ಆಫ್ಘಾನ್ ಟಿ20 ಸರಣಿಗೆ ಕಠಿಣ ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ
India vs Afghanistan T20I series: ಹರ್ಷಿತ್ ರಾಣಾ ಬದಲು ತಂಡ ಸೇರಿರುವ 27 ವರ್ಷದ ಯಶ್ ಠಾಕೂರ್, ವಿದರ್ಭದ ವೇಗದ ಬೌಲರ್ ಆಗಿದ್ದು, ಜುಲೈನಲ್ಲಿ ಭಾರತದ ಜಿಂಬಾಬ್ವೆ ಪ್ರವಾಸದ ಸಮಯದಲ್ಲಿ ಟಿ20ಐಗೆ ಪದಾರ್ಪಣೆ ಮಾಡಿದರು. ಅವರು ಎರಡು ಪಂದ್ಯಗಳನ್ನು ಆಡಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದಾರೆ.
Team India starts practice -
ನವದೆಹಲಿ, ಸೆ.11: ಭಾರತ ತಂಡ ಭಾನುವಾರ(ಸೆ.13) ಇಲ್ಲಿ ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯಕ್ಕಾಗಿ ಕಠಿಣ ಅಭ್ಯಾಸ ಆರಂಭಿಸಿದೆ. ಗುರುವಾರ ರಾತ್ರಿ ದೆಹಲಿ ತಲುಪಿದ ಭಾರತ ತಂಡದ ಆಟಗಾರರು ಸ್ಥಳೀಯ ಹೊಟೇಲ್‌ನಲ್ಲಿ ವಿಶ್ರಾಂತಿ ಪಡೆದರು. ಶುಕ್ರವಾರ ಬೆಳಗ್ಗೆ ನೇರವಾಗಿ ಅಭ್ಯಾಸ ಆರಂಭಿಸಿದರು. ಅಭ್ಯಾಸದ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಶ್ರೇಯಸ್ ಅಯ್ಯರ್ ಭಾರತ ಟಿ20 ನಾಯಕನಾಗಿ ನೇಮಕಗೊಂಡ ಬಳಿಕ ಅವರು ತವರಿನಲ್ಲಿ ಆಡುತ್ತಿರುವ ಮೊದಲ ಸರಣಿ ಇದಾಗಿದೆ. ಆದರೆ ಸರಣಿಯ ಆತಿಥ್ಯ ವಹಿಸಿರುವುದು ಅಫ್ಘಾನಿಸ್ತಾನವಾಗಿದೆ.
ಶುಕ್ರವಾರ ಬೆಳಗ್ಗೆ ಮುಖ್ಯ ಕೋಚ್ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಆಟಗಾರರು ತಾಲೀಮು ನಡೆಸಿ ಆ ಬಳಿಕ ಬ್ಯಾಟಿಂಗ್ ಮತ್ತು ಬೌಲಿಂಗ್ ಅಭ್ಯಾಸ ನಡೆಸಿದರು. ಕಳೆದ ಕೆಲವು ಸರಣಿಯಿಂದ ಕಳಪೆ ಬ್ಯಾಟಿಂಗ್ ಫಾರ್ಮ್‌ನಿಂದ ಟೀಕೆ ಎದುರಿಸುತ್ತಿರುವ ಅಭಿಷೇಕ್ ಶರ್ಮಾ ನೆಟ್ಸ್‌ನಲ್ಲಿ ದೊಡ್ಡ ಹೊಡೆತಗಳ ಅಭ್ಯಾಸ ನಡೆಸಿದರೆ, ಅರ್ಶ್‌ದೀಪ್ ಸಿಂಗ್, ಸ್ಪಿನ್ನರ್‌ಗಳಾದ ರವಿ ಬಿಷ್ಣೋಯ್, ಅಕ್ಷರ್ ಪಟೇಲ್ ಮತ್ತು ಹರ್ಷಿತ್ ರಾಣಾ ಬದಲಿಗೆ ತಂಡ ಸೇರಿದ ಯಶ್ ಠಾಕೂರ್ ಸತತ ಬೌಲಿಂಗ್ ಅಭ್ಯಾಸ ನಡೆಸಿದರು.
