ಪ್ರಧಾನಿ ಮೋದಿಗೆ ಗಾಲ್ಫ್ ಗ್ಲೌಸ್, ಚೆಂಡು ಉಡುಗೊರೆ ನೀಡಿದ ಪ್ರಣವಿ ಅರಸ್
Pranavi Urs: ಪ್ರಣವಿಯ ತಂದೆ ಮತ್ತು ಸಹೋದರ ಮೈಸೂರಿನ ಜಯಚಾಮರಾಜ್ ಒಡೆಯರ್ ಗಾಲ್ಫ್ ಕ್ಲಬ್ನಲ್ಲಿ ಗಾಲ್ಫ್ ಆಡುತ್ತಿದ್ದರು. ಇದನ್ನು ನೋಡಿ ಬೆಳೆದ ಪ್ರಣವಿಗೆ ಸಹಜವಾಗಿಯೇ ಗಾಲ್ಫ್ನತ್ತ ಆಕರ್ಷಣೆ ಮೂಡಿತು. ಹವ್ಯಾಸವಾಗಿ ಆರಂಭವಾಗಿ ಬಳಿಕ ವೃತ್ತಿಪರ ಗಾಲ್ಫ್ ಪಟುವಾಗಿ ಬೆಳೆದರು.
pranavi urs and pm modi -
ನವದೆಹಲಿ, ಅ.16: ಜಪಾನ್ನ ಏಷ್ಯನ್ ಗೇಮ್ಸ್ನಲ್ಲಿ 85 ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ನವದೆಹಲಿಯಲ್ಲಿ ಸನ್ಮಾನಿಸಿದರು. ಮಹಿಳಾ ಕ್ರೀಡಾಪಟುಗಳ ಸಾಧನೆಯನ್ನು ವಿಶೇಷವಾಗಿ ಶ್ಲಾಘಿಸಿದ ಅವರು, 2036ರ ಒಲಿಂಪಿಕ್ಸ್ ಆಯೋಜನೆಗೆ ಭಾರತ ಬಿಡ್ ಸಲ್ಲಿಸುವ ಸಂಕಲ್ಪವನ್ನು ಪ್ರಕಟಿಸಿದರು. ಈ ವೇಳೆ ಮೈಸೂರಿನ ಗಾಲ್ಫ್ ತಾರೆ ಪ್ರಣವಿ ಅರಸ್, ಫ್ರೇಮ್ನಲ್ಲಿ ಗಾಲ್ಫ್ ಗ್ಲೌಸ್ ಹಾಗೂ ಚೆಂಡನ್ನು ಮೋದಿಗೆ ಉಡುಗೊರೆಯಾಗಿ ನೀಡಿದರು.
ಸಮಾರಂಭದಲ್ಲಿ ಭಾರತದ ನೂರಾರು ಅಥ್ಲೀಟ್ಗಳು ಭಾಗಿಯಾದರು. ಪುರುಷ ಮತ್ತು ಮಹಿಳಾ ಹಾಕಿ ತಂಡಗಳು ಜರ್ಸಿ ಮತ್ತು ಹಾಕಿ ಸ್ಟಿಕ್ ನೀಡಿ ಗೌರವಿಸಿದವು. 17 ವರ್ಷದ ಆರ್ಚರಿ ಪಟು ಕುಂಕುಂ ಮೊಹೋಡ್ ಪ್ರಧಾನಿಗೆ ಬಿಲ್ಲು ನೀಡಿದರು.
ʼಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಸನ್ಮಾನಿತನಾಗಿರುವುದಕ್ಕೆ ನನಗೆ ಹೆಮ್ಮೆಯಿದೆ. ನಿಮ್ಮ ಪ್ರೋತ್ಸಾಹ, ಮನ್ನಣೆ ಹಾಗೂ ಭಾರತೀಯ ಕ್ರೀಡೆಗೆ ನೀವು ನೀಡುತ್ತಿರುವ ನಿರಂತರ ಬೆಂಬಲಕ್ಕಾಗಿ ಧನ್ಯವಾದಗಳು ಸರ್!" ಎಂದು ಇನ್ಸ್ಟಾಗ್ರಾಮ್ನಲ್ಲಿ ಮೋದಿ ಜತೆಗಿನ ಫೋಟೊವನ್ನು ಪ್ರಣವಿ ಅರಸ್ ಪೋಸ್ಟ್ ಮಾಡಿದ್ದಾರೆ.
