ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹಲವು ಐಪಿಎಲ್‌ ಫೈನಲ್‌ ಆಡಿದರೂ ಕಪ್‌ ಗೆಲ್ಲದ ಆಟಗಾರರು ಯಾರು?; ಪಟ್ಟಿಯಲ್ಲಿದ್ದಾರೆ ಭಾರತದ ಟಿ20 ವಿಶ್ವಕಪ್ ವಿಜೇತ ಉಪನಾಯಕ

Players to lose all IPL finals after multiple attempts: ಮೂರು ಫೈನಲ್‌ಗಳಲ್ಲಿ ಸೋಲು ಅನುಭವಿಸಿರುವ ಚಾಹಲ್, ಮೋಹಿತ್ ಮತ್ತು ತ್ರಿಪಾಠಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಉಳಿದ 10 ಆಟಗಾರರು ಎರಡು ಐಪಿಎಲ್ ಫೈನಲ್ ಸೋಲುಗಳನ್ನು ಅನುಭವಿಸಿದ್ದಾರೆ. ಒಟ್ಟಾರೆಯಾಗಿ 18 ಆಟಗಾರರು ಹಲವು ಪ್ರಯತ್ನಗಳನ್ನು ಮಾಡಿದ ನಂತರವೂ ಐಪಿಎಲ್ ಫೈನಲ್ ಗೆದ್ದಿಲ್ಲ.

2 ಟಿ20 ವಿಶ್ವಕಪ್‌ ಗೆದ್ದರೂ ಐಪಿಎಲ್‌ ಟ್ರೋಫಿ ಗೆಲ್ಲದ ಆಟಗಾರರು ಯಾರು?

Two-time India World Cup winner -

Abhilash BC
Abhilash BC Jun 2, 2026 3:23 PM

ಬೆಂಗಳೂರು, ಜೂ.2: ಮೇ 31 ಭಾನುವಾರ ಅಹಮದಾಬಾದ್‌ನಲ್ಲಿ ನಡೆದ ಏಕಪಕ್ಷೀಯ ಐಪಿಎಲ್‌ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್(Gujarat Titans) ತಂಡವನ್ನು ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ತಂಡವು ಎರಡನೇ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದರೊಂದಿಗೆ 2026ರ ಇಂಡಿಯನ್ ಪ್ರೀಮಿಯರ್ ಲೀಗ್(IPL) ಕೂಡ ಮುಕ್ತಾಯಗೊಂಡಿತು. ಕಳೆದ 19 ಆವೃತ್ತಿಯ ಐಪಿಎಲ್‌ನಲ್ಲಿ ಫೈನಲ್‌ ತಲುಪಿಯೂ ಕನಿಷ್ಠ ಒಂದು ಪ್ರಶಸ್ತಿಯನ್ನು ಗೆಲ್ಲದ ಆಟಗಾರರ ಪಟ್ಟಿಯೊಂದು ಇಲ್ಲಿದೆ.

ಕೃನಾಲ್ ಪಾಂಡ್ಯ ಮತ್ತು ಜೋಶ್ ಹ್ಯಾಜಲ್‌ವುಡ್‌ ಫೈನಲ್‌ನಲ್ಲಿ ತಮ್ಮ ಅಜೇಯ ದಾಖಲೆಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಪಾಂಡ್ಯ ಐದು ಪ್ರಯತ್ನಗಳಲ್ಲಿ ಒಂದೇ ಒಂದು ಐಪಿಎಲ್ ಫೈನಲ್‌ನಲ್ಲಿ ಸೋತಿಲ್ಲ, ಹ್ಯಾಜಲ್‌ವುಡ್ ಆರು ಟಿ20 ಮುಖಾಮುಖಿಗಳಲ್ಲಿ ಅಜೇಯರಾಗಿದ್ದಾರೆ, ಇದರಲ್ಲಿ ಮೂರು ಐಪಿಎಲ್ ಫೈನಲ್‌ಗಳು ಸೇರಿವೆ. ಆರ್‌ಸಿಬಿ ಪರ ಎರಡು ಮತ್ತು 2021 ರಲ್ಲಿ ಸಿಎಸ್‌ಕೆ ಪರ ಒಂದು.

ಐಪಿಎಲ್‌ ಖ್ಯಾತಿಯ ಬೆನ್ನಲ್ಲೇ ಬ್ರ್ಯಾಂಡ್‌ ಮೌಲ್ಯ ಹೆಚ್ಚಿಸಿಕೊಂಡ ಸೂರ್ಯವಂಶಿ!

ಗುಜರಾತ್ ಟೈಟಾನ್ಸ್‌ ಪರ, ಜೋಸ್ ಬಟ್ಲರ್, ಪ್ರಸಿದ್ಧ್ ಕೃಷ್ಣ, ಕಗಿಸೊ ರಬಾಡ, ಸಾಯಿ ಸುದರ್ಶನ್ ಮತ್ತು ವಾಷಿಂಗ್ಟನ್ ಸುಂದರ್‌ರಂತಹ ಆಟಗಾರ ಐಪಿಎಲ್‌ ಟ್ರೋಫಿ ಕಾಯುವಿಕೆ ಮುಂದುವರೆಯಿತು. ಈ ನಾಲ್ವರೂ ಆಟಗಾರರು ತಮ್ಮ ಎರಡನೇ ಐಪಿಎಲ್ ಫೈನಲ್‌ನಲ್ಲಿ ಸೋತಿದ್ದಾರೆ. ಬಟ್ಲರ್ ರಾಜಸ್ಥಾನ ರಾಯಲ್ಸ್ ಪರ ಐಪಿಎಲ್ 2022 ರ ಫೈನಲ್‌ನಲ್ಲಿ, 2017 ರಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ ಪರ ಸುಂದರ್, 2020 ರಲ್ಲಿ ದೆಹಲಿ ಕ್ಯಾಪಿಟಲ್ಸ್ ಪರ ರಬಾಡ ಮತ್ತು 2022 ರಲ್ಲಿ ಆರ್‌ಆರ್ ಪರ ಪ್ರಸಿದ್ಧ್‌ ಕೃಷ್ಣ ಸೋತರು.