Switching into game mode! 🔛
— BCCI (@BCCI) September 11, 2026
🎥 #TeamIndia gets to work ahead of #AFGvIND 🔥 pic.twitter.com/U0Eke1HyJO
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ (T20I) ಸರಣಿಯು ಸೆಪ್ಟೆಂಬರ್ 13 ರಿಂದ ಸೆಪ್ಟೆಂಬರ್ 17 ರವರೆಗೆ ನಡೆಯಲಿದೆ. ಈ ಮೂರೂ ಪಂದ್ಯಗಳು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನದ ಪ್ರಕಾರ ಸಂಜೆ 7 ಗಂಟೆಗೆ ಆರಂಭವಾಗಲಿವೆ.
ಹರ್ಷಿತ್ ರಾಣಾ ಬದಲು ತಂಡ ಸೇರಿರುವ 27 ವರ್ಷದ ಯಶ್ ಠಾಕೂರ್, ವಿದರ್ಭದ ವೇಗದ ಬೌಲರ್ ಆಗಿದ್ದು, ಜುಲೈನಲ್ಲಿ ಭಾರತದ ಜಿಂಬಾಬ್ವೆ ಪ್ರವಾಸದ ಸಮಯದಲ್ಲಿ ಟಿ20ಐಗೆ ಪದಾರ್ಪಣೆ ಮಾಡಿದರು. ಅವರು ಎರಡು ಪಂದ್ಯಗಳನ್ನು ಆಡಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಠಾಕೂರ್ 50 ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಗಳಲ್ಲಿ 7.04 ಎಕಾನಮಿ ದರದಲ್ಲಿ 81 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
'ಎಲ್ಲವೂ ದೇವರ ಕೈಯಲ್ಲಿದೆ'; ಭಾರತ ತಂಡಕ್ಕೆ ಮರಳುವ ಭರವಸೆ ಬಗ್ಗೆ ಶಮಿ ಹೇಳಿಕೆ
ಸೆಪ್ಟೆಂಬರ್ 11 ರಿಂದ 13 ರವರೆಗೆ ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಶೃಂಗಸಭೆಯ ಸಂದರ್ಭದಲ್ಲಿ ಅತಿ ಗಣ್ಯ ವ್ಯಕ್ತಿಗಳ (VVIP) ಸಂಚಾರ ಮತ್ತು ಭದ್ರತಾ ನಿರ್ಬಂಧಗಳು ಇರಲಿರುವುದರಿಂದ, ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಆಯೋಜಿಸುವ ಕುರಿತು ದೆಹಲಿ ಪೊಲೀಸರು ಆತಂಕ ವ್ಯಕ್ತಪಡಿಸಿದ್ದರು. ಇದರಿಂದಾಗಿ ಪಂದ್ಯದ ವೇಳಾಪಟ್ಟಿ ಭವಿಷ್ಯ ಅನಿಶ್ಚಿತತೆಯ ಸುಳಿಗೆ ಸಿಲುಕಿತ್ತು. ಆದರೆ ಪಂದ್ಯವು ನಿಗದಿಯಂತೆ ನಡೆಯಲಿದೆ ಎಂದು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ ತೀಳಿಸುವ ಮೂಲಕ ಪಂದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಎನ್ನುವುದನ್ನು ಖಚಿತಪಡಿಸಿದೆ.
ಭಾರತ ತಂಡ
ಶ್ರೇಯಸ್ ಅಯ್ಯರ್(ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್(ವಿ.ಕೀ.) , ಇಶಾನ್ ಕಿಶನ್(ವಿ.ಕೀ.), ತಿಲಕ್ ವರ್ಮಾ, ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಯಶ್ ಠಾಕೂರ್.