ಭಾರತ vs ನ್ಯೂಜಿಲ್ಯಾಂಡ್ ಸರಣಿ ಯಾವಾಗ ಆರಂಭ?
IND vs NZ series schedule: ನ್ಯೂಜಿಲ್ಯಾಂಡ್ ವಿರುದ್ಧ ಭಾರತ 3 ಪಂದ್ಯಗಳ ಏಕದಿನ ಮತ್ತು 5 ಪಂದ್ಯಗಳ ಟಿ20 ಸರಣಿ ಆಡಲಿದೆ. ಟಿ20 ಸರಣಿಗೆ ಈಗಾಗಲೇ ತಂಡವನ್ನು ಪ್ರಕಟಿಸಲಾಗಿದೆ. ಟಿ20 ವಿಶ್ವಕಪ್‌ಗೆ ಪ್ರಕಟಿಸಿದ ತಂಡವನ್ನೇ ಕಿವೀಸ್ ಸರಣಿಯಲ್ಲಿ ಆಡಿಸಲಾಗುತ್ತದೆ.
IND vs NZ series -
ಬೆಂಗಳೂರು, ಡಿ.21: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್, ಏಕದಿನ ಮತ್ತು ಟಿ20 ಸರಣಿ ಮುಕ್ತಾಯ ಕಂಡಿದೆ. ಇದೀಗ ಟೀಮ್ ಇಂಡಿಯಾ ಪ್ರವಾಸಿ ನ್ಯೂಜಿಲ್ಯಾಂಡ್(IND vs NZ series schedule) ವಿರುದ್ಧದ ಸರಣಿಯನ್ನಾಡಲು ಸಜ್ಜಾಗಲಿದೆ. ತವರಿನಲ್ಲಿ ಮತ್ತೊಮ್ಮೆ ಅಭಿಮಾನಿಗಳು ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿಯ ಆಟವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಸರಣಿಯ ವೇಳಾಪಟ್ಟಿಯ ಮಾಹಿತಿ ಇಲ್ಲಿದೆ.
ನ್ಯೂಜಿಲ್ಯಾಂಡ್ ವಿರುದ್ಧ ಭಾರತ 3 ಪಂದ್ಯಗಳ ಏಕದಿನ ಮತ್ತು 5 ಪಂದ್ಯಗಳ ಟಿ20 ಸರಣಿ ಆಡಲಿದೆ. ಟಿ20 ಸರಣಿಗೆ ಈಗಾಗಲೇ ತಂಡವನ್ನು ಪ್ರಕಟಿಸಲಾಗಿದೆ. ಟಿ20 ವಿಶ್ವಕಪ್‌ಗೆ ಪ್ರಕಟಿಸಿದ ತಂಡವನ್ನೇ ಕಿವೀಸ್ ಸರಣಿಯಲ್ಲಿ ಆಡಿಸಲಾಗುತ್ತದೆ.
ಸರಣಿ ಆರಂಭ
ಇತ್ತಂಡಗಳ ಸರಣಿ ಏಕದಿನದ ಮೂಲಕ ಪ್ರಾರಂಭವಾಗಲಿದೆ. ಮೊದಲ ಏಕದಿನ ಜ.11ರಂದು ನಡೆಯಲಿದೆ. ಟಿ20 ಸರಣಿ ಜ.21ರಿಂದ ಆರಂಭವಾಗಲಿದೆ. ಜ.31ರಂದು ಸರಣಿ ಮುಕ್ತಾಯಗೊಳ್ಳಲಿದೆ. ಬಿಸಿಸಿಐ ನೂತನ ನೀತಿಯ ಅನ್ವಯ ಕಿವೀಸ್ ಸರಣಿಗೂ ಮುನ್ನ ರೋಹಿತ್, ಕೊಹ್ಲಿ ಸೇರಿ ಎಲ್ಲ ಆಟಗಾರರು ದೇಶೀಯ ವಿಜಯ್ ಹಜಾರೆ ಟೂರ್ನಿಯ ಕೆಲವು ಪಂದ್ಯಗಳಲ್ಲಿ ಆಡಲಿದ್ದಾರೆ.
U19 Asia Cup Final: ಸೇಡು ತೀರಿಸಿಕೊಂಡ ಪಾಕ್; ಅಂಡರ್-19 ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತಕ್ಕೆ ಸೋಲು
ಭಾರತ vs ನ್ಯೂಜಿಲೆಂಡ್ ODI ಸರಣಿ ವೇಳಾಪಟ್ಟಿ
ಜನವರಿ 11, 2026: ಮೊದಲ ODI, ವಡೋದರಾ
ಜನವರಿ 14, 2026: ಎರಡನೇ ODI, ರಾಜ್‌ಕೋಟ್
ಜನವರಿ 18, 2026: ಮೂರನೇ ODI, ಇಂದೋರ್
ಭಾರತ vs ನ್ಯೂಜಿಲೆಂಡ್ ಟಿ20 ಸರಣಿ ವೇಳಾಪಟ್ಟಿ
ಜನವರಿ 21, 2026: ಮೊದಲ ಟಿ20, ನಾಗ್ಪುರ
ಜನವರಿ 23, 2006: ದ್ವಿತೀಯ ಟಿ20, ರಾಯ್ಪುರ
ಜನವರಿ 25, 2006: ಮೂರನೇ ಟಿ20, ಗುವಾಹಟಿ
ಜನವರಿ 28, 2006: ನಾಲ್ಕನೇ ಟಿ20, ವಿಶಾಖಪಟ್ಟಣಂ
ಜನವರಿ 28, 2006: ಐದನೇ ಟಿ20, ತಿರುವನಂತಪುರಂ
ಟಿ20 ಸರಣಿಗೆ ಭಾರತ ತಂಡ
ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ (ಉಪನಾಯಕ), ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ವಾಷಿಂಗ್ಟನ್ ಸುಂದರ್, ವರುಣ ಚಕ್ರವರ್ತಿ, ಇಶಾನ್ ಕಿಶನ್ (ವಿಕೆಟ್‌ಕೀಪರ್), ರಿಂಕು ಸಿಂಗ್.