ಟಿ20 ಮಹಿಳಾ ವಿಶ್ವಕಪ್; ಗಾಯಗೊಂಡ ಇಂಗ್ಲೆಂಡ್ ನಾಯಕಿ ಎರಡು ಪಂದ್ಯಕ್ಕೆ ಅಲಭ್ಯ
Women’s T20 World Cup 2026: ಮುಂದಿನ ಎರಡು ಪಂದ್ಯಗಳಲ್ಲಿ ಬ್ರಂಟ್ ಅನುಪಸ್ಥಿತಿಯಲ್ಲಿ ಉಪನಾಯಕಿ ಚಾರ್ಲಿ ಡೀನ್ ತಂಡವನ್ನು ಹಂಗಾಮಿ ನಾಯಕಿಯಾಗಿ ಮುನ್ನಡೆಸಲಿದ್ದಾರೆ. ನ್ಯಾಟ್ ಬದಲಿಗೆ ಸೋಫಿಯಾ ಡಂಕ್ಲಿ ಈಗ ತಂಡಕ್ಕೆ ಮರಳುವುದು ಬಹುತೇಕ ಖಚಿತ.
Nat Sciver-Brunt -
ಲಂಡನ್, ಜೂ.18: ಮಹಿಳಾ ಟಿ20 ವಿಶ್ವಕಪ್ ಟೂರ್ನಿ(Women’s T20 World Cup 2026)ಯಲ್ಲಿ ಇಂಗ್ಲೆಂಡ್ ತಂಡ ಉತ್ತಮ ಪ್ರದರ್ಶನ ತೋರುತ್ತಿರುವಾಗಲೇ ತಂಡಕ್ಕೆ ದೊಡ್ಡ ಆಘಾತವೊಂದು ಎದುರಾಗಿದೆ. ತಂಡದ ನಾಯಕಿ ನ್ಯಾಟ್ ಸಿವರ್-ಬ್ರಂಟ್(Nat Sciver-Brunt) ಗಾಯದ ಕಾರಣದಿಂದಾಗಿ ಮುಂದಿನ ಎರಡು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಇದು ತಂಡಕ್ಕೆ ದೊಡ್ಡ ಹಿನ್ನಡೆ ಉಂಟುಮಾಡಿದೆ. ಸದ್ಯ ಇಂಗ್ಲೆಂಡ್ ಆಡಿದ ಎರಡು ಪಂದ್ಯಗಳಲ್ಲಿ ಗೆದ್ದು ʼಬಿʼ ಗುಂಪಿನಲ್ಲಿ ಅಗ್ರಸ್ಥಾನಿಯಾಗಿದೆ.
ಮಂಗಳವಾರ ಸೌತಾಂಪ್ಟನ್‌ನಲ್ಲಿ ನಡೆದ ಗ್ರೂಪ್ ಪಂದ್ಯದಲ್ಲಿ ಐರ್ಲೆಂಡ್ ಮಹಿಳೆಯರ ವಿರುದ್ಧ ಬ್ಯಾಟಿಂಗ್ ಮಾಡುವಾಗ ಆಲ್‌ರೌಂಡರ್ ತನ್ನ ಇತ್ತೀಚಿನ ಗಾಯದ ಸ್ಥಳದಲ್ಲಿಯೇ ಸ್ನಾಯು ಸೆಳೆತಕ್ಕೆ ಸಿಲುಕಿದರು. ಮುನ್ನೆಚ್ಚರಿಕೆ ಕ್ರಮವಾಗಿ ಅರ್ಧದಲ್ಲೇ ಪಂದ್ಯ ತ್ಯಜಿಸಿದ್ದರು. ಬುಧವಾರ ನಡೆದ ಸ್ಕ್ಯಾನ್ ಮತ್ತು ಇಂಗ್ಲೆಂಡ್ ವೈದ್ಯಕೀಯ ತಂಡದ ಹೆಚ್ಚಿನ ಮೌಲ್ಯಮಾಪನದ ನಂತರ, ಸ್ಕಾಟ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಇಂಗ್ಲೆಂಡ್‌ನ ಮುಂದಿನ ಎರಡು ಪಂದ್ಯಗಳಿಂದ ಅವರನ್ನು ಹೊರಗಿಡಲು ನಿರ್ಧರಿಸಲಾಗಿದೆ.
