ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG Test: ಭಾರತ-ಇಂಗ್ಲೆಂಡ್‌ ಟೆಸ್ಟ್‌ ಸರಣಿಯಿಂದ ಇಸಿಬಿಗೆ 800 ಕೋಟಿ ಆದಾಯ!

ಇತ್ತೀಚೆಗೆ ಲಂಡನ್‌ನಲ್ಲಿ ಮುಕ್ತಾಯ ಕಂಡಿದ್ದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಭಾರತ ಇಲ್ಲದ ಕಾರಣ ಇಸಿಬಿಗೆ ಅಷ್ಟಾಗಿ ಆದಾಯ ಹರಿದು ಬಂದಿರಲಿಲ್ಲ. ಕಳೆದ ಎರಡು ಆವೃತ್ತಿಯ ಫೈನಲ್‌ನಲ್ಲಿ ಭಾರತ ಆಡಿದ್ದರಿಂದ ದೊಡ್ದ ಪ್ರಮಾಣದ ಹಣ ಗಳಿಸಿತ್ತು. ಈ ವಿಚಾರವನ್ನು ಇಸಿಬಿಯೇ ತಿಳಿಸಿತ್ತು.

ಭಾರತ-ಇಂಗ್ಲೆಂಡ್‌ ಟೆಸ್ಟ್‌ ಸರಣಿಯಿಂದ ಇಸಿಬಿಗೆ 800 ಕೋಟಿ ಆದಾಯ!

Profile Abhilash BC Jun 18, 2025 8:56 AM

ಲಂಡನ್‌: ಬಹುನಿರೀಕ್ಷಿತ ಭಾರತ ಹಾಗೂ ಇಂಗ್ಲೆಂಡ್‌(IND vs ENG Test) ನಡುವಿನ 5 ಪಂದ್ಯಗಳ ಟೆಸ್ಟ್‌ ಸರಣಿಗೆ ಶುಕ್ರವಾರ ಅಧಿಕೃತ ಚಾಲನೆ ಸಿಗಲಿದೆ. ಈ ಬಾರಿಯ ಸರಣಿಯಿಂದ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ (ECB) ಬೃಹತ್‌ ಆದಾಯದ ನಿರೀಕ್ಷೆಯಲ್ಲಿದೆ. ಈ ಸರಣಿಯನ್ನು ಆರ್ಥಿಕತೆ ದೃಷ್ಟಿಯಿಂದ ಆ್ಯಶಸ್‌ನಷ್ಟೇ ಮುಖ್ಯ ಎಂದಿರುವ ಇಸಿಬಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ರಿಚರ್ಡ್‌ ಗೌಲ್ಡ್‌, ಸರಣಿಯು ತಮ್ಮ ಕ್ರಿಕೆಟ್‌ ಮಂಡಳಿಗೆ ಭಾರೀ ಆದಾಯ ಬರಲಿದೆ ಎಂದಿದ್ದಾರೆ.

ಅಂದಾಜಿನ ಪ್ರಕಾರ, ಟೀವಿ ಹಾಗೂ ಡಿಜಿಟಲ್‌ ಪ್ರಸಾರ ಹಕ್ಕು ಮಾರಾಟ, ಪ್ರಾಯೋಜಕತ್ವ, ಟಿಕೆಟ್‌ಗಳ ಮಾರಾಟ, ಕ್ರೀಡಾಂಗಣಗಳ ಒಳಗೆ ಜಾಹೀರಾತು, ಆಹಾರ ಹಾಗೂ ಮದ್ಯ ಮಾರಾಟ ಎಲ್ಲಾ ಸೇರಿ ಇಸಿಬಿಗೆ 600ರಿಂದ 800 ಕೋಟಿ ರೂ. ಆದಾಯ ಬರಬಹುದು ಎಂದು ಅಂದಾಜಿಸಲಾಗಿದೆ. ಇತ್ತೀಚೆಗೆ ಲಂಡನ್‌ನಲ್ಲಿ ಮುಕ್ತಾಯ ಕಂಡಿದ್ದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಭಾರತ ಇಲ್ಲದ ಕಾರಣ ಇಸಿಬಿಗೆ ಅಷ್ಟಾಗಿ ಆದಾಯ ಹರಿದು ಬಂದಿರಲಿಲ್ಲ. ಕಳೆದ ಎರಡು ಆವೃತ್ತಿಯ ಫೈನಲ್‌ನಲ್ಲಿ ಭಾರತ ಆಡಿದ್ದರಿಂದ ದೊಡ್ದ ಪ್ರಮಾಣದ ಹಣ ಗಳಿಸಿತ್ತು. ಈ ವಿಚಾರವನ್ನು ಇಸಿಬಿಯೇ ತಿಳಿಸಿತ್ತು.

ಭಾರತ ವಿರುದ್ಧದ ಸರಣಿಗೆ ಕಳೆದ ವರ್ಷ ಟಿಕೆಟ್‌ ಮಾರಾಟ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಸೋಲ್ಡ್‌ ಔಟ್‌ ಆಗಿತ್ತು. ಇದೀಗ ಈ ಬಾರಿಯ ಎಲ್ಲಾ 5 ಪಂದ್ಯಗಳಿಗೂ ಕ್ರೀಡಾಂಗಣ ಭರ್ತಿಯಾಗುವ ನಿರೀಕ್ಷೆ ಇದೆ ಎಂದು ಗೌಲ್ಡ್‌ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ IND vs ENG: ಇಂಗ್ಲೆಂಡ್‌ ಪ್ರವಾಸದ ಭಾರತ ಟೆಸ್ಟ್‌ ತಂಡಕ್ಕೆ ಸೇರ್ಪಡೆಯಾದ ಹರ್ಷಿತ್‌ ರಾಣಾ!

ಈ ಬಾರಿ ಭಾರತ-ಇಂಗ್ಲೆಂಡ್‌ ನಡುವಿನ ಟೆಸ್ಟ್‌ ಸರಣಿಗೆ ಆ್ಯಂಡರ್ಸನ್‌- ತೆಂಡೂಲ್ಕರ್‌ ಟ್ರೋಫಿ ಎಂದು ಹೆಸರು ಇಡಲಾಗಿದೆ. ಈ ಹಿಂದೆ ಪಟೌಡಿ ಟ್ರೋಫಿ ಎಂದು ಕರೆಯಲಾಗುತ್ತಿತ್ತು. ಪಟೌಡಿ ಅವರಿಗೂ ಗೌರವ ಸಲ್ಲಲಿದೆ. ಸರಣಿ ವಿಜೇತ ನಾಯಕನಿಗೆ ಪಟೌಡಿ ಮೆಡಲ್‌ ನೀಡಲು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ನಿರ್ಧರಿಸಿದೆ.