ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ದಿಗ್ಗಜ ಆಟಗಾರ್ತಿ ಪೂನಂ ರಾವತ್
Punam Raut Cricket Retirement: ಟೆಸ್ಟ್ ಕ್ರಿಕೆಟ್ನಲ್ಲಿ, ರಾವತ್ ನಾಲ್ಕು ಪಂದ್ಯಗಳಲ್ಲಿ ಆಡಿ 44.00 ಸರಾಸರಿಯಲ್ಲಿ 264 ರನ್ಗಳನ್ನು ಗಳಿಸಿದರು. ಈ ಮಾದರಿಯಲ್ಲಿ ಅವರು ಗಳಿಸಿದ ಏಕೈಕ ಶತಕವೆಂದರೆ, 2014ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು ಬಾರಿಸಿದ 130 ರನ್ಗಳು.
Punam Raut -
ನವದೆಹಲಿ, ಅ.16: ಭಾರತ ಮಹಿಳಾ ಕ್ರಿಕೆಟ್ ತಂಡದ ಬ್ಯಾಟರ್ ಪೂನಂ ರಾವತ್, ಅಂತರರಾಷ್ಟ್ರೀಯ ಕ್ರಿಕೆಟ್ನ ಎಲ್ಲಾ ಸ್ವರೂಪಗಳಿಂದ ತಕ್ಷಣವೇ ಜಾರಿಗೆ ಬರುವಂತೆ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ ಅವರ 12 ವರ್ಷಗಳ ಸುದೀರ್ಘ ವೃತ್ತಿಜೀವನಕ್ಕೆ ತೆರೆ ಬಿದ್ದಿದೆ.
37 ವರ್ಷದ ಈ ಆಟಗಾರ್ತಿ 2009 ಮತ್ತು 2021ರ ನಡುವೆ ಭಾರತವನ್ನು ಪ್ರತಿನಿಧಿಸಿ, ನಾಲ್ಕು ಟೆಸ್ಟ್, 73 ಏಕದಿನ (ODI) ಮತ್ತು 35 ಟಿ20 (T20I) ಪಂದ್ಯಗಳಲ್ಲಿ ಒಟ್ಟು 3,282 ರನ್ಗಳನ್ನು ಗಳಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವರು ನಾಲ್ಕು ಶತಕಗಳು ಮತ್ತು 19 ಅರ್ಧಶತಕಗಳನ್ನು ದಾಖಲಿಸಿದ್ದು, ಟೆಸ್ಟ್ ಕ್ರಿಕೆಟ್ನಲ್ಲಿ 130 ರನ್ಗಳು ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.
ರಾವುತ್ ಅವರು ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ತಮ್ಮ ನಿರ್ಧಾರವನ್ನು ಪ್ರಕಟಿಸಿದರು. ಇದರಲ್ಲಿ ಅವರು ದೇಶವನ್ನು ಪ್ರತಿನಿಧಿಸಿದ ಗೌರವದ ಬಗ್ಗೆ ಹಾಗೂ ತಮ್ಮ ಕ್ರಿಕೆಟ್ ಪಯಣದಲ್ಲಿ ಕಲಿತ ಪಾಠಗಳ ಬಗ್ಗೆ ಮೆಲುಕು ಹಾಕಿದರು.
ದೀರ್ಘವಾಗಿ ಯೋಚಿಸಿ ಮತ್ತು ಚಿಂತನೆ ನಡೆಸಿದ ನಂತರ, ಅಂತರರಾಷ್ಟ್ರೀಯ ಕ್ರಿಕೆಟ್ನ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಹೊಂದಲು ನಾನು ನಿರ್ಧರಿಸಿದ್ದೇನೆ ಎಂದು ಹೇಳಿದರು.
IPL 2027 ʻಮಿನಿ ಹರಾಜಿನಲ್ಲಿ ಶೇಯ್ ಹೋಪ್ಗಾಗಿ ಆರ್ಸಿಬಿ ಬಲೆ ಬೀಸಬಹುದುʼ: ಆರ್ ಅಶ್ವಿನ್ ಭವಿಷ್ಯ!