ಈ ನಾಲ್ವರಲ್ಲದೆ, ಯುಜ್ವೇಂದ್ರ ಚಾಹಲ್, ಮೋಹಿತ್ ಶರ್ಮಾ, ರಾಹುಲ್ ತ್ರಿಪಾಠಿ, ಎಸ್ ಅರವಿಂದ್, ಲಕ್ಷ್ಮಿಪತಿ ಬಾಲಾಜಿ, ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್, ಶಿಮ್ರಾನ್ ಹೆಟ್ಮೈರ್, ಜಹೀರ್ ಖಾನ್, 2026 ರ ಭಾರತದ ಟಿ 20 ವಿಶ್ವಕಪ್ ವಿಜೇತ ಉಪನಾಯಕ ಅಕ್ಷರ್ ಪಟೇಲ್, ಮಾರ್ಕಸ್ ಸ್ಟೊಯಿನಿಸ್, ಸೌರಭ್ ತಿವಾರಿ ಮತ್ತು ಜಯದೇವ್ ಉನಾದ್ಕಟ್ ಬಹು ಐಪಿಎಲ್ ಫೈನಲ್‌ಗಳಲ್ಲಿ ಆಡಿದ್ದರೂ ಅವೆಲ್ಲವನ್ನೂ ಸೋತವರಾಗಿದ್ದಾರೆ.

ಭಾರತ ತಂಡಕ್ಕೆ ವೈಭವ್‌ ಸೂರ್ಯವಂಶಿ ಆಯ್ಕೆ; ಮೌನ ಮುರಿದ ಬಿಸಿಸಿಐ ಕಾರ್ಯದರ್ಶಿ

ಮೂರು ಫೈನಲ್‌ಗಳಲ್ಲಿ ಸೋಲು ಅನುಭವಿಸಿರುವ ಚಾಹಲ್, ಮೋಹಿತ್ ಮತ್ತು ತ್ರಿಪಾಠಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಉಳಿದ 10 ಆಟಗಾರರು ಎರಡು ಐಪಿಎಲ್ ಫೈನಲ್ ಸೋಲುಗಳನ್ನು ಅನುಭವಿಸಿದ್ದಾರೆ. ಒಟ್ಟಾರೆಯಾಗಿ 18 ಆಟಗಾರರು ಹಲವು ಪ್ರಯತ್ನಗಳನ್ನು ಮಾಡಿದ ನಂತರವೂ ಐಪಿಎಲ್ ಫೈನಲ್ ಗೆದ್ದಿಲ್ಲ.

ಹಲವು ಪ್ರಯತ್ನಗಳ ನಂತರ ಎಲ್ಲಾ ಐಪಿಎಲ್ ಫೈನಲ್‌ ಸೋತ ಆಟಗಾರರು

ಯುಜ್ವೇಂದ್ರ ಚಾಹಲ್: 3 ರಲ್ಲಿ 3 ಸೋಲು

ಮೋಹಿತ್ ಶರ್ಮಾ: 3 ರಲ್ಲಿ 3 ಸೋಲು

ರಾಹುಲ್‌ ತ್ರಿಪಾಠಿ: 3 ರಲ್ಲಿ 3 ಸೋಲು

ಜೋಸ್ ಬಟ್ಲರ್: 2 ರಲ್ಲಿ 2 ಸೋಲು

ಕಾಗಿಸೊ ರಬಾಡ: 2 ರಲ್ಲಿ 2 ಸೋಲು

ವಾಷಿಂಗ್ಟನ್ ಸುಂದರ್: 2 ರಲ್ಲಿ 2 ಸೋಲು

ಪ್ರಸಿದ್ಧ ಕೃಷ್ಣ: 2 ರಲ್ಲಿ 2 ಸೋಲು

ಸಾಯಿ ಸುದರ್ಶನ್: 2 ರಲ್ಲಿ 2 ಸೋಲು

ಎಬಿ ಡಿವಿಲಿಯರ್ಸ್: 2 ರಲ್ಲಿ 2 ಸೋಲು

ಕ್ರಿಸ್ ಗೇಲ್: 2 ರಲ್ಲಿ 2 ಸೋಲು

ಶಿಮ್ರಾನ್ ಹೆಟ್ಮೈರ್: 2 ರಲ್ಲಿ 2 ಸೋಲು

ಜಹೀರ್ ಖಾನ್: 2 ರಲ್ಲಿ 2 ಸೋಲು

ಅಕ್ಷರ್ ಪಟೇಲ್: 2 ರಲ್ಲಿ 2 ಸೋಲು

ಮಾರ್ಕಸ್ ಸ್ಟೊಯಿನಿಸ್: 2 ರಲ್ಲಿ 2 ಸೋಲು

ಸೌರವ್‌ ತಿವಾರಿ: 2 ರಲ್ಲಿ 2 ಸೋಲು

ಜಯದೇವ್ ಉನಾದ್ಕಟ್: 2 ರಲ್ಲಿ 2 ಸೋಲು

ಎಸ್ ಅರವಿಂದ್: 2 ರಲ್ಲಿ 2 ಸೋಲು

ಲಕ್ಷ್ಮಿಪತಿ ಬಾಲಾಜಿ: 2 ರಲ್ಲಿ 2 ಸೋಲು