ಪ್ರಣವಿಯ ತಂದೆ ಮತ್ತು ಸಹೋದರ ಮೈಸೂರಿನ ಜಯಚಾಮರಾಜ್ ಒಡೆಯರ್ ಗಾಲ್ಫ್ ಕ್ಲಬ್ನಲ್ಲಿ ಗಾಲ್ಫ್ ಆಡುತ್ತಿದ್ದರು. ಇದನ್ನು ನೋಡಿ ಬೆಳೆದ ಪ್ರಣವಿಗೆ ಸಹಜವಾಗಿಯೇ ಗಾಲ್ಫ್ನತ್ತ ಆಕರ್ಷಣೆ ಮೂಡಿತು. ಹವ್ಯಾಸವಾಗಿ ಆರಂಭವಾಗಿ ಬಳಿಕ ವೃತ್ತಿಪರ ಗಾಲ್ಫ್ ಪಟುವಾಗಿ ಬೆಳೆದರು.
ಇಂಗ್ಲೆಂಡ್ 'ಎ' ತಂಡಕ್ಕೆ ಭಾರತೀಯ ಮೂಲದ ಕೀರಾ ಚಾತ್ಲಿ ನಾಯಕಿ
ಏಷ್ಯಾಡ್ನಲ್ಲಿ 1982ರಿಂದ ಪುರುಷ, 1990ರಿಂದ ಮಹಿಳಾ ಗಾಲ್ಫ್ ನಡೆಯುತ್ತಿದೆ. ಪುರುಷರ ವಿಭಾಗದಲ್ಲಿ 1982, 2022ರಲ್ಲಿ ಚಿನ್ನ ಬಂದಿತ್ತು. ಆದರೆ ಮಹಿಳಾ ವಿಭಾಗದಲ್ಲಿ ಬಂಗಾರದ ಕೊರತೆ ಇತ್ತು. ಅದನ್ನು ಮೈಸೂರಿನ ಪ್ರಣವಿ ನೀಗಿಸಿದ್ದಾರೆ. ಪುರುಷ- ಮಹಿಳೆ ಸೇರಿದಂತೆ ಭಾರತೀಯ ಗಾಲ್ಫ್ ಆಟಗಾರರೊಬ್ಬರು ಏಷ್ಯಾಡ್ನಲ್ಲಿ ಚಿನ್ನದ ಪದಕ ಗೆದ್ದಿದ್ದು 24 ವರ್ಷಗಳಲ್ಲಿ ಇದೇ ಮೊದಲು.
ಭಾರತದ ಹೆಮ್ಮೆಯ ಕ್ರೀಡಾಪಟುಗಳ ಸಾಧನೆಯನ್ನು ಕೊಂಡಾಡಿದ ಮೋದಿ, ಕೆಲಕಾಲ ಕ್ರೀಡಾಪಟುಗಳ ಜತೆ ಸಂವಾದವನ್ನೂ ನಡೆಸಿದರು. ಈ ವೇಳೆ ʼಇಷ್ಟೊಂದು ಪದಕ ವಿಜೇತರ ಮಧ್ಯೆ ಇರುವುದು ನನಗೆ ಶಕ್ತಿ ತುಂಬುತ್ತದೆ. ನಮ್ಮ ಮಹಿಳಾ ಕ್ರೀಡಾಪಟುಗಳನ್ನು ನಾನು ವಿಶೇಷವಾಗಿ ಅಭಿನಂದಿಸಲು ಬಯಸುತ್ತೇನೆ. ಭಾರತ ಗೆದ್ದ 85 ಪದಕಗಳಲ್ಲಿ 38 ಪದಕಗಳನ್ನು ಮಹಿಳೆಯರು ಗೆದ್ದಿದ್ದಾರೆ. ಅದರಲ್ಲಿ 11 ಚಿನ್ನದ ಪದಕಗಳೂ ಸೇರಿವೆ. ಈ ಪದಕಗಳು ಕೇವಲ ಸಂಖ್ಯೆಗಳಲ್ಲ. ಇವು ನವ ಭಾರತದ ಪ್ರಬಲ ಚಿತ್ರಣ’ ಎಂದು ಶ್ಲಾಘನೆ ವ್ಯಕ್ತಪಡಿಸಿದರು.