ಜೂಲನ್ ಗೋಸ್ವಾಮಿಯ ವಿಶ್ವ ದಾಖಲೆ ಸರಿಗಟ್ಟಿದ ದೀಪ್ತಿ ಶರ್ಮಾ
"ತಂಡದಲ್ಲಿ ಉಳಿದುಕೊಂಡು ಪುನರ್ವಸತಿ ಕೈಗೊಳ್ಳುತ್ತಿರುವ ನ್ಯಾಟ್ ಅವರನ್ನು ಇಂಗ್ಲೆಂಡ್ ವೈದ್ಯಕೀಯ ತಂಡವು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಮೌಲ್ಯಮಾಪನ ಮಾಡುತ್ತದೆ" ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ.
ಮುಂದಿನ ಎರಡು ಪಂದ್ಯಗಳಲ್ಲಿ ಬ್ರಂಟ್ ಅನುಪಸ್ಥಿತಿಯಲ್ಲಿ ಉಪನಾಯಕಿ ಚಾರ್ಲಿ ಡೀನ್ ತಂಡವನ್ನು ಹಂಗಾಮಿ ನಾಯಕಿಯಾಗಿ ಮುನ್ನಡೆಸಲಿದ್ದಾರೆ. ನ್ಯಾಟ್ ಬದಲಿಗೆ ಸೋಫಿಯಾ ಡಂಕ್ಲಿ ಈಗ ತಂಡಕ್ಕೆ ಮರಳುವುದು ಬಹುತೇಕ ಖಚಿತ. ಡಂಕ್ಲಿ ಟಿ20ಐಗಳಲ್ಲಿ ಆರಂಭಿಕ ಆಟಗಾರ್ತಿಯಾಗಿ ಬ್ಯಾಟಿಂಗ್ ಮಾಡಿರುವುದರಿಂದ, ಅವರ ಸೇರ್ಪಡೆಯಲ್ಲಿ ಸಣ್ಣ ಬದಲಾವಣೆಗಳಾಗಬಹುದು. ಜೋನ್ಸ್ ಅಥವಾ ಆಲಿಸ್ ಕ್ಯಾಪ್ಸಿ ಅವರಲ್ಲಿ ಒಬ್ಬರು ಮೂರನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯಿದೆ.
ಟಿ20 ವಿಶ್ವಕಪ್‌ನಲ್ಲಿ ವಿಶೇಷ ದಾಖಲೆ ಬರೆದ ಶಫಾಲಿ ವರ್ಮಾ, ಸ್ಮೃತಿ ಮಂಧಾನ
ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡ
ಲಾರೆನ್ ಬೆಲ್, ಆಲಿಸ್ ಕ್ಯಾಪ್ಸೆ, ಟಿಲ್ಲಿ ಕಾರ್ಟೀನ್-ಕೋಲ್ಮನ್, ಚಾರ್ಲಿ ಡೀನ್, ಸೋಫಿಯಾ ಡಂಕ್ಲೆ, ಸೋಫಿ ಎಕ್ಲೆಸ್ಟೋನ್, ಲಾರೆನ್ ಫೈಲರ್, ಡ್ಯಾನಿ ಗಿಬ್ಸನ್, ಆಮಿ ಜೋನ್ಸ್, ಫ್ರೇಯಾ ಕೆಂಪ್, ಹೀದರ್ ನೈಟ್, ಲಿನ್ಸೆ ಸ್ಮಿತ್, ಇಸ್ಸಿ ವಾಂಗ್, ಡ್ಯಾನಿ ವ್ಯಾಟ್-ಹಾಡ್ಜ್, ನ್ಯಾಟ್ ಸಿವರ್-ಬ್ರಂಟ್.