ್ ಫೈನಲ್ಸ್‌ನಲ್ಲಿ 54 ನಿಮಿಷಗಳ ಮುಖಾಮುಖಿಯಲ್ಲಿ ಡೇನ್ ವಿರುದ್ಧ 21-19, 16-21, 16-21 ಅಂತರದಲ್ಲಿ ಸೋತಿದ್ದರು. ಇದೀಗ ಅವರು ಅಂದಿನ ಸೋಲಿಗೆ ಸೇಡು ತೀರಿಸಿಕೊಂಡರು.

ಮೊದಲ ವಿರಾಮದ ವೇಳೆಗೆ ತನ್ವಿ 11-5 ಮುನ್ನಡೆ ಸಾಧಿಸಿ ಪಂದ್ಯದಸ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ವಿರಾಮದ ನಂತರವೂ ಅವರು ನಿಯಂತ್ರಣ ಕಾಯ್ದುಕೊಂಡು ಮೊದಲ ಪಂದ್ಯವನ್ನು 21-16 ಅಂತರದಲ್ಲಿ ಗೆದ್ದರು.

ಎರಡನೇ ಗೇಮ್ ತೀವ್ರ ಪೈಪೋಟಿಯಿಂದ ಕೂಡಿತ್ತು. ಆರಂಭದಲ್ಲಿ ತನ್ವಿ ಮುನ್ನಡೆ ಸಾಧಿಸಿದರು, ಆದರೆ ವಿರಾಮದ ವೇಳೆಗೆ ಅಮಾಲಿ 11-10 ಅಂಕಗಳಿಂದ ಸ್ವಲ್ಪ ಮುನ್ನಡೆ ಸಾಧಿಸುವ ಮೂಲಕ ಪ್ರತಿದಾಳಿ ನಡೆಸಿದರು. ಸ್ಕೋರ್‌ಗಳು 16-16 ಮತ್ತು 17-17 ರಲ್ಲಿ ಸಮಬಲ ಸಾಧಿಸಿದವು. ಅಂತಿಮ ಪಂದ್ಯದಲ್ಲಿ ತನ್ವಿ ತಮ್ಮ ಉತ್ಸಾಹವನ್ನು ಉಳಿಸಿಕೊಂಡರು. ನಾಲ್ಕು ನೇರ ಪಾಯಿಂಟ್‌ಗಳನ್ನು ಗೆದ್ದು 21-17 ರಲ್ಲಿ ಪಂದ್ಯವನ್ನು ವಶಪಡಿಸಿಕೊಂಡರು.

ಇಂಗ್ಲೆಂಡ್ ತಂಡದ ಬ್ಯಾಟಿಂಗ್‌ ಕೋಚ್ ಆಫರ್‌ ತಿರಸ್ಕರಿಸಿದ ಮೈಕೆಲ್ ಹಸ್ಸಿ

ದಿನದ ಆರಂಭದಲ್ಲಿ, ಲಕ್ಷ್ಯ ಸೇನ್ ಕೆನಡಾದ ವಿಕ್ಟರ್ ಲೈ ವಿರುದ್ಧ ನೇರ ಗೇಮ್‌ಗಳಿಂದ ಸೋತು ಹೊರಬಿದ್ದರು. ಆದರೆ ಕಿದಂಬಿ ಶ್ರೀಕಾಂತ್ 21-16, 21-15 ಅಂತರದಲ್ಲಿ ಚಿ ಯು-ಜೆನ್ ಅವರನ್ನು ಸೋಲಿಸಿ 16 ರ ಸುತ್ತು ತಲುಪಿದರು. ಏತನ್ಮಧ್ಯೆ, ದೇವಿಕಾ ಸಿಹಾಗ್ 18-21, 15-21 ಅಂತರದಲ್ಲಿ ಕಲೋಯಾನಾ ನಲ್ಬಂಟೋವಾ ವಿರುದ್ಧ ಸೋತರು.

ಮಿಶ್ರ ಡಬಲ್ಸ್‌ನಲ್ಲಿ ಧ್ರುವ್ ಕಪಿಲಾ ಮತ್ತು ತನಿಶಾ ಕ್ರಾಸ್ಟೊ ಥೈಲ್ಯಾಂಡ್‌ನ ಟೊಂಕಿಡ್ ಮತ್ತು ಟೊನ್ರುಗ್ ಸಾಹೆಂಗ್ ವಿರುದ್ಧ 21-8, 21-9 ಅಂತರದಲ್ಲಿ ಜಯಗಳಿಸಿ ಕೊನೆಯ 16ರ ಘಟ್ಟಕ್ಕೆ ಪ್ರವೇಶಿಸಿದರು. ಆದರೆ ರೋಹನ್ ಕಪೂರ್ ಮತ್ತು ರುತ್ವಿಕಾ ಗಡ್ಡೆ ಜೋಡಿಯು ವು ಗುವಾನ್ ಕ್ಸುನ್ ಮತ್ತು ಲೀ ಚಿಯಾ ಹ್ಸಿನ್ ವಿರುದ್ಧ 16-21, 18-21 ಅಂತರದಲ್ಲಿ ಸೋತರು.