ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup T20: ಟಿ20 ಮಾದರಿಯ ಏಷ್ಯಾಕಪ್‌ ದಾಖಲೆಗಳ ಪಟ್ಟಿ ಇಲ್ಲಿದೆ

2022 ರಲ್ಲಿ ಪಾಕಿಸ್ತಾನ ವಿರುದ್ಧ ಹಾಂಗ್ ಕಾಂಗ್ ತಂಡ 38 ರನ್‌ಗಳಿಗೆ ಆಲೌಟ್ ಆದದ್ದು ಪಂದ್ಯಾವಳಿಯ ಇತಿಹಾಸದಲ್ಲಿ ಇದುವರೆಗಿನ ಅತ್ಯಂತ ಕಡಿಮೆ ಮೊತ್ತ. ಪಾಕಿಸ್ತಾನ 155 ರನ್‌ಗಳ ಬೃಹತ್ ಗೆಲುವು ಸಾಧಿಸಿದಾಗ ಹಾಂಗ್ ಕಾಂಗ್ ತಂಡದ ಯಾವುದೇ ಬ್ಯಾಟ್ಸ್‌ಮನ್ ಎರಡಂಕಿಯ ಸ್ಕೋರ್ ಗಳಿಸಲು ಸಾಧ್ಯವಾಗಲಿಲ್ಲ.

Asia Cup 2025: ಟಿ20 ಮಾದರಿಯ ಏಷ್ಯಾಕಪ್‌ ದಾಖಲೆಗಳ ಪಟ್ಟಿ ಇಲ್ಲಿದೆ

-

Abhilash BC Abhilash BC Sep 9, 2025 5:50 PM

ದುಬೈ: 2025 ರ ಏಷ್ಯಾಕಪ್ ಟೂರ್ನಿಗೆ ಮಂಗಳವಾರ ಅಬುಧಾಬಿಯ ಶೇಖ್ ಜಾಯೆದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ. ಇಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಹಾಂಗ್ ಕಾಂಗ್ ತಂಡವನ್ನು ಎದುರಿಸಲಿದೆ. ಮುಂದಿನ ವರ್ಷದ ಟಿ20 ವಿಶ್ವಕಪ್​ಗೆ ಪೂರ್ವಸಿದ್ಧತೆಯಾಗಿ ಈ ಬಾರಿ ಟೂರ್ನಿ ಚುಟುಕು ಕ್ರಿಕೆಟ್​ ಮಾದರಿಯಲ್ಲಿ ನಡೆಯಲಿದೆ. 2025 ರ ಆವೃತ್ತಿಗೂ ಮುನ್ನ ಟಿ 20 ಸ್ವರೂಪದಲ್ಲಿ ಏಷ್ಯಾಕಪ್‌ನ ಕೆಲವು ಪ್ರಮುಖ ದಾಖಲೆಗಳು ಇಲ್ಲಿವೆ.

ಗರಿಷ್ಠ ವೈಯಕ್ತಿಕ ಸ್ಕೋರ್

2022 ರ ದುಬೈ ಆವೃತ್ತಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಅಜೇಯ 122 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಟಿ20 ಏಷ್ಯಾಕಪ್‌ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಟೂರ್ನಮೆಂಟ್‌ನ ಟಿ20 ಸ್ವರೂಪದಲ್ಲಿ ಮೂರು ಅಂಕಿಗಳನ್ನು ತಲುಪಿದ ಮತ್ತೊಬ್ಬ ಬ್ಯಾಟ್ಸ್‌ಮನ್ - ಹಾಂಗ್ ಕಾಂಗ್‌ನ ಬಾಬರ್ ಹಯಾತ್, 2016 ರಲ್ಲಿ ಓಮನ್ ವಿರುದ್ಧ 122 ರನ್ ಗಳಿಸಿದ್ದರು.

ಅತ್ಯುತ್ತಮ ಬೌಲಿಂಗ್

2022 ರಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತದ ವೇಗಿ ಭುವನೇಶ್ವರ್ ಕುಮಾರ್ 4ಕ್ಕೆ 5 ವಿಕೆಟ್ ಕಬಳಿಸಿದ್ದರು. ಇದು ಟಿ20 ಏಷ್ಯಾ ಕಪ್ ಪಂದ್ಯವೊಂದರಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ. ಟೂರ್ನಮೆಂಟ್ ಇತಿಹಾಸದಲ್ಲಿ ಐದು ವಿಕೆಟ್ ಪಡೆದ ಏಕೈಕ ಬೌಲರ್ ಕೂಡ ಅವರು.

ತಂಡದ ಅತ್ಯಧಿಕ ಸ್ಕೋರ್

ಏಷ್ಯಾ ಕಪ್ ಟಿ20 ಪಂದ್ಯದಲ್ಲಿ 200 ರನ್‌ಗಳ ಗಡಿ ದಾಟಿದ ಏಕೈಕ ತಂಡ ಭಾರತ. 2022 ರಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು 2 ವಿಕೆಟ್‌ಗೆ 212ರನ್‌ ಗಳಿಸಿದಾಗ ಈ ಸಾಧನೆ ಮಾಡಿತು.

ತಂಡದ ಅತ್ಯಂತ ಕಡಿಮೆ ಸ್ಕೋರ್

2022 ರಲ್ಲಿ ಪಾಕಿಸ್ತಾನ ವಿರುದ್ಧ ಹಾಂಗ್ ಕಾಂಗ್ ತಂಡ 38 ರನ್‌ಗಳಿಗೆ ಆಲೌಟ್ ಆದದ್ದು ಪಂದ್ಯಾವಳಿಯ ಇತಿಹಾಸದಲ್ಲಿ ಇದುವರೆಗಿನ ಅತ್ಯಂತ ಕಡಿಮೆ ಮೊತ್ತ. ಪಾಕಿಸ್ತಾನ 155 ರನ್‌ಗಳ ಬೃಹತ್ ಗೆಲುವು ಸಾಧಿಸಿದಾಗ ಹಾಂಗ್ ಕಾಂಗ್ ತಂಡದ ಯಾವುದೇ ಬ್ಯಾಟ್ಸ್‌ಮನ್ ಎರಡಂಕಿಯ ಸ್ಕೋರ್ ಗಳಿಸಲು ಸಾಧ್ಯವಾಗಲಿಲ್ಲ.

ಕಡಿಮೆ ಮೊತ್ತದ ರಕ್ಷಣೆ

ಏಷ್ಯಾ ಕಪ್ ಟಿ20 ಪಂದ್ಯದಲ್ಲಿ ಶ್ರೀಲಂಕಾ ತಂಡವು ಅತ್ಯಂತ ಕಡಿಮೆ ಮೊತ್ತವನ್ನು ರಕ್ಷಿಸಿದ ದಾಖಲೆಯನ್ನು ಹೊಂದಿದೆ. 2016 ರಲ್ಲಿ, ಶ್ರೀಲಂಕಾ ತಂಡವು ಮಿರ್ಪುರದಲ್ಲಿ ಯುಎಇ ವಿರುದ್ಧ 129 ರನ್ ಗಳಿಸಿ 14 ರನ್‌ಗಳಿಂದ ಗೆದ್ದಿತ್ತು.