ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಫ್ರಾನ್ಸ್‌ ಪಂದ್ಯಕ್ಕೆ ಮೆಸ್ಸಿಯ ಜೆರ್ಸಿ ಧರಿಸಿ ಬಂದ ಯಶಸ್ವಿ ಜೈಸ್ವಾಲ್‌

Yashasvi Jaiswal: 2 ಬಾರಿ ಚಾಂಪಿಯನ್ ಫ್ರಾನ್ಸ್ ತಂಡ ಸತತ 4ನೇ ಹಾಗೂ ಒಟ್ಟಾರೆ 11ನೇ ಬಾರಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. 2018ರಲ್ಲಿ ಚಾಂಪಿಯನ್‌ ಆಗಿದ್ದ ತಂಡ ಕಳೆದ ಬಾರಿ ಫೈನಲ್‌ನಲ್ಲಿ ಸೋತಿತ್ತು. ಈ ಬಾರಿಯೂ ಫೈನಲ್‌ ಪ್ರವೇಶಿಸುವ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿಕೊಂಡಿದೆ.

ಫ್ರಾನ್ಸ್‌ ಪಂದ್ಯಕ್ಕೆ ಮೆಸ್ಸಿಯ ಜೆರ್ಸಿ ಧರಿಸಿ ಬಂದ ಯಶಸ್ವಿ ಜೈಸ್ವಾಲ್‌

Yashasvi Jaiswal -

Abhilash BC
Abhilash BC Jul 2, 2026 9:32 PM

ನ್ಯೂಜೆರ್ಸಿ, ಜು.2: ಭಾರತದ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್(Yashasvi Jaiswal) ಸದ್ಯ ಕ್ರಿಕೆಟ್‌ನಿಂದ ದೂರವಿದ್ದು, ಫುಟ್ಬಾಲ್ ಆಟವನ್ನು ಆನಂದಿಸುತ್ತಿದ್ದಾರೆ. ಫ್ರಾನ್ಸ್ ಮತ್ತು ಸ್ವೀಡನ್ ನಡುವಿನ FIFA ವಿಶ್ವಕಪ್ 2026 ಪಂದ್ಯವನ್ನು ವೀಕ್ಷಿಸಲು ಅವರು ಯುನೈಟೆಡ್ ಸ್ಟೇಟ್ಸ್‌ನ ನ್ಯೂಯಾರ್ಕ್ ನ್ಯೂಜೆರ್ಸಿ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದಾರೆ. ವಿಶೇಷ ಎಂದರೆ ಜೈಸ್ವಾಲ್‌ ಈ ಪಂದ್ಯವನ್ನು ವೀಕ್ಷಿಸಲು ಸ್ಟಾರ್ ಆಟಗಾರ ಅರ್ಜೆಂಟೀನಾದ ಐಕಾನ್ ಲಿಯೋನೆಲ್ ಮೆಸ್ಸಿಯ ಜೆರ್ಸಿಯನ್ನು ಧರಿಸಿದ್ದರು.

ಪಂದ್ಯದಲ್ಲಿ ಕೈಲಿಯನ್ ಎಂಬಪ್ಪೆ ಎರಡು ಗೋಲು ಗಳಿಸಿ ಗೆಲುವಿನ ಹೀರೋ ಎನಿಸಿದರು. ಸ್ವೀಡನ್ ತಂಡವನ್ನು 3-0 ಗೋಲುಗಳಿಂದ ಸೋಲಿಸಿತು. ಮುಂದಿನ 16ರ ಸುತ್ತಿನ ಪಂದ್ಯವನ್ನು ಪರಾಗ್ವೆ ವಿರುದ್ಧ ಆಡಲಿದೆ.



2 ಬಾರಿ ಚಾಂಪಿಯನ್ ಫ್ರಾನ್ಸ್ ತಂಡ ಸತತ 4ನೇ ಹಾಗೂ ಒಟ್ಟಾರೆ 11ನೇ ಬಾರಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. 2018ರಲ್ಲಿ ಚಾಂಪಿಯನ್‌ ಆಗಿದ್ದ ತಂಡ ಕಳೆದ ಬಾರಿ ಫೈನಲ್‌ನಲ್ಲಿ ಸೋತಿತ್ತು. ಈ ಬಾರಿಯೂ ಫೈನಲ್‌ ಪ್ರವೇಶಿಸುವ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿಕೊಂಡಿದೆ.

ಭಾರತ-ಇಂಗ್ಲೆಂಡ್‌ ನಡುವಣ 2ನೇ ಟಿ20 ಪಂದ್ಯ ಯಾವಾಗ?

27 ವರ್ಷದ ಎಂಬಾಪೆ ಈ ವಿಶ್ವಕಪ್‌ನಲ್ಲಿ 6ನೇ ಗೋಲು ದಾಖಲಿಸಿದ್ದಾರೆ. ಒಟ್ಟಾರೆ ಫಿಫಾ ವಿಶ್ವಕಪ್‌ನಲ್ಲಿದು 18ನೇ ಗೋಲು. ಈ ಮೂಲಕ ವಿಶ್ವಕಪ್‌ನ ಗರಿಷ್ಠ ಗೋಲ್‌ ಸ್ಕೋರರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಅವರು 3 ವಿಶ್ವಕಪ್‌ನ, 18 ಪಂದ್ಯಗಳಲ್ಲೇ ಈ ಸಾಧನೆ ಮಾಡಿದ್ದಾರೆ. 6ನೇ ವಿಶ್ವಕಪ್‌ ಆಡುತ್ತಿರುವ ಅರ್ಜೆಂಟೀನಾದ ಲಿಯೋನಲ್‌ ಮೆಸ್ಸಿ 29 ಪಂದ್ಯಗಳಲ್ಲಿ 19 ಗೋಲು ದಾಖಲಿಸಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಕಳೆದ ಬಾರಿ ಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ 3-3 ಗೋಲು ದಾಖಲಿಸಿದ್ದ ಫ್ರಾನ್ಸ್‌, ಈ ಬಾರಿ ಸೆನೆಗಲ್‌ ವಿರುದ್ಧ 3-1, ಇರಾಕ್‌ ವಿರುದ್ಧ 3-0, ನಾರ್ವೆ ವಿರುದ್ಧ 4-1, ಸ್ವೀಡನ್‌ ವಿರುದ್ಧ 3-0 ಗೋಲು ದಾಖಲಿಸಿದೆ.