ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

T20 World Cup ಗೆದ್ದ ಬಳಿಕ ಗೌತಮ್‌ ಗಂಭೀರ್‌ ಹೇಳಿದ್ದ ಮಾತನ್ನು ರಿವೀಲ್‌ ಮಾಡಿದ ಸೂರ್ಯಕುಮಾರ್‌ ಯಾದವ್‌!

T20 World Cup final: ಭಾರತ ತಂಡ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡವನ್ನು 96 ರನ್‌ಗಳಿಂದ ಮಣಿಸಿತ್ತು. ಆ ಮೂಲಕ ಮೂರನೇ ಬಾರಿ ಟಿ20 ವಿಶ್ವಕಪ್‌ ಅನ್ನು ಮುಡಿಗೇರಿಸಿಕೊಂಡಿತ್ತು. ಫೈನಲ್‌ ಪಂದ್ಯದ ಬಳಿಕ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌, ಡ್ರೆಸ್ಸಿಂಗ್‌ ರೂಂನಲ್ಲಿ ಏನು ಹೇಳಿದ್ದರು ಎಂಬುದನ್ನು ಇದೀಗ ನಾಯಕ ಸೂರ್ಯಕುಮಾರ್‌ ಯಾದವ್‌ ಬಹಿರಂಗಪಡಿಸಿದ್ದಾರೆ.

ಟಿ20 ವಿಶ್ವಕಪ್‌ ಗೆದ್ದ ಬಳಿಕ ಗಂಭೀರ್‌ ಹೇಳಿದ್ದ ಮಾತನ್ನು ತಿಳಿಸಿದ ಸೂರ್ಯ!

ಗೌತಮ್‌ ಗಂಭೀರ್‌ ಮಾತನ್ನು ರಿವೀಲ್‌ ಮಾಡಿದ ಸೂರ್ಯಕುಮಾರ್‌. -

Profile
Ramesh Kote Mar 12, 2026 7:41 PM

ನವದೆಹಲಿ: ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಗೆದ್ದ ಬಳಿಕ ಡ್ರೆಸ್ಸಿಂಗ್ ರೂಮ್‌ನಲ್ಲಿ ನಡೆದಿದ್ದ ಕೊನೆಯ ಭಾಷಣದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಮಾರ್ಚ್‌ 8 ರಂದು ಅಹಮದಾಬಾದ್‌ನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಭಾರತ ತಂಡ, ನ್ಯೂಜಿಲೆಂಡ್‌ ತಂಡವನ್ನು 96 ರನ್‌ಗಳಿಂದ ಸೋಲಿಸಿ ಮೂರನೇ ಬಾರಿ ದಾಖಲೆಯ ಟಿ20 ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು. ಈ ಹಿಂದೆ 2024ರಲ್ಲಿ ರಾಹುಲ್‌ ದ್ರಾವಿಡ್‌ ಹಾಗೂ ರೋಹಿತ್‌ ಶರ್ಮಾ ಅವರ ಪಾಲುದಾರಿಕೆಯಲ್ಲಿ ಭಾರತ ತಂಡ (India) ಎರಡನೇ ಟಿ20 ವಿಶ್ವಕಪ್‌ ಅನ್ನು ಗೆದ್ದಿತ್ತು.

ಇದೀಗ ಗೌತಮ್‌ ಗಂಭೀರ್‌ ಹಾಗೂ ಸೂರ್ಯಕುಮಾರ್‌ ಯಾದವ್ ಪಾಲುದಾರಿಕೆಯಲ್ಲಿ ಭಾರತ ತಂಡ ಟಿ20ಐ ಸ್ವರೂಪದಲ್ಲಿ ಇನ್ನೂ ಯಾವುದೇ ದ್ವಿಪಕ್ಷೀಯ ಸರಣಿಯನ್ನು ಸೋತಿಲ್ಲ. ಇದರ ಜೊತೆಗೆ 2025ರ ಏಷ್ಯಾ ಕಪ್ ಕಿರೀಟವನ್ನೂ ಭಾರತ ತನ್ನದಾಗಿಸಿಕೊಂಡಿದೆ. ಆಟಗಾರರು ವೈಯಕ್ತಿಕ ಸಾಧನೆಗಳಿಗಿಂತ ತಂಡದ ಯಶಸ್ಸಿನತ್ತ ಗಮನಹರಿಸಬೇಕು ಎಂಬ ಸಂದೇಶವನ್ನು ಅವರು ಪದೇ-ಪದೆ ನೀಡುತ್ತಿದ್ದು, ಗಂಭೀರ್ ಅವರ ಅಂತಿಮ ಭಾಷಣದಲ್ಲಿಯೂ ಇದೇ ಮನೋಭಾವ ಸ್ಪಷ್ಟವಾಗಿತ್ತು ಎಂದು ಸೂರ್ಯಕುಮಾರ್ ಹೇಳಿದ್ದಾರೆ.

