ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WTC final: 50 ವರ್ಷದ ವಿಶ್ವಕಪ್‌ ಫೈನಲ್‌ ದಾಖಲೆ ಮುರಿದ ಸ್ಟಾರ್ಕ್‌-ಹ್ಯಾಜಲ್‌ವುಡ್‌

ಸ್ಟಾರ್ಕ್‌ ಅಜೇಯ ಬ್ಯಾಟಿಂಗ್‌ ನಡೆಸಿ 58 ರನ್‌ ಗಳಿಸಿದರು. ಬುಧವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಆಸ್ಟ್ರೇಲಿಯಾ, ಮೊದಲ ಇನಿಂಗ್ಸ್‌ನಲ್ಲಿ 212 ರನ್ ಗಳಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಆಫ್ರಿಕಾ ಪಡೆ 138 ರನ್‌ ಗಳಿಸುವಷ್ಟರಲ್ಲೇ ಸರ್ವಪತನ ಕಂಡಿತ್ತು. ದ್ವಿತೀಯ ಇನಿಂಗ್ಸ್‌ನಲ್ಲಿ ಆಸೀಸ್‌ 207 ರನ್‌ಗೆ ಆಲೌಟ್‌ ಆಯಿತು.

50 ವರ್ಷದ ವಿಶ್ವಕಪ್‌ ಫೈನಲ್‌ ದಾಖಲೆ ಮುರಿದ ಸ್ಟಾರ್ಕ್‌-ಹ್ಯಾಜಲ್‌ವುಡ್‌

Profile Abhilash BC Jun 13, 2025 8:53 PM

ಲಂಡನ್‌: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌(WTC fina) ಪಂದ್ಯದಲ್ಲಿ ಆಸ್ಟ್ರೇಲಿಯಾದ ವೇಗಿಗಳಾದ ಮಿಚೆಲ್‌ ಸ್ಟಾರ್ಕ್‌(Mitchell Starc) ಮತ್ತು ಜೋಶ್‌ ಹ್ಯಾಜಲ್‌ವುಡ್‌(Josh Hazlewood) 10ನೇ ವಿಕೆಟ್‌ಗೆ 59 ರನ್‌ ಜತೆಯಾಟ ನಡೆಸುವ ಮೂಲಕ ಬರೋಬ್ಬರಿ 50 ವರ್ಷದ ದಾಖಲೆಯೊಂದನ್ನು ಮುರಿದು ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.

ಲಾರ್ಡ್ಸ್‌ ಮೈದಾನದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಎದುರಿನ ಈ ಪಂದ್ಯದ ದ್ವಿತೀಯ ಇನಿಂಗ್ಸ್‌ನ ಮೂರನೇ ದಿನದಾಟವಾದ ಶುಕ್ರವಾರ ಮಿಚೆಲ್‌ ಸ್ಟಾರ್ಕ್‌ ಮತ್ತು ಜೋಶ್‌ ಹ್ಯಾಜಲ್‌ವುಡ್‌ 10ನೇ ವಿಕೆಟ್‌ಗೆ 59 ರನ್‌ ಜತೆಯಾಟ ನಡೆಸುವ ಐಸಿಸಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅತ್ಯಧಿಕ ಜತೆಯಾಟ ನಡೆಸಿದ ಜೋಡಿ ಎನಿಸಿತು. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾದವರೇ ಆದ ಡೆನ್ನಿಸ್ ಲಿಲ್ಲಿ, ಜೆಫ್ ಥಾಮ್ಸನ್ ಹೆಸರಿನಲ್ಲಿತ್ತು. ಈ ಜೋಡಿ 1975ರಲ್ಲಿ ಇದೇ ಮೈದಾನದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ವಿಂಡಿಸ್‌ ವಿರುದ್ಧ 41 ರನ್‌ ಜತೆಯಾಟ ನಡೆಸಿತ್ತು.

ಸ್ಟಾರ್ಕ್‌ ಅಜೇಯ ಬ್ಯಾಟಿಂಗ್‌ ನಡೆಸಿ 58 ರನ್‌ ಗಳಿಸಿದರು. ಬುಧವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಆಸ್ಟ್ರೇಲಿಯಾ, ಮೊದಲ ಇನಿಂಗ್ಸ್‌ನಲ್ಲಿ 212 ರನ್ ಗಳಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಆಫ್ರಿಕಾ ಪಡೆ 138 ರನ್‌ ಗಳಿಸುವಷ್ಟರಲ್ಲೇ ಸರ್ವಪತನ ಕಂಡಿತ್ತು. ದ್ವಿತೀಯ ಇನಿಂಗ್ಸ್‌ನಲ್ಲಿ ಆಸೀಸ್‌ 207 ರನ್‌ಗೆ ಆಲೌಟ್‌ ಆಯಿತು.

ಐಸಿಸಿಯ ಫೈನಲ್‌ನಲ್ಲಿ ಟಾಪ್ 10 ವಿಕೆಟ್‌ ಜತೆಯಾಟ

ಮಿಚೆಲ್ ಸ್ಟಾರ್ಕ್-ಜೋಶ್ ಹ್ಯಾಜಲ್‌ವುಡ್ (ಆಸ್ಟ್ರೇಲಿಯಾ); 59 ರನ್‌, 2025 ರಲ್ಲಿ ಲಾರ್ಡ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್

ಡೆನ್ನಿಸ್ ಲಿಲ್ಲಿ- ಜೆಫ್ ಥಾಮ್ಸನ್ (ಆಸ್ಟ್ರೇಲಿಯಾ);41 ರನ್‌, 1975 ರಲ್ಲಿ ಲಾರ್ಡ್ಸ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ

ಸೈಯದ್ ಕಿರ್ಮಾನಿ-ಬಲ್ವಿಂದರ್ ಸಂಧು (ಭಾರತ); 22 ರನ್‌, 1983 ರಲ್ಲಿ ಲಾರ್ಡ್ಸ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ

ರಿಚರ್ಡ್ ಇಲಿಂಗ್‌ವರ್ತ್-ಡೆರೆಕ್ ಪ್ರಿಂಗಲ್ (ಇಂಗ್ಲೆಂಡ್); 19ರನ್‌, 1992 ರಲ್ಲಿ ಮೆಲ್ಬೋರ್ನ್‌ನಲ್ಲಿ ಪಾಕಿಸ್ತಾನ ವಿರುದ್ಧ ಏಕದಿನ

ಟ್ರೆಂಟ್ ಬೌಲ್ಟ್, ಟಿಮ್ ಸೌಥಿ (ನ್ಯೂಜಿಲೆಂಡ್)15 ರನ್‌, 2021 ರಲ್ಲಿ ಸೌತಾಂಪ್ಟನ್‌ನಲ್ಲಿ ಭಾರತ ವಿರುದ್ಧ ಟೆಸ್ಟ್

ಇದನ್ನೂ ಓದಿ Tendulkar-Anderson Trophy: ಭಾರತ-ಇಂಗ್ಲೆಂಡ್‌ ಟೆಸ್ಟ್‌ ಸರಣಿಗೆ 'ತೆಂಡೂಲ್ಕರ್‌-ಆ್ಯಂಡರ್ಸನ್‌' ಹೆಸರು!