"ಭಾರತವನ್ನು ಪ್ರತಿನಿಧಿಸುವುದು ನನ್ನ ಜೀವನದ ಅತ್ಯಂತ ದೊಡ್ಡ ಗೌರವವಾಗಿದೆ. ಕ್ರಿಕೆಟ್ ನನಗೆ ಕೇವಲ ಒಂದು ಕ್ರೀಡೆಯಾಗಿರಲಿಲ್ಲ; ಅದು ನನ್ನ ವ್ಯಕ್ತಿತ್ವವನ್ನು ರೂಪಿಸಿದೆ, ಕಠಿಣ ಸನ್ನಿವೇಶಗಳನ್ನು ಎದುರಿಸುವ ಛಲವನ್ನು ಕಲಿಸಿದೆ ಮತ್ತು ನಾನು ಸದಾ ನೆನಪಿನಲ್ಲಿಟ್ಟುಕೊಳ್ಳುವಂತಹ ಮಧುರ ಕ್ಷಣಗಳನ್ನು ನೀಡಿದೆ. ನಾನು ಭಾರತದ ಜೆರ್ಸಿಯನ್ನು ಧರಿಸಿದ ಪ್ರತಿ ಬಾರಿಯೂ, ಅಪಾರ ಹೆಮ್ಮೆ ಮತ್ತು ಕೃತಜ್ಞತಾ ಭಾವದಿಂದಲೇ ಅದನ್ನು ಧರಿಸಿದ್ದೆ."
"ಭಾರತದ ಜೆರ್ಸಿ ಧರಿಸುವುದು ನನಸಾದ ಕನಸಾಗಿತ್ತು. ನನಗೆ ಸಿಕ್ಕ ನಂಬಿಕೆ ಮತ್ತು ಬೆಂಬಲಕ್ಕಾಗಿ ನಾನು ಸದಾ ಕೃತಜ್ಞಳಾಗಿರುತ್ತೇನೆ" ಎಂದು ಅವರು ಹೇಳಿದರು.
From a world-record 320-run partnership to a fighting 86 in the World Cup final—Punam Raut’s legacy is forever etched in Indian cricket history. Happy retirement! #punamraut https://t.co/AxICZZaKeD
— Thewomencricketworld (@Thewomencricke1) October 16, 2026
ಮುಂಬೈನಲ್ಲಿ ಜನಿಸಿದ ಈ ಬ್ಯಾಟರ್, ತಮ್ಮ ಆರಂಭಿಕ ವರ್ಷಗಳಲ್ಲಿ ಬೆಂಬಲ ನೀಡಿದ್ದಕ್ಕಾಗಿ ಹಾಗೂ ತಮ್ಮ ವೃತ್ತಿಜೀವನಕ್ಕೆ ಅಡಿಪಾಯ ಹಾಕಲು ಸಹಾಯ ಮಾಡಿದ್ದಕ್ಕಾಗಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್ಗೆ ಕೃತಜ್ಞತೆ ಸಲ್ಲಿಸಿದರು.
ಪೂನಂ 73 ಏಕದಿನ ಪಂದ್ಯಗಳಲ್ಲಿ (ODI) 34.83 ಸರಾಸರಿಯೊಂದಿಗೆ ಒಟ್ಟು 2,299 ರನ್ಗಳನ್ನು ಗಳಿಸಿದ್ದಾರೆ. ಇದರಲ್ಲಿ ಮೂರು ಶತಕಗಳು ಮತ್ತು 15 ಅರ್ಧಶತಕಗಳು ಸೇರಿವೆ. ಈ ಮಾದರಿಯಲ್ಲಿ ಅವರ ಗರಿಷ್ಠ ಮೊತ್ತ ಅಜೇಯ 109 ರನ್ಗಳಾಗಿದೆ. ಟಿ20 ಅಂತರರಾಷ್ಟ್ರೀಯ (T20I) ಪಂದ್ಯಗಳಲ್ಲಿ, ಅವರು 27.65 ಸರಾಸರಿಯೊಂದಿಗೆ 719 ರನ್ಗಳನ್ನು ಕಲೆಹಾಕಿದ್ದು, ನಾಲ್ಕು ಅರ್ಧಶತಕಗಳನ್ನು ದಾಖಲಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ, ರಾವತ್ ನಾಲ್ಕು ಪಂದ್ಯಗಳಲ್ಲಿ ಆಡಿ 44.00 ಸರಾಸರಿಯಲ್ಲಿ 264 ರನ್ಗಳನ್ನು ಗಳಿಸಿದರು. ಈ ಮಾದರಿಯಲ್ಲಿ ಅವರು ಗಳಿಸಿದ ಏಕೈಕ ಶತಕವೆಂದರೆ, 2014ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು ಬಾರಿಸಿದ 130 ರನ್ಗಳು.