ಟಿ20 ವಿಶ್ವಕಪ್‌ ಗೆದ್ದಾಯ್ತು, ಭಾರತ ತಂಡದ ಮುಂದಿನ ಗುರಿ ಏನೆಂದು ರಿವೀಲ್‌ ಮಾಡಿದ ಗೌತಮ್‌ ಗಂಭೀರ್‌!

ಟ್ರೋಫಿಗಳು ಜನರ ಮನಸಿನಲ್ಲಿ ಸದಾ ಉಳಿಯುತ್ತವೆ: ಸೂರ್ಯ

ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಭಾರತ ಟಿ20ಐ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಡ್ರೆಸ್ಸಿಂಗ್ ರೂಮ್‌ನಲ್ಲಿ ಗಂಭೀರ್ ಮಾಡಿದ ಅಂತಿಮ ಭಾಷಣದ ಬಗ್ಗೆ ವಿವರಿಸಿದ್ದಾರೆ. ಗಂಭೀರ್ ಟ್ರೋಫಿಯನ್ನು ಆಟಗಾರರ ಮುಂದೆ ಇಟ್ಟು, ಅದು ತಂಡಕ್ಕೆ ಅತ್ಯಂತ ಮಹತ್ವದ್ದಾದದ್ದು ಎಂದು ಹೇಳಿದರು. ದಿನದ ಕೊನೆಯಲ್ಲಿ ತಂಡವಾಗಿ ಗೆದ್ದ ಟ್ರೋಫಿಗಳೇ ಅತ್ಯಂತ ಮುಖ್ಯವಾಗುತ್ತವೆ ಎಂದು ಭಾರತೀಯ ಕೋಚ್ ತಂಡಕ್ಕೆ ತಿಳಿಸಿದ್ದರು. ‌

ಅಕ್ಷರ್‌ ಪಟೇಲ್‌ಗೆ ಕ್ಷಮೆಯಾಚಿಸಿದ ಸೂರ್ಯಕುಮಾರ್‌ ಯಾದವ್‌

“ಅದು ಗೌತಮ್‌ ಭಾಯ್‌ ಅವರ ಮಾತು. ಅವರು ಟ್ರೋಫಿಯನ್ನು ನಮ್ಮ ಮುಂದೆ ಇಟ್ಟು ಹೇಳಿದ್ದು—‘ನಮ್ಮ ಡ್ರೆಸ್ಸಿಂಗ್ ರೂಮ್‌ನಲ್ಲಿ ಅತ್ಯಂತ ಮುಖ್ಯವಾದದ್ದು ಇದೇ, ಬೇರೆ ಯಾವುದೂ ಅಲ್ಲ. ನೀವು ಎಷ್ಟು ರನ್ ಗಳಿಸಿದ್ದೀರೋ ಅದನ್ನು ಜನರು ನಂತರ ಮರೆತುಬಿಡುತ್ತಾರೆ. ಆದರೆ ಈ ಟ್ರೋಫಿಯನ್ನು ಮಾತ್ರ ಎಲ್ಲರೂ ಸದಾ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ತಂಡವಾಗಿ ನಾವು ಎಷ್ಟು ಚಾಂಪಿಯನ್‌ಷಿಪ್ ಗೆದ್ದಿದ್ದೇವೆ ಎಂಬುದರ ಆಧಾರದಲ್ಲೇ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ. ನೀವು 100 ದ್ವಿಪಕ್ಷೀಯ ಪಂದ್ಯಗಳನ್ನು ಗೆದ್ದರೂ ಅದನ್ನು ಯಾರೂ ನೆನಪಿಡುವುದಿಲ್ಲ. ಇದೇ ನಮ್ಮನ್ನು ಮುಂದಕ್ಕೆ ಮುನ್ನಡೆಸುವ ಪ್ರೇರಣೆ,’ ಎಂದು ಸೂರ್ಯಕುಮಾರ್ ಯಾದವ್‌ ರಿವೀಲ್‌ ಮಾಡಿದ್ದಾರೆ.

T20 World Cup: ʻಡ್ಯಾರಿಲ್‌ ಮಿಚೆಲ್‌ ಬಳಿ ಅರ್ಷದೀಪ್‌ ಸಿಂಗ್‌ ಕ್ಷಮೆ ಕೇಳುವ ಅಗತ್ಯವಿರಲಿಲ್ಲʼ-ಗೌತಮ್‌ ಗಂಭೀರ್‌ ಅಚ್ಚರಿ ಹೇಳಿಕೆ!

ಭಾರತ ತಂಡ ಗಂಭೀರ್ ಮುಖದಲ್ಲಿ ನಗು ತರುವಲ್ಲಿ ಯಶಸ್ವಿಯಾಯಿತೇ?

ಗೌತಮ್‌ ಗಂಭೀರ್ ಪಂದ್ಯಗಳ ವೇಳೆ ಸದಾ ಗಂಭೀರ ಸ್ವಭಾವದಲ್ಲಿ ಕಣ್ಣಿಗೆ ಕಾಣುತ್ತಾರೆ. ತಂಡದ ಪ್ರದರ್ಶನದ ಬಳಿಕ ಅವರು ನಕ್ಕರೇ? ಎಂದು ಸೂರ್ಯಕುಮಾರ್ ಯಾದವ್ ಅವರನ್ನು ಪ್ರಶ್ನಿಸಿದಾಗ, ಟೂರ್ನಿಯ ನಿರ್ಣಾಯಕ ಹಂತದಲ್ಲಿ ಕೋಚ್ ಸಂತೋಷವಾಗುವಂತೆ ನಮ್ಮ ತಂಡ ಆಟವಾಡಿತು ಎಂದು ಅವರು ಹೇಳಿದ್ದಾರೆ.

“ಮೊದಲ ನಾಲ್ಕು ಪಂದ್ಯಗಳಲ್ಲಿ ನಾವು ಅವರಿಗೆ ನಗುವ ಅವಕಾಶವೇ ನೀಡಲಿಲ್ಲ. ಆದರೆ ಅದರ ನಂತರ ಈ ತಂಡದ ಆಟವನ್ನು ನೋಡಿ ಅವರು ತುಂಬಾ ಸಂತೋಷಪಟ್ಟರು ಎಂದು ನನಗೆ ಅನಿಸುತ್ತದೆ. ಭಾರತದಲ್ಲಿ ಯಾವುದೇ ಟಿ20 ತಂಡ ಈ ರೀತಿಯಾಗಿ ಬ್ಯಾಟಿಂಗ್ ನಡೆಸಿಲ್ಲವೆಂದು ನನಗೆ ತೋರುತ್ತದೆ. 250, 256 ರನ್‌ಗಳನ್ನು ಕಲೆ ಹಾಕುವುದು ಹಾಗೂ ಗುರಿಗಳನ್ನು ಸುಲಭವಾಗಿ ಚೇಸ್ ಮಾಡುವುದು ಸುಲಭವಲ್ಲ. ಫೈನಲ್ ಪಂದ್ಯದ ಬಳಿಕ ಅವರು ತುಂಬಾ ನಕ್ಕಿದ್ದಾರೆ ಎಂದು ನಾನು ಭಾವಿಸುತ್ತೇನೆ,” ಎಂದು ಸೂರ್ಯಕುಮಾರ್ ಯಾದವ್‌ ತಿಳಿಸಿದ್ದಾರೆ.